Rohtang Snowfall: ಮನಾಲಿಯ ರೋಹ್ಟಂಗ್​ನಲ್ಲಿ ತಾಜಾ ಹಿಮಪಾತ; ಪ್ರವಾಸಿಗರು ಖುಷ್

Rohtang Snowfall: ಮನಾಲಿಯ ರೋಹ್ಟಂಗ್​ನಲ್ಲಿ ತಾಜಾ ಹಿಮಪಾತ; ಪ್ರವಾಸಿಗರು ಖುಷ್

ಸುಷ್ಮಾ ಚಕ್ರೆ
|

Updated on: May 30, 2024 | 8:24 PM

ಹಿಮಾಚಲ ಪ್ರದೇಶದ ಮನಾಲಿಯ ರೋಹ್ಟಂಗ್‌ನಲ್ಲಿ ಇಂದು (ಗುರುವಾರ) ತಾಜಾ ಹಿಮಪಾತವಾಗಿದೆ. ಇದು ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ವಿಶ್ರಾಂತಿ ಮತ್ತು ಸಂತೋಷವನ್ನು ಉಂಟುಮಾಡಿದೆ. ರೋಹ್ಟಂಗ್ ಪಾಸ್‌ನಲ್ಲಿ ಹಿಮಪಾತದಿಂದಾಗಿ ಮನಾಲಿಯ ಪ್ರವಾಸೋದ್ಯಮ ವ್ಯಾಪಾರವು ಮತ್ತೆ ಅಭಿವೃದ್ಧಿ ಹೊಂದಲಿದೆ.

ಮನಾಲಿಯ ರೋಹ್ಟಂಗ್‌ನಲ್ಲಿ (Rohtang Pass) ಇಂದು ತಾಜಾ ಹಿಮಪಾತವಾಗಿದ್ದು, ಇದರಿಂದ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಕುಲುವಿನಲ್ಲಿ (Kullu) ಇಂದು ಮಧ್ಯಾಹ್ನದ ವೇಳೆಗೆ ಬಲವಾದ ಚಂಡಮಾರುತದ ನಂತರ ತುಂತುರು ಮಳೆ ಪ್ರಾರಂಭವಾಯಿತು. ಇದು ಕುಲುವಿನ ಜನರಿಗೆ ಬಿಸಿಲಿನ ತಾಪದಿಂದ ಪರಿಹಾರವನ್ನು ನೀಡಿದೆ. ಇದಲ್ಲದೆ, ಪ್ರವಾಸಿ ಪಟ್ಟಣವಾದ ಮನಾಲಿಯ (Manali) ರೋಹ್ಟಂಗ್ ಪಾಸ್​ನಲ್ಲಿ ಇಂದು ಹಿಮಪಾತವಾಗಿದೆ. ಸಾಮಾನ್ಯವಾಗಿ ಹಿಮಪಾತದಿಂದಾಗಿ (Snowfall) ಮನಾಲಿಯ ಪ್ರವಾಸೋದ್ಯಮ ವ್ಯಾಪಾರವು ಮತ್ತೆ ಚುರುಕುಗೊಳ್ಳುತ್ತದೆ. ರೋಹ್ಟಂಗ್ ಪಾಸ್‌ನ ಅನುಮತಿಗಳನ್ನು ಸಹ ಮುಂಚಿತವಾಗಿ ಕಾಯ್ದಿರಿಸಲಾಗುತ್ತಿದೆ. ಆದರೆ ಮೇ ಅಂತ್ಯದಲ್ಲಿ ಹಿಮಪಾತದಿಂದಾಗಿ ಟೂರಿಸ್ಟ್ ಸೀಸನ್ ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆಗಳಿವೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ