Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಪ್ರಜೆಗಳು ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ್ದ ಆರೋಪಿಯ ಬಂಧನ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾಕಿಸ್ತಾನ ಪ್ರಜೆಗಳು ಅಕ್ರಮವಾಗಿ ದಾಖಲೆಗಳನ್ನಿಟ್ಟುಕೊಂಡು ವಾಸ ಮಾಡುತ್ತಿರುವ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪಾಕಿಸ್ತಾನಿ ಪ್ರಜೆಗಳು ದಾಖಲೆಗಳನ್ನು ಹೊಂದಲು ಸಹಾಯ ಮಾಡಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನ ಪ್ರಜೆಗಳು ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ್ದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Oct 07, 2024 | 8:22 AM

ಬೆಂಗಳೂರು, ಅಕ್ಟೋಬರ್​​ 07: ಅಕ್ರಮವಾಗಿ ಭಾರತದೊಳಗೆ ನುಸುಳಲು ಮತ್ತು ಬೆಂಗಳೂರಿನಲ್ಲಿ ನೆಲೆಯೂರಲು ಪಾಕಿಸ್ತಾನಿ ಪ್ರಜೆಗಳಿಗೆ (Pakistani citizen) ಸಹಾಯ ಮಾಡಿದ್ದ ಆರೋಪಿಯನ್ನು ಜಿಗಣಿ ಪೊಲೀಸರು (Jigani Police) ಶನಿವಾರ ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ 55 ವರ್ಷದ ಪರ್ವೇಜ್​ ಅಹ್ಮದ್​​ ಬಂಧಿತ ವ್ಯಕ್ತಿ. ಹಿಂದೂ ಹೆಸರುಗಳನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ನೆಲಸಿದ್ದ ಐದಕ್ಕೂ ಹೆಚ್ಚು ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಕಳೆದ ವಾರ ಬೆಂಗಳೂರು ಪೊಲೀಸರು ಬಂಧಿಸಿದ್ದರು.

ಬೆಂಗಳೂರು ಹೊರವಲಯದ ಆನೆಕಲ್​ ತಾಲೂಕಿನ ಜಿಗಣಿಯಲ್ಲಿ ವಾಸವಾಗಿದ್ದ ರಷೀದ್​ ಅಲಿ ಸಿದ್ದಕಿ ಕುಟುಂಬ ಮತ್ತು ಪೀಣ್ಯದಲ್ಲಿ ವಾಸವಾಗಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಅಕ್ರಮವಾಗಿ ಭಾರತದ ಒಳಗೆ ನುಸುಳಿ, ಇಲ್ಲಿಯ ಆಧಾರ ಕಾರ್ಡ್​​, ಪ್ಯಾನ್​ ಕಾರ್ಡ್​ ಮತ್ತು ಪಾಸಪೋರ್ಟ್​​ ಮಾಡಿಸಿಕೊಂಡಿದ್ದಾರೆ.

ಆರೋಪಿಗಳು ದಾಖಲಾತಿಗಳನ್ನು ಹೊಂದಲು ಸಹಾಯ ಮಾಡಿದವರನ್ನು ಪತ್ತೆ ಹಚ್ಚಲು ಜಿಗಣಿ ಪೊಲೀಸರು ಎರಡು ತಂಡಗಳಾಗಿ ಮುಂಬೈ ಮತ್ತು ದೆಹಲಿಗೆ ತೆರಳಿದ್ದರು. ಇದೀಗ, ಜಿಗಣಿ ಪೊಲೀಸರು ಪಾಕಿಸ್ತಾನಿ ಪ್ರಜೆಗಳು ಭಾರತೀಯ ದಾಖಲಾತಿ ಹೊಂದಲು ಸಹಾಯ ಮಾಡಿದ ಪರ್ವೇಜ್​​ ಅಹ್ಮದ್​ನನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ​​ ಬಂಧಿತ ಆರೋಪಿಗಳು ಅಂತರಾಷ್ಟ್ರೀಯ ಮೆಹದಿ ಫೌಂಡೇಶನ್​ನೊಂದಿಗೆ ಸಂಪರ್ಕ ಹೊಂದಿದ್ದಾರೆ.

ಇದನ್ನೂ ಓದಿ: ಮತ್ತೆ ಮೂವರು ಪಾಕಿಸ್ತಾನ ಪ್ರಜೆಗಳ ಬಂಧನ, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು

ಪರ್ವೇಜ್ 2007ರಿಂದ ಎಮ್​ಎಫ್​ಐ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಭಾರತಕ್ಕೆ ನುಸುಳಿದ್ದಾರೆ 15ಕ್ಕೂ ಹೆಚ್ಚು ಮಂದಿ!

ಬಂಧಿತ ಪಾಕಿಸ್ತಾನ ಪ್ರಜೆಗಳ ವಿಚಾರಣೆ ವೇಳೆ ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪಾಕಿಸ್ತಾನದಿಂದ 15ಕ್ಕೂ ಹೆಚ್ಚು ಜನ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿರುವುದು ಗೊತ್ತಾಗಿದೆ. ಹದಿನೈದಕ್ಕೂ ಅಧಿಕ ಮಂದಿ ಮೆಹದಿ ಫೌಂಡೇಷನ್ ಸೇರಿದ್ದರು. ಇವರೆಲ್ಲ ಯೂನಸ್ ಅಲ್ಗೋರ್ ಧರ್ಮ ಗುರುಗಳ ಪರ ಪ್ರಚಾರಕ್ಕಾಗಿ ಆಗಮಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ