Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಕಂಡಕ್ಟರ್​ಗಳಿಗೆ ತಲೆ ನೋವಾದ ಹೊಸ ಟಿಕೆಟ್ ಮೆಷಿನ್​ಗಳು; ಹಳೆ ಮೆಷಿನ್​ಗಳೇ ಕೊಡಿ ಎಂದು ಮನವಿ

ಕೆಎಸ್ಆರ್​ಟಿಸಿ ನಿಗಮ, ನಾವು ಫುಲ್ ಹೈಟೆಕ್ ನಮ್ಮ ಇಟಿಎಂ ಮೆಷಿನ್ ನಲ್ಲಿ ಗೂಗಲ್ ಪೇ, ಫೋನ್ ಪೇ ಕ್ರೆಡಿಟ್ಟು, ಡೆಬಿಟ್ ಕಾರ್ಡ್ ಬಳಸಿ ಹಣ ಪೇ ಮಾಡಬಹುದು ಎಂದು ಬಾಡಿಗೆ ಆಧಾರದಲ್ಲಿ ಹೊಸ ಮೆಷಿನ್ ಗಳನ್ನು ತರಿಸಿಕೊಂಡಿದೆ. ಆದರೆ ಈ ಮೆಷಿನ್​​ಗಳಲ್ಲಿ ಬೇಗ ಟಿಕೆಟ್ ಕೊಡಲು ಆಗ್ತಿಲ್ಲ. ತುಂಬಾ ಸ್ಲೋ ಆಗಿ ವರ್ಕ್ ಮಾಡುತ್ತೆ ನಮಗೆ ಹಳೆಯ ಮೆಷಿನ್ ಗಳನ್ನೇ ಕೊಡಿ ಎಂದು ಕಂಡಕ್ಟರ್​ಗಳು ಎಂಡಿಗೆ ಮನವಿ ಮಾಡ್ತಿದ್ದಾರೆ.

KSRTC ಕಂಡಕ್ಟರ್​ಗಳಿಗೆ ತಲೆ ನೋವಾದ ಹೊಸ ಟಿಕೆಟ್ ಮೆಷಿನ್​ಗಳು; ಹಳೆ ಮೆಷಿನ್​ಗಳೇ ಕೊಡಿ ಎಂದು ಮನವಿ
KSRTC ಕಂಡಕ್ಟರ್​ಗಳಿಗೆ ತಲೆ ನೋವಾದ ಹೊಸ ಟಿಕೆಟ್ ಮೆಷಿನ್​ಗಳು
Follow us
Kiran Surya
| Updated By: ಆಯೇಷಾ ಬಾನು

Updated on: Oct 07, 2024 | 7:10 AM

ಬೆಂಗಳೂರು, ಅ.07: ಕೆಎಸ್ಆರ್​ಟಿಸಿ ನಿಗಮ (KSRTC) ತಿಂಗಳಿಗೆ 650 ರಿಂದ 700 ರೂಪಾಯಿ ವರೆಗೆ ಬಾಡಿಗೆ ನೀಡಿ, ಮೊದಲ ಹಂತದಲ್ಲಿ ಹತ್ತು ಸಾವಿರ ಮೆಷಿನ್ ಗಳನ್ನು ತರಿಸಿಕೊಂಡಿದೆ. ಆದರೆ ಹೊಸ ಮೆಷಿನ್​ಗಳಿಂದ ಸರಿಯಾದ ಸಮಯಕ್ಕೆ ಟಿಕೆಟ್ ನೀಡಲು ಆಗ್ತಿಲ್ಲ. ಶಕ್ತಿ ಯೋಜನೆ ಹಿನ್ನೆಲೆಯಲ್ಲಿ, ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಸರಿಯಾಗಿ ಟಿಕೆಟ್ ಕೊಡಲು ಆಗದೆ ಕಂಡಕ್ಟರ್​ಗಳು ಪರದಾಡುತ್ತಿದ್ದಾರೆ.

ಈ ಹಿಂದೆ ಕ್ವಾಟಮ್ ಅನ್ನೋ ಕಂಪನಿಯ ಟಿಕೆಟ್ ಮೆಷಿನ್ (ಇಟಿಎಂ)ಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಹೈಟೆಕ್ ಹೆಸರಲ್ಲಿ ಇಬಿಕ್ಸ್ ಪೇ ಕಂಪನಿಯ ಇಟಿಎಂ ಟಿಕೆಟ್ ಮೆಷಿನ್ ಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ಮೆಷಿನ್ ಗಳು ತುಂಬಾ ಸ್ಲೋ ಆಗಿ ವರ್ಕ್ ಆಗುತ್ತಿವೆ. ಇದರಿಂದ ಕಂಡಕ್ಟರ್ ಗಳು ತಮ್ಮ ಕೈಯಿಂದ ಹಣ ಹಾಕಿ ನಿಗಮಕ್ಕೆ ಹಣ ಕಟ್ಟುತ್ತಿದ್ದಾರೆ. ಅರ್ಧ ಟಿಕೆಟ್ ಬರುತ್ತದೆ, ಸರಿಯಾಗಿ ಪ್ರಿಂಟ್ ಆಗ್ತಿಲ್ಲ. ಇನ್ನೂರು ಮುನ್ನೂರು ರುಪಾಯಿ ಹೆಚ್ಚಾಗಿ ಬರುತ್ತದೆ ಎಂದು ಕಂಡಕ್ಟರ್​ಗಳು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಚಾಲಕ, ನಿರ್ವಾಹಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ

ಇನ್ನೂ ಹಳೆಯ ಮೆಷಿನ್​ನಲ್ಲಿ ದೊಡ್ಡದಾದ ಅಕ್ಷರಗಳಿದ್ವು, ಹೊಸ ಮೆಷಿನ್ ನಲ್ಲಿ ಸಣ್ಣ ಅಕ್ಷರ ಗಳಿವೆ, ಹಿರಿಯ ಕಂಡಕ್ಟರ್ ಗಳಿಗೆ ಇದರಿಂದ ವೇಗವಾಗಿ ಟಿಕೆಟ್ ನೀಡಲು ಆಗೋದಿಲ್ವಂತೆ. ಹಳೆಯ ಮೆಷಿನ್ ನಲ್ಲಿ ಒಂದು ಟಿಕೆಟ್ ನೀಡಲು ಕೇವಲ ಒಂದು ಆ್ಯಪ್ಷನ್ ಮಾತ್ರ ಬಳಕೆ ಮಾಡಬೇಕಿತ್ತು, ಆದರೆ ಹೊಸ ಮೆಷಿನ್ ನಲ್ಲಿ ಪ್ರತಿ ಬಾರಿ ಟಿಕೆಟ್ ನೀಡಲು ನಾಲ್ಕೈದು ಆಪ್ಷನ್ ಪ್ರೆಸ್ ಮಾಡಬೇಕು. ಇದರಿಂದ ಒಂದು ಟಿಕೆಟ್ ಕೊಡಲು ತುಂಬಾ ಕಷ್ಟ ಆಗುತ್ತದೆ ಸರಿಯಾದ ಸಮಯಕ್ಕೆ ಟಿಕೆಟ್ ಕೊಡಲು ಆಗುತ್ತಿಲ್ಲ ಎಂದು ಕಂಡಕ್ಟರ್ ಗಳು ಕೆಎಸ್ಆರ್​ಟಿಸಿ ಎಂಡಿ ಬಳಿ ನೋವು ತೋಡಿಕೊಳ್ಳುತ್ತಿದ್ದಾರೆ.

ಟಿಕೆಟ್ ಕೊಡಲು ಲೇಟ್ ಆಗುತ್ತಿರುವುದರಿಂದ, ಪ್ರಯಾಣಿಕರು ಕಂಡಕ್ಟರ್​ಗಳ ಜೊತೆಗೆ ಜಗಳ ಆಡುವಂತ ದುಸ್ಥಿತಿ ಎದುರಾಗಿದೆ. ಮುಂದಿನ ಸ್ಟಾಪ್ ಒಳಗೆ ಬಸ್ ನೊಳಗೆ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ನೀಡಬೇಕು ಇಲ್ಲಾಂದ್ರೆ ಕಂಡಕ್ಟರ್ ಗಳಿಗೆ ಅಧಿಕಾರಿಗಳು ನೋಟಿಸ್ ಕೊಡ್ತಾರೆ, ಸಸ್ಪೆಂಡ್ ಮಾಡ್ತಾರೆ. ಸದ್ಯ ಕೆಎಸ್ಆರ್ಟಿಸಿ ಯಲ್ಲಿ ಹತ್ತು ಸಾವಿರ ಮೆಷಿನ್ ಗಳನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸಾರಿಗೆ ಸಚಿವರನ್ನು ಕೇಳಿದ್ರೆ ನಾಳೆ ಅಧಿಕಾರಿಗಳ ಜೊತೆಗೆ ಮಾತಾಡಿ ಸಮಸ್ಯೆ ಬಗೆಹರಿಸುತ್ತೀನಿ ಎಂದಿದ್ದಾರೆ.

ಒಟ್ನಲ್ಲಿ ಕೆಎಸ್ಆರ್ಟಿಸಿ ಕಂಡಕ್ಟರ್ ಗಳಿಗೆ ಹಳೆಯ ಮೆಷಿನ್ ‌ಗಳ ಮೇಲೆ ಪ್ರೀತಿ, ಅಧಿಕಾರಿಗಳಿಗೇ ಹೊಸ ಮೆಷಿನ್ ಗಳ ಮೇಲೆ ಪ್ರೀತಿ. ಆದರೆ ಹೊಸ ಮೆಷಿನ್ ಗಳಿಂದ ಪ್ರಯಾಣಿಕರು ಪರದಾಡುತ್ತಿರುವುದಂತೋ ಸುಳ್ಳಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ