ಸಂಬಳ ಜಾಸ್ತಿ ಮಾಡಿಲ್ಲ; 71 ಫ್ರಿಡ್ಜ್‌, 11 ಟಿವಿ ಒಡೆದು ಮಾಲೀಕರ ಮೇಲೆ ಸೇಡು ತೀರಿಸಿಕೊಂಡ ಉದ್ಯೋಗಿ!

|

Updated on: Nov 28, 2024 | 10:47 PM

ಮಧ್ಯಪ್ರದೇಶದ ಬೈತುಲ್‌ನ ಶಾಪಿಂಗ್ ಮಾಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ಮಾಲ್ ನಿರ್ವಾಹಕರು ತನಗೆ ಸಂಬಳವನ್ನು ಹೆಚ್ಚಿಸದ ಕಾರಣಕ್ಕೆ ಬಹಳ ಕೋಪಗೊಂಡಿದ್ದರು. ತನ್ನ ಮಾಲೀಕರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಯೋಚಿಸಿದ ಅವರು ಮೊದಲು ಜಗಳವಾಡಿ, ನಂತರ ಮಾಲ್‌ನಲ್ಲಿದ್ದ 11 ಟಿವಿಗಳು ಮತ್ತು 71 ಫ್ರಿಜ್‌ಗಳನ್ನು ಒಡೆದಿದ್ದಾರೆ.

ಸಂಬಳ ಜಾಸ್ತಿ ಮಾಡಿಲ್ಲ; 71 ಫ್ರಿಡ್ಜ್‌, 11 ಟಿವಿ ಒಡೆದು ಮಾಲೀಕರ ಮೇಲೆ ಸೇಡು ತೀರಿಸಿಕೊಂಡ ಉದ್ಯೋಗಿ!
71 ಫ್ರಿಡ್ಜ್‌, 11 ಟಿವಿ ಒಡೆದು ಮಾಲೀಕರ ಮೇಲೆ ಸೇಡು ತೀರಿಸಿಕೊಂಡ ಉದ್ಯೋಗಿ
Follow us on

ನವದೆಹಲಿ: ಮಧ್ಯಪ್ರದೇಶದ ಬೈತುಲ್​ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಪಿಂಗ್ ಮಾಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿ ತನ್ನ ಮಾಲೀಕರ ಮೇಲೆ ಸೇಡು ತೀರಿಸಿಕೊಳ್ಳಲು ಬರೋಬ್ಬರಿ 18 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾನಿಗೊಳಪಡಿಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತನಗೆ ಸಂಬಳ ಜಾಸ್ತಿ ಮಾಡಿಲ್ಲವೆಂದು ಕೋಪಗೊಂಡಿದ್ದ ಉದ್ಯೋಗಿ ಶಾಪಿಂಗ್ ಮಾಲ್‌ನ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪ್ರದರ್ಶಿಸಲಾಗಿದ್ದ ಎಲ್‌ಇಡಿ ಟಿವಿಗಳು ಮತ್ತು ಫ್ರಿಜ್‌ಗಳನ್ನು ಧ್ವಂಸಗೊಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿ ನೌಕರ ಕಮಲ್ ಪವಾರ್ ಟಿವಿ-ಫ್ರಿಡ್ಜ್ ಅನ್ನು ಒಡೆದು ನಾಶಪಡಿಸಿದ್ದಾರೆ. ಅವರು 11 ಟಿವಿ ಸ್ಕ್ರೀನ್ ಒಡೆದು ಹಾಕಿದ್ದು, ಬಳಿಕ ಫ್ರಿಡ್ಜ್ ವಿಭಾಗಕ್ಕೆ ತೆರಳಿ 71 ಫ್ರಿಡ್ಜ್ ಗಳನ್ನು ಒಡೆದು ಹಾನಿಗೊಳಿಸಿದ್ದಾರೆ. ಅಂಗಡಿಯ ಅವಸ್ಥೆಯನ್ನು ಕಂಡು ಗಾಬರಿಯಾದ ಮಾಲ್‌ನ ಉದ್ಯೋಗಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಇಷ್ಟೆಲ್ಲ ಡ್ಯಾಮೇಜ್ ಮಾಡಿದ್ದು ಮಾಲ್ ಉದ್ಯೋಗಿಯೇ ಹೊರತು ಹೊರಗಿನವರಲ್ಲ ಎಂದು ಗೊತ್ತಾಗಿ ಎಲ್ಲರೂ ಬೆಚ್ಚಿಬಿದ್ದರು.

ಇದನ್ನೂ ಓದಿ: ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಸಿಕ್ಕಿರುವ ಮಾಹಿತಿ ಪ್ರಕಾರ, ಮಾಲ್‌ನಲ್ಲಿ ಕೆಲಸ ಮಾಡುವ ಈ ಉದ್ಯೋಗಿ ದೀಪಾವಳಿ ಸಂದರ್ಭದಲ್ಲಿ ಮಾಲ್ ನಿರ್ದೇಶಕರಿಗೆ ಸಂಬಳವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಆದರೆ ಅವರ ಬೇಡಿಕೆ ಈಡೇರಿರಲಿಲ್ಲ, ಸಂಬಳ ಹೆಚ್ಚಿಸಿರಲಿಲ್ಲ. ಇದರಿಂದ ಕೋಪಗೊಂಡ ಉದ್ಯೋಗಿ ನಂತರ ಮೂರು ದಿನಗಳ ರಜೆ ತೆಗೆದುಕೊಂಡರು. ಕೆಲಸಕ್ಕೆ ಹಿಂತಿರುಗಿದ ನಂತರವೂ ಕೋಪದಲ್ಲಿಯೇ ಇದ್ದರು. ಅದೇ ಸಿಟ್ಟಿನಲ್ಲಿ ಮಾಲ್​ನ ಅಂಗಡಿಯನ್ನು ಧ್ವಂಸಗೊಳಿಸಿದರು.

ಈ ಘಟನೆಯ ನಂತರ ಮಾಲ್ ಮ್ಯಾನೇಜರ್ ಸಂಜಯ್ ಗುಪ್ತಾ ಪೊಲೀಸರಿಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಮಾಲ್‌ನಲ್ಲಿನ ಸರಕುಗಳನ್ನು ಹಾನಿಗೊಳಿಸಿದ್ದಕ್ಕಾಗಿ ಪೊಲೀಸರು ನೌಕರನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆದರೆ ಆರೋಪಿ ಮಾನಸಿಕ ಸ್ಥಿತಿಯ ಆಧಾರದ ಮೇಲೆ ಜಾಮೀನು ಪಡೆದಿದ್ದಾನೆ. ಇದೀಗ ಪೊಲೀಸರು ಮುಂದಿನ ಕ್ರಮದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಟ್ರಕ್ ಅಡಿ ಸಿಲುಕಿ ಮಗು ಸಾವು; ಶಾಕಿಂಗ್ ವಿಡಿಯೋ ವೈರಲ್

ಘಟನೆಯ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದ ನಂತರ ಮತ್ತು ಮಾಲ್ ನಿರ್ವಾಹಕರು ಘಟನೆಯನ್ನು ವರದಿ ಮಾಡಿದ ನಂತರ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮದೇ ಉದ್ಯೋಗಿಗಳು ಈ ರೀತಿ ಮಾಡಬಹುದು ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಮಾಲ್‌ನ ನಿರ್ದೇಶಕ ಸಂಜಯ್ ಗುಪ್ತಾ ಹೇಳಿದ್ದಾರೆ. ಈಗ ಹಾಳಾದ ಟಿವಿ ಮತ್ತು ಫ್ರಿಡ್ಜ್ ಅನ್ನು ಹೇಗೆ ಮಾರಾಟ ಮಾಡುವುದು ಎಂಬ ಪ್ರಶ್ನೆಯನ್ನು ಅವರು ಎದುರಿಸುತ್ತಿದ್ದಾರೆ. ಈ ಕೃತ್ಯದಿಂದ ಸುಮಾರು 18 ಲಕ್ಷ ನಷ್ಟವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ