AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಮಾಲ್ ಮಾಲೀಕರು ಸಂಜನಾಳಿಂದ ಬಡ್ಡಿಗೆ ಹಣ ಪಡೆದಿದ್ದಾರೆ!!

ಡ್ರಗ್ಸ್ ಜಾಲದಲ್ಲಿ ಸಕ್ರಿಯಳಾಗಿದ್ದ ಆರೋಪದಲ್ಲಿ ಜೈಲು ಸೇರಿರುವ ಚಿತ್ರನಟಿ ಸಂಜನಾ ಗಲ್ರಾನಿಯ ಬಗ್ಗೆ ಮತ್ತಷ್ಟು ಕೌತುಕಮಯ ಮತ್ತು ಅಷ್ಟೇ ರೋಚಕ ಸಂಗತಿಗಳನ್ನು ಸಿಸಿಬಿ ಮತ್ತು ಇಡಿ ಅಧಿಕಾರಿಗಳು ಬಯಲಿಗೆಳೆಯುತ್ತಿದ್ದಾರೆ. ಆಕೆ ಮಾಲ್ ಮಾಲೀಕರಿಗೂ ಬಡ್ಡಿಗೆ ಹಣ ನೀಡಿದ್ದ ವಿಷಯವೀಗ ಹೊರಬಿದ್ದಿದೆ. ತಾನು ಕೊಟ್ಟ ಸಾಲವನ್ನು ಮತ್ತು ಬಡ್ಡಿಯನ್ನು ವಸೂಲು ಮಾಡಲು 4 ಜನರನ್ನ ಸಂಜನಾ ಇಟ್ಟುಕೊಂಡಿದ್ದಳಂತೆ. ಸಾಲಗಾರರು ಹಣ ಹಿಂತಿರುಗಿಸಲು ವಿಳಂಬಿಸಿದರೆ ಅವರ ದುಬಾರಿ ಕಾರುಗಳನ್ನು ತೆಗೆದುಕೊಂಡು ಬರುವಂತೆ ತನ್ನ ಸಹಾಯಕರಿಗೆ ಹೇಳುತ್ತಿದ್ದಳಂತೆ. ಸಂಜನಾಳ ಖಜಾನೆ ಲೆಕ್ಕ […]

ಬೆಂಗಳೂರಿನ ಮಾಲ್ ಮಾಲೀಕರು ಸಂಜನಾಳಿಂದ ಬಡ್ಡಿಗೆ ಹಣ ಪಡೆದಿದ್ದಾರೆ!!
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 01, 2020 | 10:06 PM

Share

ಡ್ರಗ್ಸ್ ಜಾಲದಲ್ಲಿ ಸಕ್ರಿಯಳಾಗಿದ್ದ ಆರೋಪದಲ್ಲಿ ಜೈಲು ಸೇರಿರುವ ಚಿತ್ರನಟಿ ಸಂಜನಾ ಗಲ್ರಾನಿಯ ಬಗ್ಗೆ ಮತ್ತಷ್ಟು ಕೌತುಕಮಯ ಮತ್ತು ಅಷ್ಟೇ ರೋಚಕ ಸಂಗತಿಗಳನ್ನು ಸಿಸಿಬಿ ಮತ್ತು ಇಡಿ ಅಧಿಕಾರಿಗಳು ಬಯಲಿಗೆಳೆಯುತ್ತಿದ್ದಾರೆ. ಆಕೆ ಮಾಲ್ ಮಾಲೀಕರಿಗೂ ಬಡ್ಡಿಗೆ ಹಣ ನೀಡಿದ್ದ ವಿಷಯವೀಗ ಹೊರಬಿದ್ದಿದೆ. ತಾನು ಕೊಟ್ಟ ಸಾಲವನ್ನು ಮತ್ತು ಬಡ್ಡಿಯನ್ನು ವಸೂಲು ಮಾಡಲು 4 ಜನರನ್ನ ಸಂಜನಾ ಇಟ್ಟುಕೊಂಡಿದ್ದಳಂತೆ. ಸಾಲಗಾರರು ಹಣ ಹಿಂತಿರುಗಿಸಲು ವಿಳಂಬಿಸಿದರೆ ಅವರ ದುಬಾರಿ ಕಾರುಗಳನ್ನು ತೆಗೆದುಕೊಂಡು ಬರುವಂತೆ ತನ್ನ ಸಹಾಯಕರಿಗೆ ಹೇಳುತ್ತಿದ್ದಳಂತೆ.

ಸಂಜನಾಳ ಖಜಾನೆ ಲೆಕ್ಕ ಕೇಳಿ ಇಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಆಕೆಯ 11 ಅಕೌಂಟ್​ಗಳಲ್ಲಿ 40 ಲಕ್ಷ ಬ್ಯಾಲೆನ್ಸ್ ಇದೆಯಂತೆ. ವಿದೇಶಗಳಿಂದಲೂ ನಟಿ ಖಾತೆಗೆ ಹಣ ಜಮೆಯಾಗಿರಬಹುದಾದ ಸಂಶಯವೂ ಅವರಲ್ಲಿ ಹುಟ್ಟಿಕೊಂಡಿದೆ. ಸಂಜನಾ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಪ್ರತಿಷ್ಠಿತ ಉದ್ಯಮಿಗಳಿಗೆ ಕೋಟಿಗಳ ಲೆಕ್ಕದಲ್ಲಿ ಸಾಲ ಕೊಟ್ಟಿರುವ ಮಾಹಿತಿ ಅಧಿಕಾರಿಗಳಿಗೆ ದೊರೆತಿದೆ. ಖುದ್ದು ಸಂಜನಾ ತಾನು ಸಾಲ ಕೊಟ್ಟಿರುವ ವಿಷಯವನ್ನು ಹೇಳಿದ್ದಾಳಂತೆ. ಅಲ್ಲದೆ, ಇಡಿ ಅಧಿಕಾರಿಗಳು ಆಕೆಯ ಮನೆ ಮೇಲೆ ದಾಳಿ ನಡೆಸಿದಾಗ ಹತ್ತಾರು ಚೆಕ್​ಗಳು ಸಿಕ್ಕಿವೆ. ಅದೇ ಆಧಾರದಲ್ಲಿ ಆಕೆಯನ್ನು ಪ್ರಶ್ನಿಸಿದಾಗ ಸಾಲ ನೀಡುತ್ತಿದ್ದ ವಿಷಯ ಗೊತ್ತಾಗಿದೆ.

ಅಂದಹಾಗೆ, ಡ್ರಗ್ಸ್ ಮಾಫಿಯಾದಲ್ಲಿ ಅಕ್ರಮ ಹಣಕಾಸು ವರ್ಗಾವಣೆಯ ಬೆನ್ನತ್ತಿರುವ ಇಡಿ ಕೇರಳ ಮಾಜಿ ಗೃಹ ಸಚಿವರ ಪುತ್ರನ ವಿಚಾರಣೆ ನಡೆಸಲು ಮುಂದಾಗಿದೆ. ಡ್ರಗ್ಸ್ ಜಾಲದಲ್ಲಿ ಕೋಟ್ಯಂತರ ರೂ. ಅಕ್ರಮ ಹಣ ಹರಿದಿರುವ ಸುಳಿವು ಸಿಗುತ್ತಿದ್ದಂತೆ ಆ ಜಾಲದ ಜಾಡು ಹಿಡಿದು ಹೊರಟಿರುವ ಇಡಿ ಅಧಿಕಾರಿಗಳು, ಕೇರಳ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿಗೆ ಸಮನ್ಸ್ ನೀಡಲು ಮುಂದಾಗಿದ್ದಾರೆ. ಕೇರಳದ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಕೇರಳದಲ್ಲಿ ರಾಜಕೀಯ ಸಂಚಲನ ಉಂಟು ಮಾಡಿ ಚರ್ಚೆಗೆ ಗ್ರಾಸವಾದ ಕೇರಳದ ಚಿನ್ನ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ಬಿನೀಶ್ ಕೊಡಿಯೇರಿ ಜತೆ ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿರುವ ಮೊಹಮದ್ ಅನೂಪ್ ಹಣಕಾಸು ವ್ಯವಹಾರ ನಡೆಸಿರುವುದು ತನಿಖೆಯಲ್ಲಿ ಕಂಡು ಬಂದಿದ್ದು, ಈತನನ್ನು ಇಡಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದೆ. ಅನೂಪ್‌ಗೆ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ಖರೀದಿಸಲು ಬಿನೀಶ್ 50 ಲಕ್ಷ ರೂ. ನೀಡಿದ್ದ. ಆದರೆ, ಇದರ ಹಿಂದೆ ಬೇರೆ ಉದ್ದೇಶವಿರುವುದು ಇಡಿ ತನಿಖೆಯಲ್ಲಿ ಗೊತ್ತಾಗಿದೆ. ಚಿನ್ನದ ಸ್ಮಗ್ಲಿಂಗ್ ಕೇಸ್‌ನಲ್ಲಿ ಕೇರಳ ಇಡಿ ಬಿನೀಶ್‌ನ್ನು ವಿಚಾರಣೆ ನಡೆಸಿದಾಗ ಡ್ರಗ್ಸ್ ಕೇಸ್‌ನಲ್ಲಿ ಈತನ ಹೆಸರು ತಳುಕು ಹಾಕಿಕೊಂಡಿತ್ತು. ಇದರ ಬೆನ್ನಲ್ಲೇ ಕೇರಳ ಇಡಿ ಅಧಿಕಾರಿಗಳು ಬೆಂಗಳೂರು ಇಡಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸಮನ್ಸ್ ಕೈಗೆ ಸಿಕ್ಕ ಕೂಡಲೇ ಬಿನೀಶ್ ಬೆಂಗಳೂರು ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ.

ಒಟ್ಟಿನಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸಿಸಿಬಿಯಿಂದ ಬಂಧನಕ್ಕೊಳಗಾಗಿ ಜೈಲು ಸೇರಿರುವ ಸಂಜನಾಳ ಒರಿಜಿನಲ್ ಬಣ್ಣ ಕ್ರಮೇಣವಾಗಿ ಬಯಲಾಗುತ್ತಿದೆ