ಎದುರು ಪೊಲೀಸ್ ಜೀಪ್, 2 ಕಿ.ಮೀಗಿಂತಲೂ ಹೆಚ್ಚು ದೂರ ಹಿಮ್ಮುಖವಾಗಿ ಓಡಿದ ಕಾರು
ಗಾಜಿಯಾಬಾದ್ನ ಎಲಿವೇಟೆಡ್ ರಸ್ತೆಯೊಂದರಲ್ಲಿ ಕಾರೊಂದು 2ಕ್ಕೂ ಹೆಚ್ಚು ಕಿ.ಮೀ ದೂರ ಹಿಮ್ಮುಖವಾಗಿ ಚಲಿಸುರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಾಲಕರೊಬ್ಬರು ಕಾರನ್ನು ಅತಿ ವೇಗದಲ್ಲಿ ಚಲಾಯಿಸಿದ್ದು ಜತೆಗೆ ನಿಯಮಗಳನ್ನು ಮೀರಿ ನಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರನ್ನು ಚೇಸ್ ಮಾಡಿಕೊಂಡು ಬಂದಿದ್ದಾರೆ. ಎದುರು ಬಂದ ಪೊಲೀಸ್ ವಾಹನ ನೋಡಿ ಚಾಲಕ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ.
ಕಾರೊಂದು ಗಾಜಿಯಾಬಾದ್ನ ರಾಜ್ನಗರದಲ್ಲಿ ಅತಿ ವೇಗವಾಗಿ ಜತೆಗೆ ನಿಯಮಗಳನ್ನು ಗಾಳಿಗೆ ತೂರಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಬಗ್ಗೆ ತನಿಖೆ ಮಾಡಲು ತಕ್ಷಣವೇ ಹೊರಟ ಪೊಲೀಸರಿಗೆ ಗಾಜಿಯಾಬಾದ್ ಎಲಿವೇಟೆಡ್ ರಸ್ತೆಯಲ್ಲಿ ಕಾರು ಕಾಣಿಸಿತ್ತು. ಅದನ್ನು ನಿಲ್ಲಿಸುವ ಸಲುವಾಗಿ ಪೊಲೀಸರು ಕಾರಿನ ಎದುರು ಜೀಪ್ ತಂದು ನಿಲ್ಲಿಸಿದ್ದಾರೆ. ಆದರೆ ತಪ್ಪಿಸಿಕೊಳ್ಳಬೇಕೆಂದು ಕಾರಿನ ಚಾಲಕ ಸುಮಾರು 2 ಕಿ.ಮೀ ಹೆಚ್ಚು ದೂರ ಹಿಮ್ಮುಖವಾಗಿ ಗಾಡಿಯನ್ನು ಚಲಾಯಿಸಿರುವ ಘಟನೆ ವರದಿಯಾಗಿದೆ.
ಇಂದಿರಾಪುರಂ ಪೊಲೀಸರ ಪ್ರಕಾರ, ರಾತ್ರಿ 9.30ರ ವೇಳೆಗೆ ಎಲಿವೇಟೆಡ್ ರಸ್ತೆಯಲ್ಲಿ ಕಾರು ಅತಿ ವೇಗವಾಗಿ, ನಿಯಮಗಳಾವುದೂ ತಲೆಯಲ್ಲಿರಿಸಿಕೊಳ್ಳದೆ ಚಾಲನೆ ಮಾಡುತ್ತಿದ್ದರು. ಎರಡು ಕಿ.ಮೀ ಹೋದ ಬಳಿಕ ಕಾರು ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲಿವೇಟೆಡ್ ರಸ್ತೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳು ಕೆಟ್ಟು ನಿಂತಿರುವ ಕಾರಣ ಚಾಲಕನನ್ನು ಹಿಡಿಯಲು ಸಾಧ್ಯವಾಗಿಲ್ಲ. ಚಾಲಕ ಮದ್ಯಮಾನ ಮಾಡಿದ್ದರಾ ಅಥವಾ ಅವರು ವಾಹನ ಚಾಲನೆ ಮಾಡುವ ರೀತಿಯೇ ಹೀಗಾ ಎಂಬುದರ ಕುರಿತು ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.
ಕಾರಿನ ವಿಡಿಯೋ
गाजियाबाद पुलिस ने आई ट्वेंटी कार रोकने का प्रयास किया। i–20 वाले ने बैक गियर डाला और पुलिस को खूब छकाया। खबर है कि कार वाला भाग निकला। ये पता नहीं चला है कि पुलिस उसको रोक क्यों रही थी। @Uppolice @dgpup @ghaziabadpolice #Ghaziabad pic.twitter.com/LoW9qZQxjP
— Arun (आज़ाद) Chahal 🇮🇳 (@arunchahalitv) February 22, 2024
47 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ವಾಹನವು ಅತಿವೇಗದಲ್ಲಿ ಹಿಮ್ಮುಖವಾಗಿ ಚಾಲನೆ ಮಾಡುವುದನ್ನು ತೋರಿಸುತ್ತದೆ, ಜನನಿಬಿಡ ರಸ್ತೆಯಲ್ಲಿ ಚಲಿಸುವ ಪೊಲೀಸ್ ವಾಹನ ಹಿಂಬಾಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 22 February 24