ಮಂಡ್ಯ: ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಗಲಾಟೆ; ರಾಡ್​​ನಿಂದ ಹೊಡೆದು ಪತ್ನಿಯ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಮಂಡ್ಯ ಜಿಲ್ಲೆಯ ಮಳವಳ್ಳಿ (Malavalli)  ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಗಲಾಟೆಯಾಗಿ ಪತ್ನಿಯನ್ನೇ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿದೆ. ಬಳಿಕ ಪತಿ ಮಗುವಿನ ಜೊತೆ ಪೊಲೀಸರ ಮುಂದೆ ಶರಣಾಗಿದ್ದಾನೆ.

ಮಂಡ್ಯ: ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಗಲಾಟೆ; ರಾಡ್​​ನಿಂದ ಹೊಡೆದು ಪತ್ನಿಯ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಪ್ರಾತಿನಿಧಿಕ ಚಿತ್ರ
Edited By:

Updated on: Dec 13, 2023 | 4:57 PM

ಮಂಡ್ಯ, ಡಿ.13: ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ (Malavalli)  ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ನಡೆದಿದೆ. ರಾಡ್​​ನಿಂದ ಹೊಡೆದು ಪತ್ನಿ ಮಧುಶ್ರೀ(32) ಅವರನ್ನು ಪತಿ ಮಹದೇವ್(38) ಕೊಲೆ ಮಾಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೃತ ಮಧುಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಇತ್ತ ಆರೋಪಿ ಮಹದೇವ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಇತ, ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.

ಪತಿಯ ಅನುಮಾನದ ಭೂತಕ್ಕೆ ತವರು ಸೇರಿದ್ದ ಪತ್ನಿ ಮಧುಶ್ರೀ

ಪತಿಯ ಅನುಮಾನದ ಹಿನ್ನಲೆ ಪತ್ನಿ ಮಧುಶ್ರೀ ತವರು ಮನೆ ಸೇರಿದ್ದಳು. ಬಳಿಕ ರಾಜಿ ಪಂಚಾಯಿತಿ ಮಾಡಿ 2 ತಿಂಗಳ ಹಿಂದೆ ಪತಿ ಮನೆಗೆ ಬಂದಿದ್ದಳು.
ನಿನ್ನೆ(ಡಿ.12) ಮೊಬೈಲ್ ರಿಚಾರ್ಜ್ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಕೋಪಗೊಂಡ ಪತಿ, ರಾಡ್​​ನಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಮಗು ಜೊತೆ ಪೊಲೀಸರ ಮುಂದೆ ಶರಣಾಗಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿ ಎಂದು ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಆರೋಪ, ಪತಿಯ ಲವರ್ ಜೊತೆ ಪತ್ನಿ ಮಾತನಾಡಿದ ಆಡಿಯೋ ಪತ್ತೆ

ಬೈಕ್​ಗೆ ಮಹಾರಾಷ್ಟ್ರ ಸಾರಿಗೆ ಬಸ್​ ಡಿಕ್ಕಿ, ಬಾಲಕಿ ಸ್ಥಳದಲ್ಲೇ ಸಾವು

ವಿಜಯಪುರ: ಬೈಕ್​ಗೆ ಮಹಾರಾಷ್ಟ್ರ ಸಾರಿಗೆಯ ಬಸ್​ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದಿದೆ. ಸವಿತಾ ಪೂಜಾರಿ(15) ಮೃತ ರ್ದುದೈವಿ., ಬಾಲಕಿ ತಂದೆ ಮುದಗೊಂಡಗೆ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಡರಟ್ಟಿ ಗ್ರಾಮದ ನಿವಾಸಿಗಳಾದ ತಂದೆ-ಮಗಳು, ಅರಕೇರಿ ಅಮೋಘ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. MH 13 CU 6338 ನಂಬರ್​ನ ಮಹಾರಾಷ್ಟ್ರದ ಸರ್ಕಾರಿ ಬಸ್, ಹಾಗೂ ಚಾಲಕನನ್ನು ತಿಕೋಟಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Wed, 13 December 23