ನಾನು ವೀಗನ್, ಕೋವಿಡ್ ಬಂದಾಗ ಮೋದಿ ಕರೆ ಮಾಡಿ ಸಲಹೆ ನೀಡಿದ್ದನ್ನು ನೆನಪಿಸಿಕೊಂಡ ಸಿಜೆಐ

ನನಗೆ ಕೋವಿಡ್ ಬಂದಾಗ ಪ್ರಧಾನಿ ನನಗೆ ಕರೆ ಮಾಡಿದ್ದರು. 'ನೀವು ಕೋವಿಡ್‌ನಿಂದ ಬಳಲುತ್ತಿದ್ದೀರಿ ಅಲ್ವಾ, ಎಲ್ಲವೂ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನಾವು ಎಲ್ಲವನ್ನೂ ಮಾಡುತ್ತೇವೆ. ಆಯುಷ್‌ನಲ್ಲಿ ಕಾರ್ಯದರ್ಶಿಯೂ ಆಗಿರುವ ಒಬ್ಬ ವೈದ್ಯ ಇದ್ದಾರೆ. ನಾನು ಅವರಿಗೆ ಈ ಬಗ್ಗೆ ಹೇಳುತ್ತೇನೆ. ಅವರು ನಿಮಗೆ ಬೇಕಾದ ಔಷಧಿಯನನ್ನು ಕಳುಹಿಸುತ್ತಾರೆ ಎಂದು ಮೋದಿಯವರ ಫೋನ್ ಕರೆಯನ್ನು ನೆನಪಿಸಿಕೊಂಡಿದ್ದಾರೆ ಸಿಜೆಐ ಚಂದ್ರಚೂಡ್

ನಾನು ವೀಗನ್, ಕೋವಿಡ್ ಬಂದಾಗ ಮೋದಿ ಕರೆ ಮಾಡಿ ಸಲಹೆ ನೀಡಿದ್ದನ್ನು ನೆನಪಿಸಿಕೊಂಡ ಸಿಜೆಐ
ಡಿವೈ ಚಂದ್ರಚೂಡ್
Follow us
ರಶ್ಮಿ ಕಲ್ಲಕಟ್ಟ
|

Updated on:Feb 22, 2024 | 3:26 PM

ದೆಹಲಿ ಫೆಬ್ರುವರಿ 22: ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI Chandrachud) ಅವರು ಗುರುವಾರ ಸುಪ್ರೀಂಕೋರ್ಟ್ (Supreme Court) ಆವರಣದಲ್ಲಿ ಆಯುಷ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್ ( AYUSH Holistic Wellness Centre) ಉದ್ಘಾಟಿಸಿದ್ದಾರೆ. ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೋವಿಡ್ -19 ಕಾಲದಲ್ಲಿ ಆಯುಷ್ – ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಬಗ್ಗೆತಮ್ಮ ಅನುಭವವನ್ನು ಹಂಚಿಕೊಂಡಿದ್ದು,ಪ್ರಧಾನಿ ನರೇಂದ್ರ ಮೋದಿಯವರು ಕರೆ ಬಗ್ಗೆಯೂ ಉಲ್ಲೇಖಿಸಿದ್ದಾರೆ.

“ಕೋವಿಡ್ ಉಲ್ಬಣಗೊಂಡಾಗಿನಿಂದ ನಾನು ಆಯುಷ್‌ನೊಂದಿಗೆ ಸಂಬಂಧ ಹೊಂದಿದ್ದೇನೆ. ಪ್ರಧಾನಿಯವರು ಆಗ ನನಗೆ ಕರೆ ಮಾಡಿದ್ದರು. ‘ನೀವು ಕೋವಿಡ್‌ನಿಂದ ಬಳಲುತ್ತಿದ್ದೀರಿ ಅಲ್ವಾ, ಎಲ್ಲವೂ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನಾವು ಎಲ್ಲವನ್ನೂ ಮಾಡುತ್ತೇವೆ. ಆಯುಷ್‌ನಲ್ಲಿ ಕಾರ್ಯದರ್ಶಿಯೂ ಆಗಿರುವ ಒಬ್ಬ ವೈದ್ಯ ಇದ್ದಾರೆ. ನಾನು ಅವರಿಗೆ ಈ ಬಗ್ಗೆ ಹೇಳುತ್ತೇನೆ. ಅವರು ನಿಮಗೆ ಬೇಕಾದ ಔಷಧಿಯನನ್ನು ಕಳುಹಿಸುತ್ತಾರೆ ಎಂದು ಚಂದ್ರಚೂಡ್ ಹೇಳಿದ್ದಾರೆ.

“ನಾನು ಕೋವಿಡ್‌ನಿಂದ ಬಳಲುತ್ತಿರುವಾಗ ನಾನು ಆಯುಷ್‌ನಿಂದ ಔಷಧ ತೆಗೆದುಕೊಂಡೆ. ಎರಡನೇ ಮತ್ತು ಮೂರನೇ ಬಾರಿ ನನಗೆ ಕೋವಿಡ್ ಬಂದಾಗ, ನಾನು ಯಾವುದೇ ಅಲೋಪತಿ ಔಷಧವನ್ನು ತೆಗೆದುಕೊಳ್ಳಲಿಲ್ಲ” ಎಂದ ಅವರು ಪರ್ಯಾಯ ಸಮಗ್ರ ಚಿಕಿತ್ಸೆಗಳಲ್ಲಿ ಅವರ ನಂಬಿಕೆಯನ್ನು ಒತ್ತಿಹೇಳಿದರು.

ಸುಪ್ರೀಂಕೋರ್ಟ್​​ನ ಎಲ್ಲ ಸಿಬ್ಬಂದಿಗಳ ಯೋಗಕ್ಷೇಮದ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಾಂಗವನ್ನು ಮೀರಿ ಸಮಗ್ರ ಆರೋಗ್ಯ ರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. “ಅವರು ಸಮಗ್ರ ಜೀವನ ಮಾದರಿಯನ್ನು ಹೊಂದಬೇಕೆಂದು ನಾನು ಬಯಸುತ್ತೇನೆ” ಎಂದ ಸಿಜೆಐ, ಎಲ್ಲರಿಗೂ ಸಮಗ್ರ ಕ್ಷೇಮವನ್ನು ಖಾತ್ರಿಪಡಿಸುವ ಅವರ ಬದ್ಧತೆಯನ್ನು ಒತ್ತಿಹೇಳಿದರು. ಆಯುಷ್ ಸಮಗ್ರ ಕ್ಷೇಮ ಕೇಂದ್ರವು ನ್ಯಾಯಾಧೀಶರು, ಅವರ ಕುಟುಂಬಗಳು ಮತ್ತು ಸುಪ್ರೀಂಕೋರ್ಟ್‌ನ ಸಿಬ್ಬಂದಿ ಸದಸ್ಯರಲ್ಲಿ ಆಯುರ್ವೇದ ಮತ್ತು ಸಮಗ್ರ ಜೀವನಶೈಲಿ ಅಭ್ಯಾಸಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​​​ಗೆ ಯಾವ ಪ್ರಕರಣವೂ ಚಿಕ್ಕದಲ್ಲ: ಕೇಂದ್ರ ಕಾನೂನು ಸಚಿವರ ಹೇಳಿಕೆಗೆ ಸಿಜೆಐ ಡಿವೈ ಚಂದ್ರಚೂಡ್​​ ಪ್ರತಿಕ್ರಿಯೆ

ಕ್ಷೇಮ ಕೇಂದ್ರವನ್ನು ಸ್ಥಾಪಿಸಲು ನಿಖರವಾದ ಸಿದ್ಧತೆಯನ್ನು ಸಿಜೆಐ ಶ್ಲಾಘಿಸಿದ್ದಾರೆ. ಆಂಟಿ-ಸ್ಕಿಡ್ ಟೈಲ್ಸ್ ಅಥವಾ ಚಿಕಿತ್ಸಾ ಕೊಠಡಿಗಳೇ ಆಗಿರಲಿ ಸೌಲಭ್ಯಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ವಿಶ್ರಾಂತಿ ಕೊಠಡಿಗಳು ನಡೆಯುತ್ತಿರುವ ಚಿಕಿತ್ಸೆಯ ಸ್ವರೂಪಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು. ಇದನ್ನು ಹೆಚ್ಚಿನ ಕಾಳಜಿಯಿಂದ ಪರಿಶೀಲಿಸಲಾಗುತ್ತಿದೆ” ಎಂದು ಸಿಜೆಐ ಹೇಳಿದ್ದಾರೆ.

“ನಾನು ಯೋಗ ಮಾಡುತ್ತೇನೆ. ನಾನು ವೀಗನ್ , ಕಳೆದ ಐದು ತಿಂಗಳಲ್ಲಿ ನಾನು ಸಂಪೂರ್ಣವಾಗಿ ವೀಗನ್ ಡಯಟ್ ಅನುಸರಿಸಿದ್ದೇನೆ. ನಾನು ಅದನ್ನು ಮುಂದುವರಿಸುತ್ತೇನೆ. ನಾವೇನು ತಿನ್ನುತ್ತೇವೆಯೋ ಅದರಿಂದ ಪ್ರಾರಂಭವಾಗುವ ಸಮಗ್ರ ಜೀವನ ಮಾದರಿಯನ್ನು ನಾನು ಅನುಸರಿಸುತ್ತೇನೆ ಮತ್ತು ಅದರ ಬಗ್ಗೆ ಗಮನ ಹರಿಸುತ್ತೇನೆ ಎಂದು ಡಿವೈ ಚಂದ್ರಚೂಡ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Thu, 22 February 24

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ