ಡ್ರೈವರ್-ಕಂಡಕ್ಟರ್​ ಮೇಲೆ ಹಲ್ಲೆ ಪ್ರಕರಣ ಹೆಚ್ಚಳ: ಕೊನೆಗೂ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು

ಬೆಂಗಳೂರಿನಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಿಎಂಟಿಸಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಕರ್ತವ್ಯದಲ್ಲಿರುವ ನೌಕರರ ಮೇಲೆ ಹಲ್ಲೆ ನಡೆದರೆ ತಕ್ಷಣ ಜಾಗೃತ ಮತ್ತು ಭದ್ರತಾ ನಿರ್ದೇಶಕರಿಗೆ ತಿಳಿಸುವಂತೆ ಸೂಚಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಹಲವಾರು ಹಲ್ಲೆ ಪ್ರಕರಣಗಳು ವರದಿಯಾಗಿವೆ.

ಡ್ರೈವರ್-ಕಂಡಕ್ಟರ್​ ಮೇಲೆ ಹಲ್ಲೆ ಪ್ರಕರಣ ಹೆಚ್ಚಳ: ಕೊನೆಗೂ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು
ಡ್ರೈವರ್-ಕಂಡಕ್ಟರ್​ ಮೇಲೆ ಹಲ್ಲೆ ಪ್ರಕರಣ ಹೆಚ್ಚಳ: ಕೊನೆಗೂ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Nov 28, 2024 | 5:33 PM

ಬೆಂಗಳೂರು, ನವೆಂಬರ್ 28: ನಗರದಲ್ಲಿ ಸಾರ್ವಜನಿಕರಿಂದ ಸಾಲು ಸಾಲು ಹಲ್ಲೆ ಪ್ರಕರಣಗಳು ಬಿಎಂಟಿಸಿ ಸಿಬ್ಬಂದಿ ಕಂಗೆಡುವಂತೆ ಮಾಡಿವೆ. ಹೀಗಾಗಿ ಇದರಿಂದ ಕಡೆಗೂ ಬಿಎಂಟಿಸಿ (BMTC) ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕರ್ತವ್ಯನಿರತ ಬಿಎಂಟಿಸಿ ನೌಕರರ ಮೇಲೆ ಹಲ್ಲೆ ಘಟನೆ ನಡೆದರೆ ಕೂಡಲೇ ಜಾಗೃತ ಮತ್ತು ಭದ್ರತಾ ನಿರ್ದೇಶಕರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.

ಘಟನೆ ನಡೆದು 30 ನಿಮಿಷದೊಳಗೆ ಸಂಪೂರ್ಣ ಮಾಹಿತಿ ನೀಡಬಹುದಾಗಿದೆ. ದಿನದ ಯಾವುದೇ ಸಮಯದಲ್ಲಾದ್ರೂ ಮಾಹಿತಿ ನೀಡುವಂತೆ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶಕರಿಂದ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ: ಮೂರು ತಿಂಗಳಲ್ಲಿ 9ನೇ ಪ್ರಕರಣ

ಸೆಪ್ಟೆಂಬರ್‌ 8 ರಂದು ವೋಲ್ವೋ ಬಸ್‌ನಲ್ಲಿ ಅಟ್ಯಾಕ್‌ ಆಗಿತ್ತು. ಅತ್ತಿಬೆಲೆಯಿಂದ ಬರ್ತಿದ್ದ ಬಸ್‌ನಲ್ಲಿ ಸ್ಕ್ರೂ ಡ್ರೈವರ್‌ನಿಂದ ಕಂಡಕ್ಟರ್‌ ಮೇಲೆ ಹಲ್ಲೆ ಯತ್ನ ಆಗಿತ್ತು. ಇನ್ನು ಅಕ್ಟೋಬರ್‌ 1 ರಂದು ವೈಟ್‌ಫೀಲ್ಡ್‌ನ ಐಟಿಪಿಎಲ್‌ನಲ್ಲಿ ನಿರ್ವಾಹಕ ಯೋಗೇಶ್‌ಗೆ ಹರ್ಷಾ ಅನ್ನೋ ಪ್ರಯಾಣಿಕ ಚಾಕು ಹಾಕಿದ್ದ. ಅದೇ ಅಕ್ಚೋಬರ್‌ 18 ರಂದು ಟಿನ್‌ ಫ್ಯಾಕ್ಟರಿ ಬಳಿ ಹೇಮಂತ್ ಎಂಬಾತ ಕಂಡಕ್ಟರ್‌ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿದ್ದ.

ಅಕ್ಟೋಬರ್‌ 26 ರಂದು ಟ್ಯಾನರಿ ರಸ್ತೆಯಲ್ಲಿ ಹಾರನ್‌ ಮಾಡಿ ಸೈಡಿಗೆ ಹೋಗು ಎಂದಿದ್ದಕ್ಕೆ ಬೈಕ್‌ ಸವಾರರು ಡ್ರೈವರ್‌ನನ್ನ ಥಳಿಸಿದ್ದರು. ಇನ್ನು ಅಕ್ಟೋಬರ್‌ 28 ರಂದು ಮೈಕೋ ಲೇಔಟ್ ಬಸ್ ಸ್ಟಾಪ್‌ನಲ್ಲಿ ಆಟೋ ಚಾಲಕ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು.

ಕಳೆದ ಮೂರು ತಿಂಗಳಲ್ಲಿ ಆರು ಸಿಬ್ಬಂದಿ ಮೇಲೆ ಹಲ್ಲೆ ಆಗಿದೆ. ಇನ್ನು ಇತ್ತೀಚೆಗೆ ಮೈಸೂರು ರೋಡ್‌ನಲ್ಲಿ ಬೈಕ್‌ಗೆ ಬಸ್‌ ಟಚ್ ಆಗಿತ್ತು. ಹೊಸಗುಡ್ಡದಹಳ್ಳಿವರೆಗೂ ಬಸ್‌ ಫಾಲೋ ಮಾಡಿಕೊಂಡು ಬಂದ ಕಮಲ್‌ಸಿಂಗ್‌ ಚಾಲಕ ಮೇಲೆ ಹಲ್ಲೆಮಾಡಿದ್ದಾನೆ. ಹಲ್ಲೆ ದೃಶ್ಯ ಬೈದಾಡ್ತಿರೋ ಆಡಿಯೋ ಬಸ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಆಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್​ಗಿಲ್ಲ ಭದ್ರತೆ; ಕಲ್ಲಿನಿಂದ ತಲೆ ಜಜ್ಜಲು ಯತ್ನಿಸಿದ ಪ್ರಯಾಣಿಕ!

ಇನ್ನೂ ವಿಡಿಯೋ ಮಾಡ್ತಿದ್ದವರ ಮೊಬೈಲ್‌ ಕಸಿಯೋದಕ್ಕೂ ಕಮಲ್‌ಸಿಂಗ್ ಮುಂದಾಗಿದ್ದ. ಬಳಿಕ ಆರೋಪಿಯನ್ನ ಪೊಲೀಸರಿಗೆ ಒಪ್ಪಿಸಲಾಗಿತ್ತು. ಈ ಸಂಬಂಧ ಬ್ಯಾಟರಾಯನಪುರ ಪೋಲಿಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ