ವಾವ್ಹ್..!ಧಾರವಾಡದ ಸೌಂದರ್ಯ ಹೆಚ್ಚಿಸಿದ ಗುಲ್‌ ಮೊಹರ್‌ ಹೂವುಗಳು; ಈ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

ಮುಂಗಾರು ಪೂರ್ವ ಮಳೆಯಾಗುವ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಬಹುತೇಕ ಗಿಡ-ಮರಗಳು ಹೂ ಬಿಡುತ್ತವೆ. ಆದರೆ, ಮೇ-ಫ್ಲವರ್ ಎಂದೇ ಹೆಸರಾದ ಗುಲ್‌ ಮೊಹರ್ ಮರದಲ್ಲಿ ಈ ತಿಂಗಳು ಮೈತುಂಬಾ ಹೂ ತುಂಬಿಕೊಂಡ ಸಂಭ್ರಮ ನೋಡುವುದು ಕಣ್ಣಿಗೆ ಹಬ್ಬ. ಬೇಸಿಗೆಯ ರಜೆಯ ಮಕ್ಕಳ ಆಟಕ್ಕೆ ಸಾಥ್‌ ನೀಡುವ ಗುಲ್ ಮೊಹರಿನ ಮೊಗ್ಗುಗಳು, ಹೂವಿನ ಕೇಸರದ ಭಾಗಗಳು ದೊಡ್ಡವರಲ್ಲೂ ಬಾಲ್ಯದ ನೆನಪನ್ನು ತರುತ್ತಿವೆ. ಅದರಂತೆ ಧಾರವಾಡದ ಅಂಧವನ್ನು ಹೆಚ್ಚಿಸುವೆ.

| Updated By: ಕಿರಣ್ ಹನುಮಂತ್​ ಮಾದಾರ್

Updated on:May 24, 2024 | 3:41 PM

ವಿದ್ಯಾಕಾಶೀ, ಸಸ್ಯಕಾಶಿ ಎಂದು ಕರೆಯಿಸಿಕೊಳ್ಳೋ ಧಾರವಾಡದಲ್ಲಿ ಗುಲ್‌ ಮೊಹರ್‌ ಗಿಡಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಕರ್ನಾಟಕ ವಿಶ್ವವಿದ್ಯಾಲಯ ಆವರಣ, ಕೋರ್ಟ್ ವೃತ್ತ, ಕರ್ನಾಟಕ ಕಾಲೇಜಿನಿಂದ ಹಳಿಯಾಳ ನಾಕಾ ಮಾರ್ಗವಾಗಿ ಜರ್ಮನ್‌ ಆಸ್ಪತ್ರೆ, ಕೆ.ಸಿ. ಪಾರ್ಕ್​, ಆಜಾದ ಪಾರ್ಕ್​, ಜಿಲ್ಲಾಧಿಕಾರಿ ಕಚೇರಿ ಆವರಣ, ಮಾಳಮಡ್ಡಿ, ಕಲ್ಯಾಣನಗರ ಸೇರಿದಂತೆ ಇಡೀ ಧಾರವಾಡದಲ್ಲಿ ಈಗ ಗುಲ್‌ ಮೋಹರ್‌ ಹೂವಿನದ್ದೇ ಆಕರ್ಷಣೆ.

1 / 6
ಮೇ ತಿಂಗಳಲ್ಲಿ ಅರಳುವ ಈ ಹೂಗಳ ಆಡಂಬರ ನೊಡಲು ಎರಡು ಕಣ್ಣುಗಳು ಸಾಲದು. ಕಡು ಕೆಂಪು ಬಣ್ಣದ ಹೂಗಳನ್ನು ಮರವು ಮೈಯೆಲ್ಲಾ ಹೊದ್ದುಕೊಂಡು ಸಂಭ್ರಮಿಸುತ್ತಿವೆ. ಮರದಲ್ಲಿ ನಾನಾ ಚಿತ್ತಾಕರ್ಷಕ ಹೂ ಗೊಂಚಲುಗಳು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂ ಹಾಸಿಗೆಯಂತೆ ಕಂಗೊಳಿಸುತ್ತಿವೆ. ಕೆಲವು ಆಕರ್ಷಣೆ ಜತೆಗೆ ಸುಗಂಧವನ್ನೂ ಬೀರುವುದರಿಂದ ಇನ್ನಷ್ಟು ಸವಿಯಬೇಕೆನಿಸುತ್ತದೆ.

2 / 6
ಲೆಗ್ಯೂಮ್ ಗುಂಪಿಗೆ ಸೇರಿದ ಗುಲ್ ಮೊಹರ್ ಸಸ್ಯವು ಫ್ಯಾಬೇಸಿಯೆ ಕುಟುಂಬದ ಸದಸ್ಯ ಎಂಬ ಮಾಹಿತಿ ಇದೆ. ಹಾಗಾಗಿ ಇದರಿಂದಲೂ ನೆಲಕ್ಕೆ ಸಾರಜನಕದ ಲಭ್ಯತೆಯಿದ್ದು, ಮಣ್ಣಿನ ರಕ್ಷಣೆಗೆ ಇದು ಸಹಕಾರಿಯಾಗಿದೆ.

3 / 6
ಸಸ್ಯ ತಜ್ಞರು ಹೇಳುವಂತೆ ಗುಲ್‍ ಮೊಹರ್‌ ಪರ್ಷಿಯನ್‍ ಮೂಲದ ಹೆಸರು. ಗುಲ್ ಎಂದರೆ ಗುಲಾಬಿ ಹೂ ಎಂದೂ, ಮೊಹರ್ ಎಂದರೆ ಗುರುತು. ಹಾಗಾಗಿ ಗುಲಾಬಿಯ ಗುರುತನ್ನು ಹೊಂದಿರುವ ಎಂಬುದಾಗಿದೆ.

4 / 6
ಈ ಮರದ ಮತ್ತೊಂದು ಸೊಗಸು ಅದರ ಕಾಯಿಗಳು. ಮೊಗ್ಗಾಗಿದ್ದಾಗ ಹಸಿರು ಬಣ್ಣದ ಪುಟ್ಟ-ಪುಟ್ಟ ಕಾಯಿಗಳಂತೆ ಕಂಡರೂ ಅರಳಿದಾಗ ಅದರೊಳಗಿನ ದಟ್ಟ ಕೆಂಪು ಬಣ್ಣದ ದಳಗಳು, ಕೇಸರದ ಭಾಗಗಳು ಹೊರ ಬೀಳುತ್ತವೆ.

5 / 6
ಮೇ ತಿಂಗಳಲ್ಲಿ ಬರೀ ಗುಲ್‌ ಮೊಹರ್‌ ಅಲ್ಲದೇ ಫುಟಬಾಲ್ ಲಿಲ್ಲಿ ಎಂಬ ಹೂ ಸಹ ಗಮನ ಸೆಳೆಯುತ್ತಿದೆ. ಜೊತೆಗೆ ಸ್ವದೇಶಿ, ವಿದೇಶಿಯ ಕೆಲವು ಕೆಂಪು, ಹಳದಿ ಬಣ್ಣದ ಹೂ ಬಿಡುಗಳು ಸಹ ಧಾರವಾಡದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೂವು ಬಿಟ್ಟ ನಂತರ ಎರಡರಿಂದ ಮೂರು ತಿಂಗಳ ಕಾಲವೂ ತನ್ನ ಸೊಬಗನ್ನು ಬೀರುತ್ತವೆ. ಒಟ್ಟಾರೆ ಮೇ ತಿಂಗಳಲ್ಲಿ ಬಿಡುವ ಹೂಗಳನ್ನು ಧಾರವಾಡದಲ್ಲಿ ನೋಡುವುದು ಒಂದು ಸೌಭಾಗ್ಯವೇ ಸರಿ.

6 / 6

Published On - 3:34 pm, Fri, 24 May 24

Follow us
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ

ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ

ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು

‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ

ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್

ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ

ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!

ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!

ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್

ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ