ವಿದೇಶಿಗರಿಂದ ಇಂಗ್ಲೀಷ್, ಸ್ಪಾನಿಷ್ ಕಲಿತು ಮೈಸೂರು ರಾಜವಂಶಸ್ಥರ ಹೆಸರಲ್ಲಿ ವ್ಯಕ್ತಿಯಿಂದ ಯುವತಿಯರಿಗೆ ವಂಚನೆ

| Updated By: guruganesh bhat

Updated on: Jul 12, 2021 | 7:57 PM

ಆರೋಪಿ ಯುಎಸ್ ಇಂಗ್ಲಿಷ್, ಸ್ಪಾನಿಷ್, ಮಳಯಾಳಂ ಮತ್ತು ಕನ್ನಡ ಭಾಷೆಗಳನ್ನು ಮಾತಾಡುತ್ತಾನೆ. ಪಿರಿಯಾಪಟ್ಟದಲ್ಲಿ ಪ್ರವಾಸಿಗಳಾಗಿ ಬರುವವರ ಬಳಿ ಭಾಷೆ ಕಲಿತಿದ್ದ. ಯೂಟ್ಯೂಬ್ ನೋಡಿ ವಂಚನೆ ನಡೆಸುವುದನ್ನು ಕಲಿತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದೇಶಿಗರಿಂದ ಇಂಗ್ಲೀಷ್, ಸ್ಪಾನಿಷ್ ಕಲಿತು ಮೈಸೂರು ರಾಜವಂಶಸ್ಥರ ಹೆಸರಲ್ಲಿ ವ್ಯಕ್ತಿಯಿಂದ ಯುವತಿಯರಿಗೆ ವಂಚನೆ
ರಾಜವಂಶಸ್ಥರ ಹೆಸರಲ್ಲಿ ವಂಚನೆ ಎಸಗುತ್ತಿದ್ದ ವ್ಯಕ್ತಿ
Follow us on

ಬೆಂಗಳೂರು: ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ವ್ಯಕ್ತಿಯೋರ್ವ ಹಲವು ಯುವತಿಯರಿಗೆ ವಂಚನೆ ಎಸಗಿದ ಪ್ರಕರಣ ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದು ವಂಚನೆ ಎಸಗಿದ್ದು, ವೈಟ್‌ಫೀಲ್ಡ್‌ ಸಿಇಎನ್ ಠಾಣೆಯಲ್ಲಿ ಯುವತಿಯೋರ್ವಳು ದೂರು ನೀಡಿದ್ದಳು. ಆರೋಪಿಯ ನಿಜವಾದ ಹೆಸರು ಮುತ್ತು ಎಂದು ತಿಳಿದುಬಂದಿದ್ದು, ಸಿದ್ದಾರ್ಥ ಎಂಬ ಹೆಸರಿನಲ್ಲಿ ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದ ಎಂದು ಬೆಂಗಳೂರಿನ ವೈಟ್‌ಫೀಲ್ಡ್‌ ಡಿಸಿಪಿ ದೇವರಾಜ್‌ ತಿಳಿಸಿದ್ದಾರೆ. ಮೂವರು ಯುವತಿಯರ ಬಳಿ ವೈಯಕ್ತಿಕ ಸಹಾಯ ಬೇಕೆಂದು ಹಣವನ್ನು ಖಾತೆಗೆ ಹಾಕಿಸಿಕೊಳ್ಳುತ್ತಿದ್ದ ಆರೋಪಿ ಒಟ್ಟಾರೆಯಾಗಿ ಮೂರು ಪ್ರಕರಣಗಳಲ್ಲಿ 40 ಲಕ್ಷ ವಂಚನೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯರಿಂದ ಹಣ ಹಾಕಿಸಿಕೊಂಡ ಅಕೌಂಟ್ ನಂಬರ್ ಪಡೆದು ಹೋದಾಗ ಪಿರಿಯಾಪಟ್ಟಣದಲ್ಲಿ ಆರೋಪಿಯ ಮಾಹಿತಿ ಸಿಕ್ಕಿತ್ತು. ಆರೋಪಿ ಯುಎಸ್ ಇಂಗ್ಲಿಷ್, ಸ್ಪಾನಿಷ್, ಮಳಯಾಳಂ ಮತ್ತು ಕನ್ನಡ ಭಾಷೆಗಳನ್ನು ಮಾತಾಡುತ್ತಾನೆ. ಪಿರಿಯಾಪಟ್ಟದಲ್ಲಿ ಪ್ರವಾಸಿಗಳಾಗಿ ಬರುವವರ ಬಳಿ ಭಾಷೆ ಕಲಿತಿದ್ದ. ಯೂಟ್ಯೂಬ್ ನೋಡಿ ವಂಚನೆ ನಡೆಸುವುದನ್ನು ಕಲಿತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಲುಕುಪ್ಪೆಯಲ್ಲಿ ಕೂಲಿ ಕೆಲಸ ಮಾಡುವರಿಗೆ 2-3 ಸಾವಿರ ಹಣ ಕೊಟ್ಟು ಅವರ ಅಕೌಂಟ್ ಪಡೆದು ಆರ್​ಟಿಜಿಎಸ್ ಮಾಡುತ್ತಿದ್ದ. ಐಷಾರಾಮಿ‌ ಜೀವನ‌ ಮಾಡ್ತಿದ್ದು, ಗ್ಯಾಂಬ್ಲಿಂಗ್ ಮಾಡ್ತಿದ್ದ. ಯೂಟ್ಯೂಬ್​ನಲ್ಲಿ ಕೆಲ ವಿಡಿಯೋ ನೋಡಿ ಪ್ರೇರೇಪಿತನಾಗಿ ವಂಚನೆ ಮಾಡಲು ಮುಂದಾದೆ ಅಂತ ಹೇಳಿದ್ದಾನೆ. ಎರಡು ವರ್ಷದಿಂದ ಈ ಕೆಲಸ ಮಾಡಿದ್ದಾಗಿ ಮಾಹಿತಿ ಸಿಕ್ಕಿದೆ. ಏಳನೇ ತರಗತಿ ಮುಗಿಸಿ, ಆ ಬಳಿಕ ಶಾಲೆಗೆ ಹೋಗಿರಲಿಲ್ಲ. ಆರೋಪಿಗೆ ಸಹಾಯ ಮಾಡುತ್ತಿದ್ದ ಇನ್ನೋರ್ವನ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 

ಹಿರಿಯ ಕ್ರೈಂ ವರದಿಗಾರ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನ

Explainer: ಏನಿದು ರಿಪೇರಿ ಮಾಡಿಕೊಳ್ಳುವ ಹಕ್ಕು ಬೇಕೆಂಬ ಹೊಸ ಚಳವಳಿ? ಏನಿದೆ ಅನಿವಾರ್ಯತೆ?

(Man cheats women in the name of Mysore Royal Family in Periyapatna)

Published On - 7:54 pm, Mon, 12 July 21