ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣವಾಗಿರುವ ಔಷಧ ಬೆಳಗಾವಿಯಲ್ಲಿ ಪತ್ತೆ: ಉಗ್ರಾಣದ ಮೇಲೆ ಲೋಕಾ ದಾಳಿ

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ IV ಗ್ಲುಕೋಸ್‌ನ RLS ಬ್ಯಾಚ್ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಔಷಧ ಉಗ್ರಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಏಪ್ರಿಲ್​ನಿಂದ ಜಿಲ್ಲಾ ಆಸ್ಪತ್ರೆಗಳಿಗೆ ಈ ದ್ರಾವಣ ಪೂರೈಕೆಯಾಗಿರುವುದು ಬಹಿರಂಗವಾಗಿದೆ. ದ್ರಾವಣದ ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗಿದ್ದು, ಡಿಸೆಂಬರ್ 9ರ ವರದಿ ಬರಲಿದೆ.

ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣವಾಗಿರುವ ಔಷಧ ಬೆಳಗಾವಿಯಲ್ಲಿ ಪತ್ತೆ: ಉಗ್ರಾಣದ ಮೇಲೆ ಲೋಕಾ ದಾಳಿ
ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣವಾಗಿರುವ ಔಷಧ ಬೆಳಗಾವಿಯಲ್ಲಿ ಪತ್ತೆ: ಉಗ್ರಾಣದ ಮೇಲೆ ಲೋಕಾ ದಾಳಿ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2024 | 3:17 PM

ಬೆಳಗಾವಿ, ನವೆಂಬರ್​ 30: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸರಣಿ ಸಾವು ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ಈ ಸಾವಿನ ರಹಸ್ಯ ಕೂಡ ಬಯಲಾಗಿದ್ದು, IV ಗ್ಲುಕೋಸ್ ಕಾರಣ ಎಂಬ ವರದಿ ಬಹಿರಂಗಗೊಂಡಿತ್ತು. ಇತ್ತ ಬೆಳಗಾವಿ ಜಿಲ್ಲಾ ಬಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಔಷಧ ಉಗ್ರಾಣದಲ್ಲಿ ಆರ್​ಎಲ್​ಎಸ್​ (RLS​) ಐವಿ ಗ್ಲುಕೋಸ್ ಪತ್ತೆ ಆಗಿದೆ.

ಬೆಳಗಾವಿ ಲೋಕಾಯುಕ್ತ ಎಸ್​ಪಿ ಹನುಮಂತರಾಯ ನೇತೃತ್ವದಲ್ಲಿ 8 ಅಧಿಕಾರಿಗಳಿಂದ ಉಗ್ರಾಣದಲ್ಲಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಪಿಬಿಪಿ ಸಂಸ್ಥೆ‌‌ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸ್​ಗಳು ಪತ್ತೆ ಆಗಿವೆ. ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿಟ್ಟಿದ್ದ ಬಾಕ್ಸ್ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣ ಬಹಿರಂಗ!

ಬೆಳಗಾವಿ ಜಿಲ್ಲಾದ್ಯಂತ ಕಳೆದ ಏಪ್ರಿಲ್ ತಿಂಗಳಿಂದಲೇ RLS​ ಐವಿ ಗ್ಲುಕೋಸ್ ಪೂರೈಕೆಯಾಗಿದ್ದು, ಎಲ್ಲೆಲ್ಲಿ ಪೂರೈಕೆಯಾಗಿದೆ ಎಂಬ ಬಗ್ಗೆ ಉಗ್ರಾಣ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಇದೆ.

ಏನಿದು IV ಫ್ಲೂಯಿಡ್ (ದ್ರಾವಣ)?

ರೋಗಿ ಹಾಗೂ ಆಶಕ್ತರ ದೇಹದಲ್ಲಿ ನೀರು, ಸಕ್ಕರೆ ಮತ್ತು ಕ್ಷಾರ ಅಂಶ ಕಾಪಾಡಲು ರಕ್ತನಾಳದ ಮೂಲಕ ದೇಹಕ್ಕೆ ಫ್ಲೂಯಿಡ್ ಸೇರಿಸಲಾಗುತ್ತದೆ. ನಿರ್ಜಲೀಕರಣದಿಂದ ಬಳಲುತ್ತಿವವರಿಗೆ ಚಿಕಿತ್ಸೆ ನೀಡಲು ಈ ದ್ರಾವಣವನ್ನೇ ಬಳಸಲಾಗುತ್ತದೆ. ನೀರು, ಗ್ಲುಕೋಸ್ ಸಕ್ಕರೆ ಮತ್ತು ಪೋಟ್ಯಾಷಿಯಂ, ಸೋಡಿಯಂ ಮತ್ತು ಕ್ಲೋರೈಡ್​ನಂತಹ ಎಲೆಕ್ಟೋಲೈಟ್​ಗಳನ್ನು ಈ ದ್ರಾವಣ ಹೊಂದಿರುತ್ತದೆ. ವಾಕರಿಕೆ, ವಾಂತಿ ಮತ್ತು ಅತಿಸಾರ ನಿಯಂತ್ರಿಸಿ, ರೋಗಿಯನ್ನು ಆರೋಗ್ಯ ಸ್ಥಿತಿಯಲ್ಲಿ ಇಡಲು ಈ ದ್ರಾವಣ ಸಹಕಾರಿಯಾಗುತ್ತದೆ. ಹೆರಿಗೆ ಆದ ನಂತರ ಬಾಣಂತಿಗೆ ಈ ದ್ರಾವಣವನ್ನು ನೀಡಲಾಗುತ್ತದೆ.

ಫ್ಲೂಯಿಡ್ ಬಳಸದಂತೆ ಸೂಚನೆ

ಸಿಜೇರಿಯನ್ ಬಳಿಕ ಈ ಫ್ಲೂಯಿಡ್ ನೀಡಲಾಗಿತ್ತು. ಸದ್ಯ ಈ ಫ್ಲೂಯಿಡ್ ಸಾವಿಗೆ ಕಾರಣವಾಗಿರು ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಫ್ಲೂಯಿಡ್ ಕ್ವಾಲಿಟಿ ಟೆಸ್ಟ್​ಗೆ ಒಳಪಡಿಸಲಾಗಿದೆ. ಡಿಸೆಂಬರ್ 9 ರಂದು ವರದಿ ಬರಲಿದೆ. ಅಲ್ಲಿಯವರೆಗೂ ಫ್ಲೂಯಿಡ್ ಬಳಸದಂತೆ ಎಲ್ಲಾ ಆಸ್ಪತ್ರೆಗಳಿಗೂ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ 7 ಮಂದಿ ಗರ್ಭಿಣಿಯರಲ್ಲಿ ಮೂವರಿಗೆ ಇಲಿ ಜ್ವರ

ಈ ಐವಿ ಫ್ಲೂಯಿಡ್​ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸರಬರಾಜು ಮಾಡಿತ್ತು. ಸಿಜೇರಿಯನ್ ಬಳಿಕ ಐವಿ ಫ್ಲೂಯಿಡ್ ಹಾಗೂ ಎನ್‌ಎಸ್​ಎಲ್ ಗ್ಲೂಕೋಸ್ ಅನ್ನು ವೈದ್ಯರು ಹಾಕಿದ್ದರು. ಇವುಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಸರಬರಾಜು ಮಾಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.