AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇವ್ ಪಾರ್ಟಿ ಕೇಸ್: ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ರಾಜಕಾರಣಿಗಳಿಂದ ಒತ್ತಡ

ತೆಲುಗು ನಟಿ ಹೇಮಾಗೆ ನೋಟಿಸ್ ನೀಡಿದ ಬೆನ್ನಲ್ಲೇ ಆಂಧ್ರ ಪ್ರದೇಶದ ರಾಜಕಾರಣಿಗಳು ಸಿಸಿಬಿಗೆ (CCB) ನಿರಂತರ ಕರೆ ಮಾಡಿ ಹೇಮಾ ಬಂಧನ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ. ರೇವ್ ಪಾರ್ಟಿಯಲ್ಲಿ ಆಂಧ್ರ ಪ್ರದೇಶ ಚುನಾವಣೆ ಹಾಗೂ ಲೋಕ ಸಭಾ ಚುನಾವಣೆ, ಐಪಿಲ್ ಹಾಗು ಇತರೆ ಕ್ರೀಡೆಯ ಬಗ್ಗೆ ಬೆಟ್ಟಿಂಗ್ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.

ರೇವ್ ಪಾರ್ಟಿ ಕೇಸ್: ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ರಾಜಕಾರಣಿಗಳಿಂದ ಒತ್ತಡ
ಹೇಮಾ
ರಾಚಪ್ಪಾಜಿ ನಾಯ್ಕ್
| Edited By: |

Updated on: May 26, 2024 | 9:31 AM

Share

ಬೆಂಗಳೂರು, ಮೇ.26: ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ (Rave Party) ಕೇಸ್​ಗೆ ಸಂಬಂಧಿಸಿ ಮತ್ತಷ್ಟು ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿವೆ. ತೆಲುಗು ನಟಿ ಹೇಮಾಗೆ (Actress Hema) ನೋಟಿಸ್ ನೀಡಿದ ಬೆನ್ನಲ್ಲೇ ಆಂಧ್ರ ಪ್ರದೇಶದ ರಾಜಕಾರಣಿಗಳು ಸಿಸಿಬಿಗೆ (CCB) ನಿರಂತರ ಕರೆ ಮಾಡಿ ಹೇಮಾ ಬಂಧನ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ. ರೇವ್‌ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ ಹೆಚ್ಚಿನ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಹೀಗಾಗಿ ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ಒತ್ತಡ ಹೆಚ್ಚಾಗಿದೆ.

ಇನ್ನು ಮತ್ತೊಂದೆಡೆ ಸಿಸಿಬಿ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಸತ್ಯ ಬಯಲಾಗುತ್ತಿದೆ. ಇದು ಕೇವಲ ಡ್ರಗ್ಸ್ ಪಾರ್ಟಿ ಮಾತ್ರವಲ್ಲ‌. ರೇವ್ ಪಾರ್ಟಿಯ ಮತ್ತಷ್ಟು ಕರಾಳ ಮುಖ ಬಯಲಾಗುತ್ತಿದೆ. ಬಂಧಿತರ ಖಾತೆಯಲ್ಲಿನ 86 ಲಕ್ಷ ಹಣ ಫ್ರೀಜ್ ಮಾಡಲಾಗಿದೆ. ಒಟ್ಟು ಏಳು ಬ್ಯಾಂಕ್ ಖಾತೆಗಳಲ್ಲಿನ 86 ಲಕ್ಷ ಹಣ‌ವನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಅಲ್ಲದೆ ಬೆಟ್ಟಿಂಗ್ ಮತ್ತು ಸೆಕ್ಸ್ ದಂಧೆ ಕೂಡ ನಡೆಯುತ್ತಿತ್ತು.

ಆಂಧ್ರ ಪ್ರದೇಶ ಚುನಾವಣೆ ಹಾಗೂ ಲೋಕ ಸಭಾ ಚುನಾವಣೆ, ಐಪಿಲ್ ಹಾಗು ಇತರೆ ಕ್ರೀಡೆಯ ಬಗ್ಗೆ ಬೆಟ್ಟಿಂಗ್ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆಯೂ ಪೊಲೀಸರಿಂದ ತನಿಖೆ ಮುಂದುವರೆದಿದೆ. ಪೆಡ್ಲರ್ ಸಿದ್ದಿಕ್ ಮತ್ತು ನಾಗಬಾಬು ಬಳಿ ಡ್ರಗ್ಸ್ ಖರೀದಿ ಮಾಡಿರುವುದಕ್ಕೆ ಸಾಕ್ಷ್ಯ ಪತ್ತೆಯಾಗಿದೆ. ಕೆಲವು ಪೆಡ್ಲರ್​ಗಳಿಗೆ ಸಂದೇಶ ಕಳಿಸಿ ಡ್ರಗ್ಸ್ ಖರೀದಿ ಮಾಡಲಾಗಿತ್ತು. ಡ್ರಗ್ಸ್ ಮಾರಾಟ ಮಾಡಿರುವ ಪೆಡ್ಲರ್​ಗಾಗಿಯೂ ಸಿಸಿಬಿ ಹುಡುಕಾಟ ನಡೆಸುತ್ತಿದೆ.

ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್, ಗಾಂಜಾ, ಹೈಡ್ರೋ ಗಾಂಜಾ, ಎಂ, ಎಕ್ಸ್ಟೆಸಿ ಪಿಲ್ಸ್, ಚಸರ್ ಹೀಗೆ ಹಲವಾರು ಮಾದರಿಯ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಎಲ್ಲಾ ಮಾದರಿಯ ಡ್ರಗ್ಸ್ ಅನ್ನು ಹೇಗೆ ಪಾರ್ಟಿಗೆ ತಂದಿದ್ರು ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ರೇವ್ ಪಾರ್ಟಿ: ನಟಿ ಹೇಮಾ ಬೆಂಬಲಕ್ಕೆ ನಟ ಮಂಚು ವಿಷ್ಣು ಮತ್ತು ಕಲಾವಿದರ ಸಂಘ

ಬೆಂಗಳೂರಿನಲ್ಲಿ ನಡೆದ ರೇವ್​ ಪಾರ್ಟಿಗೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಲಾಗಿತ್ತಂತೆ. ಹೈದರಾಬಾದ್​ನ ವಾಸು ಬರ್ತ್​ಡೇ ಹೆಸರಲ್ಲಿ ನಡೆದ ಪಾರ್ಟಿಯಲ್ಲಿ 100ರಿಂದ 150ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಭಾಗಿಯಾಗಿದ್ರು ಅಂತಾ FIRನಲ್ಲಿ ದಾಖಲಿಸಲಾಗಿದೆ. ಸದ್ಯ 101 ಜನರ ಬ್ಲಡ್ ಸ್ಯಾಂಪಲ್ ಪಡೆದಿರುವ ಸಿಸಿಬಿ ಪೊಲೀಸರು ರಿಪೋರ್ಟ್​ಗಾಗಿ ಕಾಯುತ್ತಿದ್ದಾರೆ. ಇನ್ನು ಪಾರ್ಟಿಯಲ್ಲಿಯೇ ಡ್ರಗ್ಸ್ ಮರಾಟ ಮಾಡ್ತಿದ್ದ ಸಿದ್ದಿಕ್, ರಣ್ ದೀರ್, ರಾಜ್ ಭಾವ ಎಂಬುವವರನ್ನ ಬಂಧಿಸಲಾಗಿದೆ. ಸದ್ಯ ದಾಳಿ ವೇಳೆ ಪತ್ತೆಯಾದವರ ಬಿಟ್ಟು ಉಳಿದವರ ಮಾಹಿತಿ ಸಂಗ್ರಹಕ್ಕೆ ಸಿಸಿಬಿ ಮುಂದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ