Avalanche: ಗುಲ್ಮಾರ್ಗ್‌ನಲ್ಲಿ ಹಿಮಪಾತ: ಓರ್ವ ವಿದೇಶಿ ಸಾವು, ಹಲವಾರು ಮಂದಿ ಸಿಲುಕಿರುವ ಶಂಕೆ

ಸ್ಥಳೀಯ ನಿವಾಸಿಗಳಿಲ್ಲದೆ ಅನೇಕ ವಿದೇಶಿಗರು ಹೋಗಿದ್ದ ಕಾಂಗ್‌ದೂರಿ ಇಳಿಜಾರುಗಳಲ್ಲಿ ಗುರುವಾರ ಹಿಮಪಾತ ಸಂಭವಿಸಿದೆ. ಈ ವೇಳೆ ಓರ್ವ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐವರು ಸ್ಕೀಯರ್‌ಗಳನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೇನೆಯ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದ ಗಸ್ತು ತಂಡವು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ.

Avalanche: ಗುಲ್ಮಾರ್ಗ್‌ನಲ್ಲಿ ಹಿಮಪಾತ: ಓರ್ವ ವಿದೇಶಿ ಸಾವು, ಹಲವಾರು ಮಂದಿ ಸಿಲುಕಿರುವ ಶಂಕೆ
ರಕ್ಷಣಾ ಕಾರ್ಯಾಚರಣೆ
Follow us
ರಶ್ಮಿ ಕಲ್ಲಕಟ್ಟ
|

Updated on:Feb 22, 2024 | 4:25 PM

ಶ್ರೀನಗರ ಫೆಬ್ರುವರಿ 22: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗುಲ್ಮಾರ್ಗ್‌ನಲ್ಲಿ (Gulmarg) ಹಿಮಪಾತ (avalanche)ಸಂಭವಿಸಿದ ನಂತರ ಗುರುವಾರ ಒಬ್ಬ ವಿದೇಶಿ ಸಾವಿಗೀಡಾಗಿದ್ದು ಹಲವಾರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ. ಹಿಮಪಾತವು ಪರ್ವತದ ಇಳಿಜಾರಿನಲ್ಲಿ ಹಿಮದ ತ್ವರಿತ ಹರಿವು ಸೇರಿದಂತೆ ಅನೇಕ ಅಂಶಗಳಿಂದ ಪ್ರಚೋದಿಸಬಹುದು. ಕಳೆದ ಕೆಲವು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆ, ಹಿಮ ಬೀಳುವಿಕೆ ದಾಖಲಿಸಿದ್ದರಿಂದ ಹಿಮಪಾತದ ಎಚ್ಚರಿಕೆ ನೀಡಲಾಗಿತ್ತು. ಸ್ಥಳೀಯ ನಿವಾಸಿಗಳಿಲ್ಲದೆ ಅನೇಕ ವಿದೇಶಿಗರು ಹೋಗಿದ್ದ ಕಾಂಗ್‌ದೂರಿ ಇಳಿಜಾರುಗಳಲ್ಲಿ ಗುರುವಾರ ಹಿಮಪಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐವರು ಸ್ಕೀಯರ್‌ಗಳನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೇನೆಯ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದ ಗಸ್ತು ತಂಡವು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ  ಗುಲ್ಮಾರ್ಗ್‌ನಲ್ಲಿ ಹಿಮಪಾತ ಸಂಭವಿಸಿದ್ದು, ಮೂವರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ ಮತ್ತು ಒಬ್ಬರು ಇನ್ನೂ ಕಾಣೆಯಾಗಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಾರಾಮುಲ್ಲಾ ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್‌ನಲ್ಲಿನ ಈ ಬಗ್ಗೆ ಪ್ರತಿಕ್ರಿಯಿಸಿದ್ದು , ಸ್ಕೀಯಿಂಗ್‌ನಲ್ಲಿನ ಅಪಾಯಗಳ ಬಗ್ಗೆ ಮಾತನಾಡಿದರು. ನಾಪತ್ತೆಯಾದವರಿಗಾಗಿ ಪ್ರಾರ್ಥಿಸಿದ ಅವರು, ನಾಪತ್ತೆಯಾಗಿರುವವರು ಬದುಕಿರುವ ಭರವಸೆಯನ್ನು ವ್ಯಕ್ತಪಡಿಸಿದರು.

ಒಮರ್ ಅಬ್ದುಲ್ಲಾ ಟ್ವೀಟ್

ವಿವರಗಳು ಇನ್ನೂ ಸ್ಪಷ್ಟವಾಗದೇ ಇದ್ದರೂ, ಗುಲ್ಮಾರ್ಗ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಮಪಾತವನ್ನು ಪ್ರಚೋದಿಸಿದ ನಂತರ ಕೆಲವು ಸ್ಕೀಯರ್‌ಗಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸ್ಕೀಯರ್‌ಗಳು ‘ಬ್ಯಾಕ್ ಕಂಟ್ರಿ’ಯಲ್ಲಿ ಪಿಸ್ಟ್ ಅಥವಾ ಅಂದ ಮಾಡಿಕೊಂಡ ಇಳಿಜಾರುಗಳಿಂದ ಸ್ಕೀಯಿಂಗ್ ಮಾಡುತ್ತಿದ್ದರು. ಇಂದಿನಂತಹ ದಿನಗಳು ಸ್ಕೀಯಿಂಗ್ ಮೋಜಿನದ್ದಾಗಿದ್ದರೂ ಅದ್ಭುತವಾದ ದೃಶ್ಯಗಳು ಕಾಣಸಿಗುತ್ತವೆ.  ಸ್ಕೀಯಿಂಗ್ ಅಪಾಯಗಳಿಂದ ಕೂಡಿದ್ದು ಮತ್ತು ಜೀವಗಳಿಗೆ ಅಪಾಯ ಎಂಬುದನ್ನು ಮರೆಯಬಾರದು. ಎಲ್ಲಾ ಸ್ಕೀಯರ್‌ಗಳು ಜೀವಂತವಾಗಿ ಪತ್ತೆಯಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಒಮರ್ ಅಬ್ದುಲ್ಲಾ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.

ಶ್ರೀನಗರ-ಲೇಹ್ ರಸ್ತೆಯ ಸೋನಾಮಾರ್ಗ್‌ನಲ್ಲಿ ಬುಧವಾರ ಹಿಮಪಾತ ಸಂಭವಿಸಿದ್ದು, ಎರಡು ದಿನಗಳಲ್ಲಿ ಕಾಶ್ಮೀರದಲ್ಲಿ ಇದು ಎರಡನೇ ಹಿಮಪಾತವಾಗಿದೆ.

ಇದನ್ನೂ ಓದಿ: ನಾನು ವೀಗನ್, ಕೋವಿಡ್ ಬಂದಾಗ ಮೋದಿ ಕರೆ ಮಾಡಿ ಸಲಹೆ ನೀಡಿದ್ದನ್ನು ನೆನಪಿಸಿಕೊಂಡ ಸಿಜೆಐ

ಬುಧವಾರ ಜಮ್ಮುಮತ್ತು ಕಾಶ್ಮೀರ  ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೇಂದ್ರಾಡಳಿತ ಪ್ರದೇಶದ 10 ಜಿಲ್ಲೆಗಳಿಗೆ ಹೊಸ ಹಿಮಪಾತದ ಎಚ್ಚರಿಕೆಯನ್ನು ನೀಡಿದೆ. ಅನಂತನಾಗ್ ಮತ್ತು ಕುಲ್ಗಾಮ್‌ಗೆ ಕಡಿಮೆ ಮಟ್ಟದ ಹಿಮಪಾತದ  ಎಚ್ಚರಿಕೆಯನ್ನು ನೀಡಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಬಂಡಿಪೋರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಿಗೆ ಮಧ್ಯಮ ಮಟ್ಟದ ಹಿಮಪಾತದ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ದೋಡಾ, ಕಿಶ್ತ್ವಾರ್, ಪೂಂಚ್, ರಾಂಬನ್, ಕುಪ್ವಾರಾ ಮತ್ತು ಗಂದರ್ಬಾಲ್ ಜಿಲ್ಲೆಗಳಲ್ಲಿ 2200 ಮೀಟರ್‌ಗಿಂತ ಹೆಚ್ಚಿನ ಅಪಾಯದ ಮಟ್ಟದೊಂದಿಗೆ ಹಿಮಪಾತಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅದು ಸಲಹೆಯಲ್ಲಿ ತಿಳಿಸಿದ್ದು ಈ ಪ್ರದೇಶಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Thu, 22 February 24

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!