What India Thinks Today: ಟಿವಿ9 ನೆಟ್‌ವರ್ಕ್​​​ನ ವೇದಿಕೆಯಲ್ಲಿ ಆರ್ಥಿಕತೆ, ಮಹಿಳಾ ಶಕ್ತಿಯ ಪ್ರದರ್ಶನ

ಭಾರತದ ನಂಬರ್ ಒನ್ ಸುದ್ದಿ ಟಿವಿ9 ನೆಟ್‌ವರ್ಕ್ ಪ್ರಸ್ತುತಿ ಪಡಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸಚಿವರು ಭಾಗಹಿಸಲಿದ್ದಾರೆ. ಉದ್ಯಮಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

What India Thinks Today: ಟಿವಿ9 ನೆಟ್‌ವರ್ಕ್​​​ನ ವೇದಿಕೆಯಲ್ಲಿ ಆರ್ಥಿಕತೆ, ಮಹಿಳಾ ಶಕ್ತಿಯ ಪ್ರದರ್ಶನ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 24, 2024 | 12:59 PM

ಭಾರತದ ನಂಬರ್ ಒನ್ ಸುದ್ದಿ ಟಿವಿ9 ನೆಟ್‌ವರ್ಕ್ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮವನ್ನು ಆಯೋಜಿಸಿದೆ. ಫೆ.25ರಿಂದ ಫೆ.27ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಜತೆಗೆ ಅನೇಕ ಉದ್ಯಮಿಗಳು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್, ಸ್ಮೃತಿ ಇರಾನಿ, ಅನುರಾಗ್​​​ ಠಾಗೂರ್​​, ಜೈಶಂಕರ್​​ ಸೇರಿದಂತೆ ಅನೇಕ ಈ ಕಾರ್ಯಕ್ರಮದಲ್ಲಿ ಸಂವಾದ ನಡೆಸಲಿದ್ದಾರೆ.

ಆರ್ಥಿಕತೆ, ಮಹಿಳಾ ಶಕ್ತಿಯ ಬಗ್ಗೆಯೂ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ:

ಈ ಶೃಂಗಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಹಿಳಾ ಶಕ್ತಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ವಿಷಯದ ಕುರಿತು ಚರ್ಚಿಸಲಿದ್ದಾರೆ. ಇದಲ್ಲದೇ ಸ್ಟಾರ್ಟಪ್ ಇಂಡಿಯಾ ವಿಷಯದ ಕುರಿತು ಉದ್ಯಮಿಗಳಾದ ನೀಲೇಶ್ ಷಾ, ಜಾಯೇನ್ ಮೆಹ್ತಾ, ಸುಷ್ಮಾ ಕೌಶಿಕ್, ದೀಪೇಂದರ್ ಗೋಯಲ್ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಆರ್ಥಿಕತೆ ಮತ್ತು ಮೂಲ ಹೂಡಿಕೆ ಕುರಿತು ಚರ್ಚಿಸಲಿದ್ದಾರೆ. ಇದಲ್ಲದೇ ನಟಿ ಕಂಗನಾ ರಣಾವತ್ ಕೂಡ ಶೃಂಗಸಭೆಯಲ್ಲಿ ಮಾತನಾಡಲಿದ್ದಾರೆ.

ವ್ಯಾಪಾರ ಜಗತ್ತಿನ ದಿಗ್ಗಜರು ಭಾಗಿ:

1. ಅಶ್ವಿನಿ ವೈಷ್ಣವ್ – ಅಶ್ವಿನಿ ವೈಷ್ಣವ್ ಅವರು ಪ್ರಸ್ತುತ ಕೇಂದ್ರದ ಮೋದಿ ಸರ್ಕಾರದಲ್ಲಿ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವರಾಗಿದ್ದಾರೆ. ಟಿವಿ9 ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಆರ್ಥಿಕತೆ ಮತ್ತು ಮೂಲ ಹೂಡಿಕೆ ಕುರಿತು ನಾಲ್ಕು ಚರ್ಚೆಗಳನ್ನು ನಡೆಸಲಿದ್ದಾರೆ.

2. ಮೇನಕಾ ಗುರುಸ್ವಾಮಿ – ವಿಶ್ವದ 100 ಪ್ರಭಾವಿ ವ್ಯಕ್ತಿಗಳಲ್ಲಿ ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಮೇನಕಾ ಗುರುಸ್ವಾಮಿ ಅವರ ಸಂಗಾತಿ ಅರುಂಧತಿ ಕಾಟ್ಜು ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ವಿವೇಕ್ ಕಾಟ್ಜು ಅವರ ಪುತ್ರಿ ಅರುಂಧತಿ ಕಾಟ್ಜು ಕೂಡ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ. ಅರುಂಧತಿ ಅವರ ತಾತ ಬ್ರಹ್ಮನಾಥ್ ಕಾಟ್ಜು ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.

3. ವಿನಿತಾ ಸಿಂಗ್ – ಟಿವಿ ಶೋ ಶಾಕ್ ಟ್ಯಾಂಕ್‌ನ ತೀರ್ಪುಗಾರರಾದ ವಿನಿತಾ ಸಿಂಗ್, ಎರಡು ಸ್ಟಾರ್ಟ್‌ಅಪ್‌ಗಳ ವೈಫಲ್ಯದ ನಂತರ ಶುಗರ್ ಕಾಸ್ಮೆಟಿಕ್ಸ್ ಅನ್ನು ಪ್ರಾರಂಭಿಸಿದರು. ಇಂದು ಈ ಕಂಪನಿಯ ವಹಿವಾಟು 500 ಕೋಟಿ ರೂ.ಗಿಂತ ಹೆಚ್ಚಿದ್ದು, 130ಕ್ಕೂ ಹೆಚ್ಚು ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. ಇವರು 2015 ರಲ್ಲಿ ಶುಗರ್ ಕಾಸ್ಮೆಟಿಕ್ಸ್ ಅನ್ನು ಪ್ರಾರಂಭಿಸಿದರು.

4. ಅಮನ್ ಗುಪ್ತಾ – ಬೋಟ್ ಕಂಪನಿಯ ಸಹ-ಸಂಸ್ಥಾಪಕ ಅಮನ್ ಗುಪ್ತಾ, ಬಾಲ್ಯದಿಂದಲೂ ಉದ್ಯಮಿಯಾಗಲು ಬಯಸಿದ್ದರು. ಬೋಟ್ ಕಂಪನಿಗೂ ಮುನ್ನ ಹಲವು ಸ್ಟಾರ್ಟಪ್ ಗಳನ್ನು ಆರಂಭಿಸಿದರೂ ಯಶಸ್ಸು ಸಿಗಲಿಲ್ಲ. ಇಷ್ಟೆಲ್ಲಾ ಆದರೂ ಛಲ ಬಿಡದೆ ಅಮನ್ 2016ರಲ್ಲಿ ಸಮೀರ್ ಮೆಹ್ತಾ ಜತೆಗೂಡಿ ಬೋಟ್ ಕಂಪನಿ ಆರಂಭಿಸಿದ್ದರು. ಇಂದು ಕಂಪನಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಛಾಪು ಮೂಡಿಸಿವೆ.

ಇದನ್ನೂ ಓದಿ: ಭಾರತವು ಜಾಗತಿಕ ಸಾಫ್ಟ್ ಪವರ್ ಆಗಿ ಬೆಳೆಯುತ್ತಿದೆ, ಇದು ನಮ್ಮ ಭವಿಷ್ಯ

ಹಿರಿಯ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗಿ:

1.ಆರ್‌ಸಿ ಭಾರ್ಗವ 2. ಅನೀಶ್ ಶಾ 3. ಋತುಪರ್ಣ ಚಕ್ರವರ್ತಿ 4. ನೀಲೇಶ್ ಶಾ 5. ಜಯನ್ ಮೆಹ್ತಾ 6. ಸುಷ್ಮಾ ಕೌಶಿಕ್ 7. ಸಂಜಯ್ ಅಗರ್ವಾಲ್ 8. ದೀಪಿಂದರ್ ಗೋಯಲ್ 9. ಗಜಲ್ ಅಲಗ್ 10 .ಅಮಿತಾಬ್ ಕಾಂತ್

ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ:

ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಜಾಗತಿಕ ದಕ್ಷಿಣದ ಹಿತಾಸಕ್ತಿಗಳ ಬಗ್ಗೆ ಮತ್ತು ವಿವಿಧ ಬಹುಪಕ್ಷೀಯ ವೇದಿಕೆಗಳಲ್ಲಿ ದೇಶದ ವಿಚಾರಗಳನ್ನು ಮಂಡಿಸಿದ್ದಾರೆ. ಕಳೆದ ವರ್ಷದ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಜೈಶಂಕರ್​​​ ಮಹತ್ವದ ಪಾತ್ರವಹಿಸಿದರು. ಪ್ರಧಾನಿ ಮೋದಿ ಅವರು ಭಾರತದ ಪರವಾಗಿ ಅಧ್ಯಕ್ಷತೆಯನ್ನು ವಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:58 pm, Thu, 22 February 24