ಹಿರಿಯ ಕ್ರೈಂ ವರದಿಗಾರ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನ
ರವಿ ಬೆಳಗೆರೆ ಜೊತೆಗೆ ವೈಮನಸ್ಸು ಉಂಟಾಗಿ ಹಾಯ್ ಬೆಂಗಳೂರು ಪತ್ರಿಕೆಯಿಂದ ಹೊರಬರುವಂತಾಗಿತ್ತು. ನಂತರ ಚಾರ್ಲಿ ಟೈಮ್ಸ್ ಕ್ರೈಮ್ ಪೇಪರ್ ಶುರುಮಾಡಿದ್ದರು.ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದರು.
ಚಿಕ್ಕಮಗಳೂರು: ಕ್ರೈಂ ವರದಿಗಾರಿಕೆಯಲ್ಲಿ ಬಹಳ ಹೆಸರು ಸಂಪಾದಿಸಿದ್ದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ಇಂದು (ಜುಲೈ 12) ನಿಧನ ಹೊಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯವರಾದ ಸುನಿಲ್ ಅವರಿಗೆ 43 ವರ್ಷ ವಯಸ್ಸಾಗಿತ್ತು. ಜಿಲ್ಲೆಯ ಗೋಣಿಬೀಡು ಆಸ್ಪತ್ರೆಯಲ್ಲಿ ಅವರು ಹೃದಯಾಘಾತದಿಂದ ನಿಧನ ಕೊನೆಯುಸಿರೆಳೆದಿದ್ದಾರೆ.
ರವಿ ಬೆಳಗೆರೆ ಶಿಷ್ಯನಾಗಿದ್ದ ಸುನೀಲ್ ಹೆಗ್ಗರವಳ್ಳಿ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಯ್ ಬೆಂಗಳೂರು ಪತ್ರಿಕೆ ಮೂಲಕವೇ ತಮ್ಮ ವೃತ್ತಿಜೀವನವನ್ನು ಅವರು ಆರಂಭಿಸಿದ್ದರು. ಆದರೆ, ಇತ್ತೀಚಿಗಿನ ಕೆಲ ವರ್ಷಗಳ ಹಿಂದೆ ರವಿ ಬೆಳಗೆರೆ ಮತ್ತು ಸುನೀಲ್ ಹೆಗ್ಗರವಳ್ಳಿ ನಡುವೆ ವೈಮನಸ್ಸು ಉಂಟಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿ ಅವರು ಮಾಡಿದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು. ರವಿ ಬೆಳಗೆರೆಯವರ ಅತ್ಯಾಪ್ತನಾಗಿದ್ದುಕೊಂಡು ನಂತರ ಅನಾರೋಗ್ಯದ ಸನ್ನಿವೇಶದಲ್ಲಿ ಕೂಡ ಪತ್ರಿಕೆಯನ್ನು ಸಂಪಾದಕನಾಗಿ ಮುನ್ನಡೆಸಿದ್ದರು.
ಆದರೆ, ರವಿ ಬೆಳಗೆರೆ ಜೊತೆಗೆ ವೈಮನಸ್ಸು ಉಂಟಾಗಿ ಹಾಯ್ ಬೆಂಗಳೂರು ಪತ್ರಿಕೆಯಿಂದ ಹೊರಬರುವಂತಾಗಿತ್ತು. ನಂತರ ಚಾರ್ಲಿ ಟೈಮ್ಸ್ ಕ್ರೈಮ್ ಪೇಪರ್ ಶುರುಮಾಡಿದ್ದರು.ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದರು.
ಇದನ್ನೂ ಓದಿ: ಕ್ಲಿನಿಕಲ್ ಡಿಪ್ರೆಶನ್ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ
Published On - 7:03 pm, Mon, 12 July 21