AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮದ್ಯ ಸೇವಿಸಲು ಹಣಕ್ಕಾಗಿ ಬೈಕ್ ಕಳ್ಳತನ, ಆರೋಪಿ ಬಂಧನ

ದಿನನಿತ್ಯ ಮದ್ಯ ಸೇವಿಸಲು ಹಣಕ್ಕಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ನಗರದ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು ಅದರ ಬ್ಯಾಟರಿ, ಟೈರ್​ಗಳನ್ನು ತೆಗೆದು ಮಾರಾಟ ಮಾಡಿ ಬೈಕ್​ ಅನ್ನು ಮತ್ತೊಂದು ಠಾಣಾ ವ್ಯಾಪ್ತಿಯಲ್ಲಿ ಬಿಟ್ಟು ಹೋಗುತ್ತಿದ್ದನು.

ಬೆಂಗಳೂರು: ಮದ್ಯ ಸೇವಿಸಲು ಹಣಕ್ಕಾಗಿ ಬೈಕ್ ಕಳ್ಳತನ, ಆರೋಪಿ ಬಂಧನ
ಮದ್ಯ ಸೇವಿಸಲು ಹಣಕ್ಕಾಗಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಶಿವಪ್ರಸಾದ್​ ಬಿ.
| Edited By: Rakesh Nayak Manchi|

Updated on: Nov 04, 2023 | 10:07 AM

Share

ಬೆಂಗಳೂರು, ನ.4: ದಿನನಿತ್ಯ ಮದ್ಯ ಸೇವಿಸಲು ಹಣಕ್ಕಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು (Bengaluru) ನಗರದ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು ಅದರ ಬ್ಯಾಟರಿ, ಟೈರ್​ಗಳನ್ನು ತೆಗೆದು ಮಾರಾಟ ಮಾಡಿ ಬೈಕ್​ ಅನ್ನು ಮತ್ತೊಂದು ಠಾಣಾ ವ್ಯಾಪ್ತಿಯಲ್ಲಿ ಬಿಟ್ಟು ಹೋಗುತ್ತಿದ್ದನು.

ಕ್ವಾರ್ಟರ್‌ ಎಣ್ಣೆಗಾಗಿ ಬೈಕ್ ಕದಿಯುತ್ತಿದ್ದ ಲಕ್ಷ್ಮಣ್ ಬಂಧಿತ ಆರೋಪಿ. ದಿನನಿತ್ಯ ಮದ್ಯ ಸೇವಿಸಲು ಹಣಕ್ಕಾಗಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈತ, ಮದ್ಯ ಸೇವಿಸಲು ಬೈಕ್ ಕದ್ದು ಬ್ಯಾಟರಿ ಮಾರಾಟ ಮಾಡಿ ಬಂದ ಹಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದನು.

ಇದನ್ನೂ ಓದಿ: ಬೆಂಗಳೂರು: 100 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೆಗಳ್ಳನ ಬಂಧನ

ಕೆಲವು ತಿಂಗಳ ಹಿಂದೆ ಪೊಲೀಸರ ಕೈಗೆ ಲಾಕ್ ಆಗಿ ಜೈಲು ಸೇರಿದ್ದ ಆರೋಪಿ, ಜೈಲಿಂದ ಬಿಡುಗಡೆ ಬಳಿಕ ಮತ್ತೆ ಬೈಕ್ ಕಳ್ಳತನ ಮುಂದುವರೆಸಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 15 ಪ್ರಕರಣ ದಾಖಲಾಗಿವೆ.

ಸದ್ಯ ಆರೋಪಿ ಲಕ್ಷ್ಮಣನನ್ನು ಬಂಧಿಸಿದ ಗಿರಿನಗರ ಠಾಣಾ ಪೊಲೀಸರು, ಈತನಿಂದ 11.55 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ, ತನಿಖೆಯನ್ನು ಮುಂದುವರಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More