ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ವ್ಯಕ್ತಿಯ ಬಂಧನ: 3 ಲಕ್ಷ ಮೌಲ್ಯದ 7 ಬೈಕ್​ಗಳು ಜಪ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2023 | 5:35 PM

ಬೇಗೂರು, ನೆಲಮಂಗಲ, ರಾಜಗೋಪಾಲ್ ನಗರಗಳಲ್ಲಿ ಹಲವು ವರ್ಷಗಳಿಂದ ಬೈಕ್​ಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ನಂದಿನಿ ಲೇಔಟ್ ಪೊಲೀಸರು ಮತ್ತೆ ಅರೆಸ್ಟ್​ ಮಾಡಿದ್ದಾರೆ. ಬಂಧಿತನಿಂದ 3 ಲಕ್ಷ ರೂ. ಮೌಲ್ಯದ 7 ಬೈಕ್​ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ವ್ಯಕ್ತಿಯ ಬಂಧನ: 3 ಲಕ್ಷ ಮೌಲ್ಯದ 7 ಬೈಕ್​ಗಳು ಜಪ್ತಿ
ಪವನ್​ ಕುಮಾರ್ ಬಂಧಿತ ವ್ಯಕ್ತಿ
Follow us on

ಬೆಂಗಳೂರು, ಆಗಸ್ಟ್​ 28: ದ್ವಿಚಕ್ರ ವಾಹನ (bikes) ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ 7 ಬೈಕ್​ಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪವನ್​ ಕುಮಾರ್ ಬಂಧಿತ ವ್ಯಕ್ತಿ. ಹಲವು ವರ್ಷಗಳಿಂದ ಬೈಕ್​ಗಳನ್ನು ಕದಿಯುತ್ತಿದ್ದ. ಬೇಗೂರು, ನೆಲಮಂಗಲ, ರಾಜಗೋಪಾಲ್ ನಗರಗಳಲ್ಲಿ ಕೃತ್ಯವೆಸಗಿದ್ದ. ಅಷ್ಟೇ ಅಲ್ಲದೆ ಜೈಲಿಗೆ ಹೋಗಿ ಬಂದು ಮತ್ತೆ ಕಳ್ಳತನ ಮುಂದುವರಿಸಿದ್ದ. ನಂದಿನಿಲೇಔಟ್, ಹೆಚ್​ಎಸ್​​ಆರ್ ಲೇಔಟ್​, ಕೊತ್ತನೂರು, ಬಾಗಲಗುಂಟೆ ಸೇರಿ 7 ಹೊಸ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆರೋಪಿಯನ್ನು ಬಂಧಿಸಿರವ ಪೊಲೀಸರು ಮತ್ತೆ ಜೈಲಿಗೆ ಕಳುಹಿಸಿದ್ದಾರೆ. ಬೆಂಗಳೂರಿನ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೈಕ್​​ ವೀಲಿಂಗ್​​ ಮಾಡಲು ಐಶಾರಾಮಿ ಬೈಕ್ ಕಳ್ಳತನ: ಇಬ್ಬರು ಯುವಕರ ಬಂಧನ

ಮೈಸೂರು: ಬೈಕ್​​ ವೀಲಿಂಗ್​​ ಮಾಡಲು ಐಶಾರಾಮಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನಿತಿನ್ ಹಾಗೂ ಧನಸ್ಸು ಬಂಧಿತ ಯುವಕರು. ಇಬ್ಬರಿಗೂ ಕೇವಲ 19 ವರ್ಷ. ಇವರಿಬ್ಬರು ಸದ್ಯ ನಾಲ್ಕಕ್ಕೂ ಹೆಚ್ಚು ಬೈಕ್‌ಗಳನ್ನು ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಇವರು ಬೈಕ್ ಕಳ್ಳತನ ಮಾಡುತ್ತಿದ್ದ ಉದ್ದೇಶ ವೀಲಿಂಗ್ ಮಾಡುವುದಾಗಿತ್ತು.

ಇದನ್ನೂ ಓದಿ; ಚಿಕ್ಕಮಗಳೂರು: ಕದ್ದ ಹಣ ವಾಪಸ್ ನೀಡಲು 1500 ರೂ ಸಾಲ: ತೀರಿಸಲಾಗದೇ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ

ಐಶಾರಾಮಿ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇವರು ಕದ್ದ ಬೈಕ್ ಬಳಸಿಕೊಂಡು ಮತ್ತೊಂದು ಕಳ್ಳತನ ಮಾಡುತ್ತಿದ್ದರು. ಅಷ್ಟೇ ಅಲ್ಲ ಕದ್ದ ಬೈಕ್‌ಗಳನ್ನು ಕಾಲೇಜು ಹುಡುಗರಿಗೆ ಬಾಡಿಗೆಗೆ ಕೊಡುತ್ತಿದ್ದರು.

ಇದನ್ನೂ ಓದಿ: ಉಡುಪಿ: ಆನ್‌ಲೈನ್‌ನಲ್ಲಿ ಸಾಲ ಮಾಡಿ ಮರು ಪಾವತಿ ಮಾಡಲಾಗದೆ ವ್ಯಕ್ತಿ ಆತ್ಮಹತ್ಯೆ

ಇವರಿಬ್ಬರು ಕಳೆದ ಮೂರು ವರ್ಷದಿಂದ ಅಂದ್ರೆ ಅವರಿಗೆ 16 ವರ್ಷ ಇದ್ದಾಗಿನಿಂದಲೂ ಈ ರೀತಿ ಕಳ್ಳತನ ಮಾಡುತ್ತಿದ್ದರಂತೆ. ಸದ್ಯ ಇವರಿಂದ ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದೆಲ್ಲಾ ಏನೇ ಇರಲಿ ವೀಲ್​ ಶೋಕಿ ಯುವಕರನ್ನು ಕಳ್ಳರನ್ನಾಗಿಸಿ ಜೈಲು ಸೇರುವಂತೆ ಮಾಡಿರುವುದು ಮಾತ್ರ ದುರಂತ.

ಪಾನಿಪೂರಿ ತಿಂದು ಹಣ ಕೇಳಿದ್ದಕ್ಕೆ ಅವಾಜ್​ ಹಾಕಿದ ವ್ಯಕ್ತಿಯ ಬಂಧನ

ನೆಲಮಂಗಲ: ಪಾನಿಪೂರಿ ತಿಂದು ಹಣ ಕೇಳಿದ್ದಕ್ಕೆ ಅವಾಜ್​ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್​​ನಲ್ಲಿ ಘಟನೆ ನಡೆದಿದೆ. ವಾಜರಹಳ್ಳಿಯ ರಂಜಿತ್(25)ಬಂಧಿತ ವ್ಯಕ್ತಿ. ಪುನೀತ್​ ಎಂಬುವವರಿಗೆ ಅವಾಜ್​ ಹಾಕಿದ್ದು, ಪಾನಿಪೂರಿ ಅಂಗಡಿಯನ್ನೇ ಧ್ವಂಸ ಮಾಡಿದ್ದ. ಆರೋಪಿ ರಂಜಿತ್ ಕೃತ್ಯ ಸಿಸಿಕ್ಯಾಮಾರದಲ್ಲಿ ಸರೆಯಾಗಿದ್ದು, ವಿಡಿಯೋ ಅಧಾರಿಸಿ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:34 pm, Mon, 28 August 23