ಬೇಬಿ ಬೆಟ್ಟದಲ್ಲಿ ಎಲ್ಲ ಜನಪ್ರತಿನಿಧಿಗಳ ಎದುರು ನುರಿತ ವಿಜ್ಞಾನಿಗಳಿಂದ ಬ್ಲಾಸ್ಟಿಂಗ್ ಟೆಸ್ಟ್: ಗಣಿ ಸಚಿವ ಮುರುಗೇಶ್ ನಿರಾಣಿ ಘೋಷಣೆ

ಕೆ.ಆರ್‌.ಎಸ್. ಸುತ್ತ15 ಕಿಲೋಮೀಟರ್ ಗಣಿಗಾರಿಕೆ ಮಾಡಬಾರದು ಎಂಬ ಆದೇಶ ಮಾಡಿದ್ದೇನೆ. ಆದರೆ ಈಗ ಅಲ್ಲಿ ಕಳೆದ 3 ತಿಂಗಳಿಂದ ಯಾವುದೇ ಗಣಿಗಾರಿಕೆ ನಡೆಯದೇ ಸುಮಾರು 38 ಗಣಿಗಾರಿಕೆಗಳು ನಿಂತಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ: ಗಣಿ ಸಚಿವ ಮುರುಗೇಶ್ ನಿರಾಣಿ

ಬೇಬಿ ಬೆಟ್ಟದಲ್ಲಿ ಎಲ್ಲ ಜನಪ್ರತಿನಿಧಿಗಳ ಎದುರು ನುರಿತ ವಿಜ್ಞಾನಿಗಳಿಂದ ಬ್ಲಾಸ್ಟಿಂಗ್ ಟೆಸ್ಟ್: ಗಣಿ ಸಚಿವ ಮುರುಗೇಶ್ ನಿರಾಣಿ ಘೋಷಣೆ
ಸುಮಲತಾ ಅಂಬರೀಶ್ ಮತ್ತು ಮುರುಗೇಶ್ ನಿರಾಣಿ
Follow us
| Updated By: guruganesh bhat

Updated on:Jul 12, 2021 | 5:56 PM

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಕೆಆರ್​ಎಸ್ ಆಣೆಕಟ್ಟು ಬಿರುಕು ಮತ್ತು ಅಕ್ರಮ ಗಣಿಗಾರಿಕೆ ವಿವಾದ ತಾರ್ತಿಕ ಹಂತಕ್ಕೆ ಸಾಗುವ ಲಕ್ಷಣಗಳು ನಿಧಾನವಾಗಿ ಗೋಚರಿಸುತ್ತಿವೆ.  ಮಂಡ್ಯ ಸಂಸದೆ ರಾಜ್ಯದ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಈ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಗಣಿ ಸಚಿವ ಮುರುಗೇಶ್ ನಿರಾಣಿ, ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಅಂತ ಆರೋಪ ಕೇಳಿಬಂದಿದೆ. ಫೆಬ್ರವರಿಯಲ್ಲಿ ನಾನು ಮಂಡ್ಯದಲ್ಲಿ ಸ್ಥಳೀಯ ನಾಯಕರ ಸಭೆ ಮಾಡಿದ್ದೆ. ಅದೇ ದಿನ ವರದಿ ಬರೋವರೆಗೂ ಕೆ.ಆರ್‌.ಎಸ್. ಸುತ್ತ15 ಕಿಲೋಮೀಟರ್ ಗಣಿಗಾರಿಕೆ ಮಾಡಬಾರದು ಎಂಬ ಆದೇಶ ಮಾಡಿದ್ದೇನೆ. ಆದರೆ ಈಗ ಅಲ್ಲಿ ಕಳೆದ 3 ತಿಂಗಳಿಂದ ಯಾವುದೇ ಗಣಿಗಾರಿಕೆ ನಡೆಯದೇ ಸುಮಾರು 38 ಗಣಿಗಾರಿಕೆಗಳು ನಿಂತಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಆದರೂ ಸಂಸದರು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ‌ ಬಗ್ಗೆ ಪರಿಶೀಲಿಸುತ್ತೇವೆ. ಮುಂದೆಯೂ ಡ್ಯಾಂಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಬ್ಲಾಸ್ಟ್ ಚೆಕ್ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲಾ ಜನಪ್ರತಿನಿಧಿಗಳ ಮುಂದೆ ಬ್ಲಾಸ್ಟ್ ಮಾಡಿ ಡ್ಯಾಂಗೆ ಏನಾದ್ರು ತೊಂದರೆ ಆಗುತ್ತಾ ಅಂತ ಚೆಕ್ ಮಾಡುತ್ತೇವೆ. ಬ್ಲಾಸ್ಟ್ ವರದಿ ಬಂದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಯಾವುದೇ ಗಣಿಗಾರಿಕೆ ಮಾಡಲು ಅವಕಾಶ ಕೊಡಲ್ಲ. ಟ್ರಯಲ್ ಬ್ಲಾಸ್ಟಿಂಗ್ ಟೆಸ್ಟ್ ಶೀಘ್ರವೇ ಮಾಡುತ್ತೇವೆ. ನುರಿತ ವಿಜ್ಞಾನಿಗಳು ಇದರ ಟೆಸ್ಟ್ ಮಾಡಲಿದ್ದು, ನಂತರವೇ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಸಂಸದೆ ಸುಮಲತಾ ಅಂಬರೀಶ್ ಭೇಟಿಯ ನಂತರ ತಿಳಿಸಿದರು.

ಗಣಿ ಸಚಿವರ ಭೇಟಿಯ ನಂತರ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು? ಗಣಿ ಸಚಿವರು ಮೊದಲ ವಾರದಲ್ಲೇ ನನ್ನ ಜೊತೆ ಶ್ರೀರಂಗಪಟ್ಟಣದ ಕಾಳೇಹಳ್ಳಿಗೆ ನನ್ನ ಜೊತೆ ಬಂದಿದ್ದರು. ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಪರಿಶೀಲನೆ ಮಾಡಲಾಗಿತ್ತು. ಪರಿಶೀಲನೆ ಬಳಿಕ ಮಂಡ್ಯ ಎಸ್​ಪಿ ಹಾಗೂ ಮೈನಿಂಗ್ ಅಥಾರಿಟಿಗೆ ಸಚಿವರು ಸೂಚನೆ ನೀಡಿದರು ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು. ಶ್ರೀರಂಗಪಟ್ಟಣದ ಹಲವಾರು ಅಕ್ರಮ ಗಣಿ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೆವು. ಸ್ಥಳೀಯರ ಹಂಚಿಕೊಂಡ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದೇನೆ. ಕೆಆರ್​ಎಸ್ ಡ್ಯಾಮ್ ಸುತ್ತಮುತ್ತಲಿನ ಬೇಬಿ ಬೆಟ್ಟ ಗಣಿ ಪ್ರದೇಶದಲ್ಲಿ ಅಕ್ರಮ ನಡೆಯಬಾರದು. ನಡೆಯಲು ಬಿಡಬಾರದು. ಸಾವಿರಾರು ಕೋಟಿ ರಾಜಧನ ನಷ್ಟವಾಗುತ್ತದೆ. ಕಠಿಣ ಕ್ರಮ ತೆಗೆದುಕೊಂಡು ರಾಜಧನ ವಸೂಲಿ ಮಾಡಬೇಕು. ಮಂಡ್ಯ ಅಭಿವೃದ್ಧಿ ಕೆಲಸಕ್ಕೆ ಬಳಸಬೇಕು ಅಂತಾ ವಿನಂತಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಯಾವರೀತಿ ಕ್ರಮ ತಗೋಬೇಕು, ಹೇಗೆ ಸರಿಪಡಿಸಬೇಕು ಅನ್ನೋದನ್ನ ಮಾತಾಡಿದ್ದೇವೆ. ಬೇಬಿ ಬೆಟ್ಟಕ್ಕೆ ಹೋಗಿ ಪರಿಶೀಲನೆ ನಡೆಸುತ್ತೇನೆ. ಸಚಿವರು ಇದೇ 14ಕ್ಕೆ ಅಥವಾ ಮುಂದಿನ ದಿನಗಳಲ್ಲಿ ನಾನೇ ಬಂದು ಪರಿಶೀಲಿಸುತ್ತೇನೆ ಅಂತಾ ಹೇಳಿದ್ದಾರೆ. ನಾನೂ ಸಹ ಮಂಡ್ಯ ಪ್ರವಾಸ ಮಾಡುವೆ. ಕೆಆರ್ ಎಸ್​ಗೂ ಹೋಗುವೆ. ಕೊವಿಡ್​ನಿಂದ ನಿಂತಿದ್ದ ಸಭೆ ಮತ್ತೊಮ್ಮೆ ಇದೀಗ ನಡೆಯಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಇದನ್ನೂ ಓದಿ: 

ಬೇಬಿ ಬೆಟ್ಟದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಕ್ಕೆ ಚಿಂತನೆ; ಸದ್ಯ ಕೆಆರ್​ಎಸ್ ಡ್ಯಾಂಗೆ ತೊಂದರೆ ಇಲ್ಲ: ನಾರಾಯಣ ಗೌಡ

ಕೆಆರ್​ಎಸ್​ ಒಡೆದಿಲ್ಲ ಅಂತಿದ್ದಾರೆ ಅಧಿಕಾರಿಗಳು, ಈಗಲಾದರೂ ಕ್ಷಮೆ ಕೇಳಿ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ -ದಳಪತಿಗಳಿಂದ ಹಸಿರು ಬಾವುಟ

(After met MP Sumalatha Ambarish Mines Minister Murugesh Nirani announced Blasting Test by Expert Scientists in front of all peoples representatives in Baby Hill near KRS Dam)

Published On - 5:24 pm, Mon, 12 July 21