ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ 7 ಮಂದಿ ಗರ್ಭಿಣಿಯರಲ್ಲಿ ಮೂವರಿಗೆ ಇಲಿ ಜ್ವರ

ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್ ನಂತರ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ತನಿಖೆಯಿಂದ ಐವಿ ದ್ರಾವಣದಲ್ಲಿನ ದೋಷವೇ ಸಾವಿಗೆ ಕಾರಣ ಎಂದು ಪತ್ತೆಯಾಗಿದೆ. ಈ ದ್ರಾವಣದ ಬಳಕೆಯನ್ನು ನಿಷೇಧಿಸಲಾಗಿದೆ. ಉಳಿದ ಮೂವರಲ್ಲಿ ಇಲಿ ಜ್ವರ ಕಂಡುಬಂದಿದೆ. ಈ ಘಟನೆಯು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ.

ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ 7 ಮಂದಿ ಗರ್ಭಿಣಿಯರಲ್ಲಿ ಮೂವರಿಗೆ ಇಲಿ ಜ್ವರ
ಬಳ್ಳಾರಿ ಜಿಲ್ಲಾ ಆಸ್ಪತ್ರೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ವಿವೇಕ ಬಿರಾದಾರ

Updated on:Nov 30, 2024 | 10:19 AM

ಬಳ್ಳಾರಿ, ನವೆಂಬರ್​ 30: ಬಳ್ಳಾರಿ ಸರ್ಕಾರಿ ಜಿಲ್ಲಾ ಆಸ್ಪತ್ರೆ (BIMS) ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಯರು ಮೃತಪಟ್ಟ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನವೆಂಬರ್​ 9 ರಂದು ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಏಳು ಮಂದಿ ಗರ್ಭಣಿಯರಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಸದ್ಯ ಆಸ್ಪತ್ರೆಯಿಂದ ಇಬ್ಬರು ಡಿಸ್ಚಾರ್ಜ್ ಆಗಿದ್ದು, ಓರ್ವ ಬಾಣಂತಿಗೆ ಚಿಕಿತ್ಸೆ ಮುಂದುವರೆದಿದೆ. ಎಂದು ಬಿಮ್ಸ್ ನಿರ್ದೇಶಕ ಡಾ.‌ಗಂಗಾಧರ್ ಗೌಡ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ

ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗೆ ಏಳು ಮಂದಿ ಗರ್ಭಿಣಿಯರು ದಾಖಲಾಗಿದ್ದರು. ಏಳೂ ಮಂದಿ ಗರ್ಭಣಿಯರಿಗೆ ನವೆಂಬರ್​ 9 ರಂದು ಸಿಸೇರಿಯನ್ ಮಾಡಲಾಗಿತ್ತು. ಸಿಸೇರಿಯನ್ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಆರೋಗ್ಯದಲ್ಲಿನ ಏರುಪೇರಿಂದ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಇಲಿ ಜ್ವರದಿಂದ ಇಬ್ಬರು ಗುಣಮುಖರಾಗಿದ್ದು, ಒಬ್ಬರಿಗೆ ಚಿಕಿತ್ಸೆ ಮುಂದೆವರೆದಿದೆ.

ಸಾವಿಗೆ ಕಾರಣ ರಿವಿಲ್

ನಾಲ್ವರು ಬಾಣಂತಿಯರ ಸಾವು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ನವೆಂಬರ್​ 14 ರಂದು ಡಾ.ಸವಿತಾ, ಡಾ. ಬಿ ಬಾಸ್ಕರ್, ಡಾ. ಟಿಆರ್​ ಹರ್ಷಾ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿ ಬಳ್ಳಾರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿತ್ತು.

ಬಳ್ಳಾರಿಗೆ ಬಂದ ತನಿಖಾ ತಂಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರ ಚಿಕಿತ್ಸಾ ವರದಿ ಪಡೆದು ಮೆಡಿಸನ್‌ಗಳ ಸ್ಯಾಂಪಲ್ ಲ್ಯಾಬ್‌ಗಳಲ್ಲಿ ಪರಿಶೀಲನೆ ಮಾಡುವ ಮೂಲಕ ಬಾಣಂತಿಯರ ಸಾವಿಗೆ ನಿಜವಾದ ಕಾರಣವನ್ನು ಪತ್ತೆ ಮಾಡಿತ್ತು. ಬಾಣಂತಿಯರ ಸರಣಿ ಸಾವಿಗೆ ಗ್ಲೊಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣ ಕಾರಣ ಅನ್ನೊದನ್ನ ಸ್ಪಷ್ಟವಾಗಿ ವರದಿ ನೀಡಿದೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಬಾಣಂತಿಯರ ಸಾವು, ಸರ್ಕಾರದ ವಿರುದ್ಧ ಅಶೋಕ್​ ಆಕ್ರೋಶ

ಸಿಸೇರಿಯನ್ ಬಳಿಕ ಇಂಟ್ರಾವೀನಸ್ ಬಾಣಂತಿಯರಿಗೆ ನೀಡಲಾಗಿತ್ತು. ಅದರಿಂದ ರಿಯಾಕ್ಷನ್ ಆಗಿ ಬಹು ಅಂಗಾಗಳ ವೈಫಲ್ಯದಿಂದ ಸಾವಾಗಿದೆ ಅಂತ ವರದಿ ನೀಡಲಾಗಿದೆ. ಇಂಟ್ರಾವೀನಸ್ ಗ್ಲೋಕಸ್ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು, ರಾಜ್ಯದ ಎಲ್ಲ ಡಿಎಚ್​ಒಗಳಿಗೆ ಪತ್ರ ಬರೆದಿದೆ. ಪ್ರಸ್ತುತ ಇಂಟ್ರಾವೀನಸ್ ದ್ರಾವಣವನ್ನು ಸಂಪೂರ್ಣ ಬಳಿಕೆ ನಿಷೇಧ ಮಾಡಲಾಗಿದೆ.

ಏನಿದು ಐವಿ ದ್ರವಣ?

ರೋಗಿ ಹಾಗೂ ಆಶಕ್ತರ ದೇಹದಲ್ಲಿ ನೀರು, ಸಕ್ಕರೆ ಮತ್ತು ಕ್ಷಾರ ಅಂಶ ಕಾಪಾಡಲು ರಕ್ತನಾಳದ ಮೂಲಕ ದೇಹಕ್ಕೆ ಸೇರಿಸಲಾಗುತ್ತದೆ. ನಿರ್ಜಲೀಕರಣದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಈ ದ್ರಾವಣವನ್ನೇ ಬಳಸಲಾಗುತ್ತದೆ. ನೀರು, ಗೂಕೋಸ್ (ಸಕ್ಕರೆ) ಮತ್ತು ಪೋಟ್ಯಾಷಿಯಂ, ಸೋಡಿಯಂ ಮತ್ತು ಕ್ಲೋರೈಡ್ ನಂತಹ ಎಲೆಕ್ಟೋಲೈಟ್​ಗಳನ್ನು ಈ ದ್ರಾವಣ ಹೊಂದಿರುತ್ತದೆ. ವಾಕರಿಕೆ, ವಾಂತಿ ಮತ್ತು ಅತಿಸಾರ ನಿಯಂತ್ರಿಸಿ ರೋಗಿಯನ್ನು ಆರೋಗ್ಯ ಸ್ಥಿತಿಯಲ್ಲಿ ಇಡಲು ಈ ದ್ರಾವಣ ಸಹಕಾರಿಯಾಗಲಿದೆ. ಸದ್ಯಕ್ಕೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬಿರಿದ ಪರಿಣಾಮದಿಂದ ಸದ್ಯಕ್ಕೆ ಬಳಕೆಗೆ ನಿಷೇಧ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:12 am, Sat, 30 November 24