AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TTD Seva Ticket Booking: ತಿರುಮಲ ದೇವಸ್ಥಾನದಲ್ಲಿ ಮೇ ತಿಂಗಳಿಗೆ ದರ್ಶನ ಟಿಕೆಟ್‌, ಸೇವೆಗಳಿಗೆ ವಿವಿಧ ಕೋಟಾ ಬಿಡುಗಡೆ

ತಿರುಮಲ ಮತ್ತು ತಿರುಪತಿಯಲ್ಲಿನ ಮೇ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಆನ್‌ಲೈನ್‌ನಲ್ಲಿ ಫೆ. 24 ರಂದು ಬೆಳಿಗ್ಗೆ 10 ಮತ್ತು 24 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಇದರ ಜೊತೆಗೆ ಟಿಟಿಡಿ ದೇವಸ್ಥಾನವು 27 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀವಾರಿ ಸೇವೆ, ಮಧ್ಯಾಹ್ನ 12 ಗಂಟೆಗೆ ನವನೀತ ಸೇವೆ ಮತ್ತು ಮಧ್ಯಾಹ್ನ 2 ಗಂಟೆಗೆ ಪರಕಾಮಣಿ ಸೇವಾ ಕೋಟಾವನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

TTD Seva Ticket Booking: ತಿರುಮಲ ದೇವಸ್ಥಾನದಲ್ಲಿ ಮೇ ತಿಂಗಳಿಗೆ ದರ್ಶನ ಟಿಕೆಟ್‌, ಸೇವೆಗಳಿಗೆ ವಿವಿಧ ಕೋಟಾ ಬಿಡುಗಡೆ
ತಿರುಪತಿ ತಿರುಮಲ ದೇವಸ್ಥಾನ
ರಶ್ಮಿ ಕಲ್ಲಕಟ್ಟ
| Edited By: |

Updated on:Feb 22, 2024 | 2:02 PM

Share

ತಿರುಮಲ ಫೆಬ್ರುವರಿ 22: ತಿರುಮಲ ತಿರುಪತಿ ದೇವಸ್ಥಾನ (TTD) ಮೇ ತಿಂಗಳಿಗೆ ತಿರುಮಲ ದೇವಸ್ಥಾನದಲ್ಲಿ (Tirumala Tirupati Devasthanams)ದರ್ಶನ ಟಿಕೆಟ್‌ಗಳು ಮತ್ತು ಸೇವೆಗಳಿಗೆ ವಿವಿಧ ಕೋಟಾಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಮತ್ತು ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳು ಇಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಹೆಚ್ಚುವರಿಯಾಗಿ, ವರ್ಚುವಲ್ ಸೇವೆಗಳು ಮತ್ತು ವೀಕ್ಷಣೆ ಸ್ಲಾಟ್‌ಗಳಿಗಾಗಿ ಮೇ ಕೋಟಾವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಟಿಟಿಡಿ ದೇವಸ್ಥಾನವು ಶ್ರೀವಾಣಿ ಟಿಕೆಟ್‌ಗಾಗಿ ಮೇ ಆನ್‌ಲೈನ್ ಕೋಟಾವನ್ನು ನಾಳೆ (ಫೆಬ್ರವರಿ 23) ಬೆಳಿಗ್ಗೆ 11 ಗಂಟೆಗೆ ಮತ್ತು ಅಂಗಪ್ರದಕ್ಷಿಣಂ ಟೋಕನ್ ಕೋಟಾವನ್ನು 23 ರಂದು ಬೆಳಿಗ್ಗೆ 10 ಗಂಟೆಗೆ ನೀಡಲಿದೆ.

ವಯೋವೃದ್ಧರು, ಅಂಗವಿಕಲರು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಿರುಮಲ ಶ್ರೀಗಳ ದರ್ಶನಕ್ಕೆ ಅನುಕೂಲವಾಗುವಂತೆ ಮೇ ತಿಂಗಳ ಉಚಿತ ವಿಶೇಷ ದರ್ಶನ ಟೋಕನ್‌ಗಳ ಕೋಟಾವನ್ನು 23ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು.

ತಿರುಮಲ ಮತ್ತು ತಿರುಪತಿಯಲ್ಲಿನ  ಮೇ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಆನ್‌ಲೈನ್‌ನಲ್ಲಿ 24 ರಂದು ಬೆಳಿಗ್ಗೆ 10 ಮತ್ತು 24 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಇದರ ಜೊತೆಗೆ ಟಿಟಿಡಿ ದೇವಸ್ಥಾನವು 27 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀವಾರಿ ಸೇವೆ, ಮಧ್ಯಾಹ್ನ 12 ಗಂಟೆಗೆ ನವನೀತ ಸೇವೆ ಮತ್ತು ಮಧ್ಯಾಹ್ನ 2 ಗಂಟೆಗೆ ಪರಕಾಮಣಿ ಸೇವಾ ಕೋಟಾವನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

ನಿನ್ನೆ(ಬುಧವಾರ) 69,191 ಮಂದಿ ಸ್ವಾಮಿಯ ದರ್ಶನ ಪಡೆದಿದ್ದು, 22,295 ಮಂದಿ ಭಕ್ತರು ಕೇಶಮುಂಡನ ಮಾಡಿದ್ದಾರೆ. ಹುಂಡಿಯಲ್ಲಿ ಸ್ವಾಮಿಗೆ ಕಾಣಿಕೆ ರೂಪದಲ್ಲಿ ರೂ. 3.60 ಕೋಟಿ ಸಲ್ಲಿಕೆಯಾಗಿದೆ. 13 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ಕಾಯುವುದರೊಂದಿಗೆ ಟೈಮ್ ಸ್ಲಾಟ್ (ಎಸ್‌ಎಸ್‌ಡಿ) ದರ್ಶನಕ್ಕೆ 4 ಗಂಟೆ ತೆಗೆದುಕೊಳ್ಳುತ್ತದೆ. ದರ್ಶನ ಟಿಕೆಟ್ ಇಲ್ಲದ ಭಕ್ತರು 12 ಗಂಟೆಯೊಳಗೆ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ಪ್ರವೇಶ ದರ್ಶನ ಟಿಕೆಟ್ ಹೊಂದಿರುವ ಭಕ್ತರು 3 ಗಂಟೆಗಳಲ್ಲಿ ದರ್ಶನ ಪಡೆಯುತ್ತಿದ್ದಾರೆ.

ವಿಷ್ಣು ಸಹಸ್ರನಾಮ ಸ್ತೋತ್ರ ಅಖಂಡ ಪಾರಾಯಣ

ಭೀಷ್ಮ ಏಕಾದಶಿಯ ಪ್ರಯುಕ್ತ ಟಿಟಿಡಿ ವತಿಯಿಂದ ಮಂಗಳವಾರ ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ ಅಖಂಡ ಪಾರಾಯಣವನ್ನು ತಿರುಮಲದಲ್ಲಿರುವ ನಾದ ನೀರಾಜನಂ ವೇದಿಕೆಯಲ್ಲಿ ನಡೆದಿದೆ. ಈ ಪಾರಾಯಣ ಕಾರ್ಯಕ್ರಮದಲ್ಲಿ ಟಿಟಿಡಿ ಇಒ ಎ.ವಿ.ಧರ್ಮ ರೆಡ್ಡಿ ಭಾಗವಹಿಸಿದ್ದರು. ಸಂಸ್ಕೃತ ವಿದ್ವಾಂಸರಾದ ಶ್ರೀಮನ್ ಕೋಗಂಟಿ ರಾಮಾನುಜಾಚಾರ್ಯ, ಮಾರುತಿ ಮತ್ತು ಅನಂತಗೋಪಾಲಕೃಷ್ಣ ವಾಚನದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಟಿಟಿಡಿ ಅನ್ನಮಾಚಾರ್ಯ ಯೋಜನೆಯ ಕಲಾವಿದೆ ಕವಿತಾ ಮತ್ತು ತಂಡದವರು ‘ಅನಿ ಯಾನತಿಚ್ಚೆ ಕೃಷ್ಣದಾರ್ಜುನುನಿತೋ…’ ಹಾಗೂ ಇತರ ಸಂಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಇದನ್ನೂ ಓದಿ: ಟಿಟಿಡಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಇನ್ಮುಂದೆ ಮಂಗಳಸೂತ್ರ ಮಾರಾಟ

ಈ ಕಾರ್ಯಕ್ರಮದಲ್ಲಿ ಧರ್ಮಗಿರಿ ವೇದ ವಿಜ್ಞಾನ ಪೀಠಂ, ತಿರುಪತಿಯ ಎಸ್.ವಿ.ವೇದಿಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಎಸ್.ವಿ.ಉನ್ನತ ವೇದ ಸಂಸ್ಥೆ, ಕಂಚಿ ಕಾಮಕೋಟಿ ಪೀಠಂ ವೇದ ಪಾಠಶಾಲೆಯ ವೇದ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:48 pm, Thu, 22 February 24