ಇಂದು ರಾತ್ರಿ ಬೆಂಗಳೂರುಗೆ ಪ್ರಜ್ವಲ್ ರೇವಣ್ಣ; ವಶಕ್ಕೆ ಪಡೆಯಲು ಕೆಐಎಯಲ್ಲಿ ಬೀಡು ಬಿಟ್ಟಿರುವ ಎಸ್ಐಟಿ ಅಧಿಕಾರಿಗಳು!

ಇಂದು ರಾತ್ರಿ ಬೆಂಗಳೂರುಗೆ ಪ್ರಜ್ವಲ್ ರೇವಣ್ಣ; ವಶಕ್ಕೆ ಪಡೆಯಲು ಕೆಐಎಯಲ್ಲಿ ಬೀಡು ಬಿಟ್ಟಿರುವ ಎಸ್ಐಟಿ ಅಧಿಕಾರಿಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2024 | 7:06 PM

ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ವಿಮಾನ ಕೆಐಎನಲ್ಲಿ ಲ್ಯಾಂಡ್ ಆದಮೇಲೆ ಪ್ರಜ್ವಲ್ ರೇವಣ್ಣ ಇಮ್ಮಿಗ್ರೇಷನ್ ವಿಭಾಗಕ್ಕೆ ಬರುತ್ತಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಕೆಐಎ ಪೊಲೀಸರಿಗೆ ಒಪ್ಪಿಸುತ್ತಾರೆ. ಏರ್ಪೋರ್ಟ್ ಪೊಲೀಸರು ಸಂಸದನನ್ನು ಎಸ್ಐಟಿ ತಂಡಕ್ಕೆ ಒಪ್ಪಿಸಲಿದ್ದಾರೆ. ಅಲ್ಲಿಂದ ಅವರನ್ನು ನೇರವಾಗಿ ಎಸ್ಐಟಿ ಕಚೇರಿಗೆ ಕರೆತರಲಾಗುತ್ತದೆ ಮತ್ತು ಪ್ರಾಯಶಃ ನಾಳೆ ಬೆಳಗ್ಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು.

ಬೆಂಗಳೂರು: ಬಹುದಿನಗಳಿಂದ ಕಾಯುತ್ತಿದ್ದ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ ಮಾರಾಯ್ರೇ. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದ ಲೈಂಗಿಕ ಅಪರಾಧಗಳ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಇಂದು ಬೆಂಗಳೂರಿಗೆ ವಾಪಸ್ಸಾಗುವ ನಿರೀಕ್ಷೆಯಿದೆ. ಅವರು ಕೊನೆ ಕ್ಷಣದಲ್ಲಿ ಸ್ವದೇಶಕ್ಕೆ ಹಿಂತಿರುಗುವ ನಿರ್ಧಾರ ಬದಲಾಯಿಸುವ ಸಾಧ್ಯತೆ ಇರುವುದರಿಂದ ನಿರೀಕ್ಷೆ ಎಂದು ಹೇಳುತ್ತಿದ್ದೇವೆ. ದೇವನಹಳ್ಳಿಯ ಕೆಐಎನಲ್ಲಿ (Kempegowda International Airport) ಪ್ರಜ್ವಲ್ ನನ್ನು ವಶಕ್ಕೆ ಪಡೆಯಲು ಎಸ್ಐಟಿ ಅಧಿಕಾರಿಗಳು (SIT Sleuths) ಮತ್ತು ಪೊಲೀಸರು ಸನ್ನದ್ಧರಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇಲ್ಲೊಬ್ಬ ಪೊಲೀಸ್ ಅಧಿಕಾರಿಯೊಂದಿಗೆ ಸಮಾಲೋಚನೆ ನಡೆಸುತ್ತಿರುವ ಮಫ್ತಿಯಲ್ಲಿರುವವರೆಲ್ಲ ಪೊಲೀಸರು. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ವಿಮಾನ ಕೆಐಎನಲ್ಲಿ ಲ್ಯಾಂಡ್ ಆದಮೇಲೆ ಪ್ರಜ್ವಲ್ ರೇವಣ್ಣ ಇಮ್ಮಿಗ್ರೇಷನ್ ವಿಭಾಗಕ್ಕೆ ಬರುತ್ತಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಕೆಐಎ ಪೊಲೀಸರಿಗೆ ಒಪ್ಪಿಸುತ್ತಾರೆ. ಏರ್ಪೋರ್ಟ್ ಪೊಲೀಸರು ಸಂಸದನನ್ನು ಎಸ್ಐಟಿ ತಂಡಕ್ಕೆ ಒಪ್ಪಿಸಲಿದ್ದಾರೆ. ಅಲ್ಲಿಂದ ಅವರನ್ನು ನೇರವಾಗಿ ಎಸ್ಐಟಿ ಕಚೇರಿಗೆ ಕರೆತರಲಾಗುತ್ತದೆ ಮತ್ತು ಪ್ರಾಯಶಃ ನಾಳೆ ಬೆಳಗ್ಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Prajwal Revanna: ಪ್ರಜ್ವಲ್ ರೇವಣ್ಣ ಬಂಧನ ಫಿಕ್ಸ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಪರಮೇಶ್ವರ್