Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣದಲ್ಲಿ ಮಗ ನಿಖಿಲ್ ಸೋಲುಂಡ ಬಾಧೆ ಕುಮಾರಸ್ವಾಮಿಯವರನ್ನು ಇನ್ನೂ ಕಾಡುತ್ತಿದೆ

ಚನ್ನಪಟ್ಟಣದಲ್ಲಿ ಮಗ ನಿಖಿಲ್ ಸೋಲುಂಡ ಬಾಧೆ ಕುಮಾರಸ್ವಾಮಿಯವರನ್ನು ಇನ್ನೂ ಕಾಡುತ್ತಿದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 30, 2024 | 2:37 PM

ಚುನಾವಣೆಯಲ್ಲಿ ಸೋತರೂ ನಿಖಿಲ್ ಕುಮಾರಸ್ವಾಮಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ ಮತ್ತು ಮಾಧ್ಯಮಗಳ ಜೊತೆ ಅವರ ಎಂದಿನಂತೆ ಮಾತಾಡುತ್ತಿದ್ದಾರೆ. ಆಫ್ ಕೋರ್ಸ್ ನಿಖಿಲ್ ಕೂಡ ಒಂದು ವಾರ ಮಾಧ್ಯಮಗಳ ಕಣ್ಣಿಗೆ ಬಿದ್ದಿರಲಿಲ್ಲ ಅನ್ನೋದು ಬೇರೆ ವಿಚಾರ. ಚನ್ನಪಟ್ಟಣ ಚುನಾವಣೆ ಸೋಲನ್ನು ಅವರು ಸ್ಪೋರ್ಟ್ ಆಗಿ ಸ್ವೀಕರಿಸಿದ್ದಾರೆ.

ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಎದುರಾದ ಸೋಲಿನ ಕಹಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಇನ್ನೂ ಬಾಧಿಸುತ್ತಿದೆ. ಮಗನನ್ನು ಗೆಲ್ಲಿಸಲು ಅವರು ಹಗಲು ರಾತ್ರಿ ಶ್ರಮಪಟ್ಟಿದ್ದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು ಇಂದು ಚನ್ನಪಟ್ಟಣದಲ್ಲಿ ಅಯೋಜಿಸಿದ ಕೃತಜ್ಞತಾ ಕಾರ್ಯಕ್ರಮಕ್ಕೆ ಆಗಮಿಸಿದಾಗಲೂ ಅವರು ಎಂದಿನಂತಿರದೆ ಅನ್ಯಮನಸ್ಕರಾಗಿದ್ದರು. ವೇದಿಕೆ ಮೇಲೆ ಬಂದು ತಮ್ಮೊಂದಿಗೆ ಹಸ್ತಲಾಘವ ಮಾಡಿದ ಜನರಿಗೆ ಮತ್ತು ಕಾರ್ಯಕರ್ತರಿಗೆ ಅವರು ಮುಗುಳ್ನಗದೆ ಕೈ ಮುಂದೆ ಚಾಚಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಿಖಿಲ್ ಹ್ಯಾಟ್ರಿಕ್​ ಸೋಲಿನ ಬಗ್ಗೆ ಅನಿತಾ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್