Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುವುದಾಗಿ ನಂಬಿಸಿ ಮೋಸ: ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಕುಳಿತ ಮಹಿಳೆ

ಬೆಳಗಾವಿಯ ಯೋಧನ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿ ಲವ್, ಸೆಕ್ಸ್, ದೋಖಾ ಆರೋಪ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಇಬ್ಬರು ದೇವರ ಕೋಣೆಯಲ್ಲಿ ಮದುವೆಯಾಗಿದ್ದರು. ಆದರೆ, ಯೋಧ ಒಂಬತ್ತು ಯುವತಿಯರ ಜೊತೆಗೆ ನಂಟಿರುವುದು ಬೆಳಕಿಗೆ ಬಂದಿದೆ. ಸದ್ಯ ಮಹಿಳಾ ಯೋಧನ ಮನೆ ಮುಂದೆ ಧರಣಿ ಮಾಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಮೋಸ: ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಕುಳಿತ ಮಹಿಳೆ
ಮದುವೆಯಾಗುವುದಾಗಿ ನಂಬಿಸಿ ಮೋಸ: ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಕುಳಿತ ಮಹಿಳೆ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Nov 29, 2024 | 3:54 PM

ಬೆಳಗಾವಿ, ನವೆಂಬರ್​​ 29: ಓರ್ವ ಯೋಧ ವಿರುದ್ಧ ರಾಜ್ಯ ಮಹಿಳಾ (Woman) ಹೋರಾಟಗಾರ್ತಿ ಲವ್, ಸೆಕ್ಸ್ ಮತ್ತು ದೋಖಾ ಆರೋಪ ಮಾಡಿದ್ದಾರೆ. ನಗರದ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿ ಪ್ರಮೋದಾ ಹಜಾರೆ,  ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಸದ್ಯ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಹೋರಾಟಗಾರ್ತಿ ಧರಣಿ ಮಾಡಿದ್ದಾರೆ.

ಹದಿನಾಲ್ಕು ವರ್ಷ ಮೇಲ್ಪಟ್ಟ ಮಹಿಳೆ ಜೊತೆಗೆ ಪ್ರೀತಿ-ಪ್ರೇಮ

ಆರು ವರ್ಷದ ಹಿಂದೆ ಫೇಸ್ಬುಕ್​ನಲ್ಲಿ ಅಕ್ಷಯ್ ನಲವಡೆ ಪರಿಚಯವಾಗಿದ್ದ. ತನಗಿಂತ ಹದಿನಾಲ್ಕು ವರ್ಷ ಮೇಲ್ಪಟ್ಟ ಮಹಿಳೆ ಜೊತೆಗೆ ಪ್ರೀತಿ ಮಾಡಿದ್ದ. ಮದುವೆ ಆಗುವುದಾಗಿ ಹೋರಾಟಗಾರ್ತಿಗೆ ನಂಬಿಸಿದ್ದ. ಆರು ವರ್ಷದ ಹಿಂದೆ ಮನೆಯ ದೇವರ ಕೋಣೆ ಮುಂದೆ ಪ್ರಮೋದಾ ಮತ್ತು ಅಕ್ಷಯ್ ಮದುವೆಯಾಗಿದ್ದರು. ಬಳಿಕ ಆತ ಸೇನೆಯಿಂದ ರಜೆಗೆ ಬಂದಾಗ ಹದಿನೈದು ದಿನಗಳ ಕಾಲ ಪ್ರಮೋದಾ ಬಳಿ ಉಳಿದುಕೊಳ್ಳುತ್ತಿದ್ದ.

ಇದನ್ನೂ ಓದಿ: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ವಿಷ ಸೇವಿಸಿ ಅಪ್ರಾಪ್ತ ಯುವತಿ ಸಾವು

ಇದೇ ವೇಳೆ ಅಕ್ಷಯ್​ಗೆ ಒಂಬತ್ತು ಯುವತಿಯರ ಜೊತೆಗೆ ನಂಟಿರುವುದು ಬೆಳಕಿಗೆ ಬಂದಿದೆ. ಅದನ್ನು ಪ್ರಶ್ನೆ ಮಾಡಿದ ಬಳಕ ಎಲ್ಲರನ್ನೂ ಬಿಟ್ಟು ಜೊತೆಗೆ ಇರುವುದಾಗಿ ಅಕ್ಷಯ್ ಹೇಳಿದ್ದ. ಮೊನ್ನೆ ಅಕ್ಷಯ್ ರಜೆಗೆ ಬಂದಾಗ ಬೇರೊಬ್ಬ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಈ ವಿಚಾರ ಗೊತ್ತಾಗಿ ಪ್ರಮೋದಾ ಅಕ್ಷಯ್ ಮನೆಗೆ ಹೋಗಿದ್ದರು. ಹಿರಿಯರು, ಕುಟುಂಬಸ್ಥರು ಕೂಡಿಕೊಂಡು ಸರಿಪಡಿಸುವುದಾಗಿ ಹೇಳಿ ಕಳಿಸಿದ್ದರು. ಬಳಿಕ ಮದುವೆ ಆಗಲ್ಲ ಎಂದು ಅಕ್ಷಯ್ ಉಲ್ಟಾ ಹೊಡೆದಿದ್ದ.

ಇದನ್ನೂ ಓದಿ: 19ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿಯ ಬರ್ಬರ ಹತ್ಯೆ!

ಇದೀಗ ಅಕ್ಷಯ್ ಇಂದು ಮದುವೆ ಆಗಿದ್ದಾನೆ ಅಂತಾ ಆತನ ಮನೆಗೆ ಪ್ರಮೋದಾ ಬಂದಿದ್ದಾರೆ. ಆದರೆ ಅಕ್ಷಯ್ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸಾಯುವವರೆಗೂ ಮ‌ನೆ ಮುಂದೆ ಕುಳಿತುಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ. ಸಾಕಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇನೆ ತನ್ನ ನೆರವಿಗೆ ಬರುವಂತೆ ಪ್ರಮೋದಾ ಮನವಿ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.