ಬಿಎಂಟಿಸಿ ಬಸ್​​ ಚಾಲಕನ ನಿರ್ಲಕ್ಷಕ್ಕೆ ಕಾರ್ಮಿಕನ ಕಾಲು ಕಟ್: ಚಿಕಿತ್ಸೆಗೆ ಹಣವಿಲ್ಲದೇ ಪರದಾಟ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕನೊಬ್ಬನ ಕಾಲು ಮುರಿದ ಘಟನೆ ನಡೆದಿದೆ. ಬಿಳಕಹಳ್ಳಿಯಿಂದ ದೇವರಚಿಕ್ಕನ ಮನೆ ಕಡೆ ಹೋಗುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಬಸ್ ಹತ್ತುವಾಗ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕ ಕಾಲು ಮುರಿದುಕೊಂಡಿದ್ದಾನೆ. ಹಣವಿಲ್ಲದೆ ಪ್ರಯಾಣಿಕನ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಬಿಎಂಟಿಸಿ ಬಸ್​​ ಚಾಲಕನ ನಿರ್ಲಕ್ಷಕ್ಕೆ ಕಾರ್ಮಿಕನ ಕಾಲು ಕಟ್: ಚಿಕಿತ್ಸೆಗೆ ಹಣವಿಲ್ಲದೇ ಪರದಾಟ
ಬಿಎಂಟಿಸಿ ಬಸ್​​ ಚಾಲಕನ ನಿರ್ಲಕ್ಷಕ್ಕೆ ಕಾರ್ಮಿಕನ ಕಾಲು ಕಟ್: ಚಿಕಿತ್ಸೆಗೆ ಹಣವಿಲ್ಲದೇ ಪರದಾಟ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Nov 29, 2024 | 3:10 PM

ಬೆಂಗಳೂರು, ನವೆಂಬರ್​ 29: ಬಿಎಂಟಿಸಿ (BMTC) ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಪ್ರಯಾಣಿಕ ಕಾಲು ಮುರಿದುಕೊಂಡಿರುವಂತಹ ಘಟನೆ ನವೆಂಬರ್​ 10ರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಳಕಹಳ್ಳಿ ಟು ದೇವರಚಿಕ್ಕನ ಮನೆ ಕಡೆ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ದಿನೇಶ್ ಕಾಲು ಮುರಿದುಕೊಂಡ ಪ್ರಯಾಣಿಕ.

ದಿನೇಶ್​ ಕೆಲಸ ಮುಗಿಸಿ ಮನೆ ಕಡೆ ಹೊರಟ್ಟಿದ್ದರು. ಹೀಗಾಗಿ ಬಿಳಕಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಿದ್ದರು. ಬಳಿಕ ಬಸ್​ ಬಂದಿದೆ. ಈ ವೇಳೆ ದಿನೇಶ್​ ಬಸ್​ ಹತ್ತುತಿದ್ದರೂ ಡ್ರೈವರ್​ ಬಸ್ ಚಲಾಯಿಸಿದ್ದಾರೆ. ಬಸ್​ ರನ್ನಿಂಗ್ ವೇಳೆ ಬಾಗಿಲು ಮುಚ್ಚಬೇಕಿತ್ತು. ಆದರೆ ಕಂಡಕ್ಟರ್ ಪ್ರಯಾಣಿಕ ಬಸ್ ಹತ್ತುತ್ತಿರುವ ಬಗ್ಗೆ ಡ್ರೈವರ್​ಗೆ ಸಿಗ್ನಲ್ ನೀಡಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕ ದಿನೇಶ್ ಕಾಲಿನ ಮೇಲೆ ಬಸ್​ನ ಹಿಂಭಾಗದ ಚಕ್ರ ಹತ್ತಿ ಕಾಲು ಮುರಿದಿದೆ.

ಇದನ್ನೂ ಓದಿ: ಸಿಪಿಐ ವಿರುದ್ಧ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮುಂದಾದ ಪೇದೆ: ರಕ್ಷಿಸಿದ ಗೆಳೆಯರು

ಇತ್ತ ದಿನೇಶ್​ ಮನೆಗೆ ಆಸರೆಯಾಗಿದ್ದ. ಆದರೆ ಈಗ ಕಾಲು ಮುರಿದಿರುವ ಹಿನ್ನೆಲೆಯಲ್ಲಿ ಹಣವಿಲ್ಲದೆ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ವೈದ್ಯರು ಸರ್ಜರಿ ಮಾಡಬೇಕೆಂದು ಹೇಳಿದ್ದಾರಂತೆ. ಕೈಯಲ್ಲಿ ಒಂದು ರೂಪಾಯಿ ಹಣವಿಲ್ಲವೆಂದು ದಿನೇಶ್​ ಪತ್ನಿ ನೋವು ತೋಡಿಕೊಂಡಿದ್ದಾರೆ.

ಬ್ರೇಕ್ ಫೇಲಾಗಿ ಕೆಎಸ್ಆರ್​ಟಿಸಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಖೈರವಾದಾಗಿ ಬಳಿ ಬ್ರೇಕ್ ಫೇಲಾಗಿ ಸರ್ಕಾರಿ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಲಿಂಗಸುಗೂರಿನಿಂದ ನಾಗರಹಾಳ ಗ್ರಾಮಕ್ಕೆ ಸರ್ಕಾರಿ ಬಸ್ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಬ್ರೇಕ್ ಫೇಲಾಗಿ ಕೆಎಸ್ಆರ್​ಟಿಸಿ ಬಸ್ ಹೊಲಕ್ಕೆ ನುಗ್ಗಿದೆ.

ಇದನ್ನೂ ಓದಿ: ಕಲಬುರಗಿ: ಪೆಟ್ರೋಲ್‌ ಬಾಂಬ್‌ ಹಾಕಿ ಇಡೀ ಕುಟುಂಬವನ್ನೇ ಸಾಮೂಹಿಕ ಹತ್ಯೆಗೆ ಯತ್ನ

ಉರುಳಿಬಿದ್ದ ಸರ್ಕಾರಿ ಬಸ್​ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗಾಯಾಳುಗಳನ್ನು ಮುದಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಮುದಗಲ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ