AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರಿ ಪ್ರಜ್ವಲ್ ರೇವಣ್ಣ ಒಬ್ಬ ಸ್ಯಾಡಿಸ್ಟ್, ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು: ಕೆ ನೀಲಾ, ಸಾಮಾಜಿಕ ಹೋರಾಟಗಾರ್ತಿ

ಅತ್ಯಾಚಾರಿ ಪ್ರಜ್ವಲ್ ರೇವಣ್ಣ ಒಬ್ಬ ಸ್ಯಾಡಿಸ್ಟ್, ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು: ಕೆ ನೀಲಾ, ಸಾಮಾಜಿಕ ಹೋರಾಟಗಾರ್ತಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2024 | 8:01 PM

Share

ವಿಡಿಯೋಗಳನ್ನು ಹರಿಬಿಟ್ಟರೆ ಮಹಿಳೆಯರ ಗತಿ ಏನಾದೀತು ಅಂತ ಯೋಚನೆ ಮಾಡದ ಜನ ಸಹ ಅಷ್ಟೇ ತಪ್ಪಿತಸ್ಥರು, ನೊಂದ ಮಹಿಳೆಯರಿಗಾಗಿ ಮಿಡಿಯದ ಸಿದ್ದರಾಮಯ್ಯ ಸರ್ಕಾರ ನಿಷ್ಪ್ರಯೋಜಕ ಮತ್ತು ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹ ದೋಷಿಗಳು ಎಂದು ನೀಲಾ ಎಲ್ಲರ ವಿರುದ್ಧ ಕಿಡಿ ಕಾರಿದರು.

ಹಾಸನ: ವಿವಿಧ ಸಂಘಟನೆ, ಸಂಸ್ಥೆಗಳ ಸದಸ್ಯರು ಇಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಣಿ ಲೈಂಗಿಕ ಅಪರಾಧಗಳ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಅಗ್ರಹಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಉತ್ತರ ಕರ್ನಾಟಕದ ಖ್ಯಾತ ಸಾಮಾಜಿಕ ಹೋರಾಟಗಾರ್ತಿ (social activist) ಕೆ ನೀಲಾ (K Neela) ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸೋಲಲಿ ಇಲ್ಲವೇ ಗೆಲ್ಲಲಿ ಆದರೆ ಹಾಸನದ ಜನ ಆ ಅತ್ಯಾಚಾರಿಯನ್ನು ತಿರಸ್ಕರಿಸಬೇಕು ಎಂದು ಆಕ್ರೋಶದಿಂದ ಹೇಳಿದರು. ಪ್ರಜ್ವಲ್  ಮನುಷ್ಯನಲ್ಲ ಅವನೊಬ್ಬ ಸ್ಯಾಡಿಸ್ಟ್, ಮಾನಸಿಕ ಸ್ಥಿಮಿತ ಇಲ್ಲದ ಮತ್ತು ನಿಸ್ಸಹಾಯಕ ಮಹಿಳೆಯರ ಮೇಲೆ ವಿಕೃತಿ ಮೆರೆಯುವ ವ್ಯಕ್ತಿ, ಅವನು ಹುಚ್ಚಾಸ್ಪತ್ರೆಯಲ್ಲಿ ಇರೋದಿಕ್ಕೆ ಮಾತ್ರ ಲಾಯಕ್ಕು ಎಂದು ಬೆಂಕಿಯುಗುಳಿದರು.

ಅವನಿಗೆ ಹೆಣ್ಣಿನ ಬೆಲೆ ಗೊತ್ತಿಲ್ಲ, ತನ್ನಲ್ಲಿ ಒಂದು ಹೊಸ ಜೀವವನ್ನು ಸೃಷ್ಟಿಸಲು ಮಹಿಳೆ ತನ್ನ ರಕ್ತವನ್ನು ಹರಿಸುತ್ತಾಳೆ, ಅವನಿಂದ ಪೀಡನೆಗೆ ಒಳಗಾದ ಮಹಿಳೆಯರನ್ನು ಸಂತ್ರಸ್ತೆಯರೆಂದು ಕರೆಯಲಾಗುತ್ತಿದೆ, ಆದರೆ ಅವರು ಸಂತ್ರಸ್ತೆಯರಲ್ಲ, ಅವರನ್ನು ತೊಂದರೆಗೊಳಾಗದವರೆಂದು ಉಲ್ಲೇಖಿಸಬೇಕೆಂದು ನೀಲಾ ಹೇಳಿದರು.

ವಿಡಿಯೋಗಳನ್ನು ಹರಿಬಿಟ್ಟರೆ ಮಹಿಳೆಯರ ಗತಿ ಏನಾದೀತು ಅಂತ ಯೋಚನೆ ಮಾಡದ ಜನ ಸಹ ಅಷ್ಟೇ ತಪ್ಪಿತಸ್ಥರು, ನೊಂದ ಮಹಿಳೆಯರಿಗಾಗಿ ಮಿಡಿಯದ ಸಿದ್ದರಾಮಯ್ಯ ಸರ್ಕಾರ ನಿಷ್ಪ್ರಯೋಜಕ ಮತ್ತು ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹ ದೋಷಿಗಳು ಎಂದು ನೀಲಾ ಎಲ್ಲರ ವಿರುದ್ಧ ಕಿಡಿ ಕಾರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕೈವಾಡ ಎನ್ನುವವರಿಗೆ ಸಚಿವ ಶರಣಬಸಪ್ಪ ದರ್ಶನಾಪುರ ತಿರುಗೇಟು!