AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಆರ್​ಎಸ್​ ಒಡೆದಿಲ್ಲ ಅಂತಿದ್ದಾರೆ ಅಧಿಕಾರಿಗಳು, ಈಗಲಾದರೂ ಕ್ಷಮೆ ಕೇಳಿ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ -ದಳಪತಿಗಳಿಂದ ಹಸಿರು ಬಾವುಟ

Sumalatha Ambareesh: ಕೆಆರ್​ಎಸ್​ ಒಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈಗಲಾದರೂ ಬಂದು KRS ಒಡೆದಿಲ್ಲ ಎಂದು ಹೇಳಿ ಕ್ಷಮೆ ಕೇಳಿ. ಕೆಆರ್​ಎಸ್ ಡ್ಯಾಂ ವಿಚಾರಕ್ಕೆ ಇಲ್ಲಿಗೇ ತೆರೆ ಎಳೆಯೋಣ. ಅದು ಬಿಟ್ಟು ಬೇರೆ ಯಾವುದೋ ವಿಚಾರಕ್ಕೆ ಹೋಗೋದು ಬೇಡ ಎಂದು ಹೇಳುವ ಮೂಲಕ ಜೆಡಿಎಸ್ ದಳಪತಿಗಳು ಹಸಿರು ಬಾವುಟ ಬೀಸುವುದಕ್ಕೆ ಮುಂದಾಗುದ್ದಾರೆ.

ಕೆಆರ್​ಎಸ್​ ಒಡೆದಿಲ್ಲ ಅಂತಿದ್ದಾರೆ ಅಧಿಕಾರಿಗಳು, ಈಗಲಾದರೂ ಕ್ಷಮೆ ಕೇಳಿ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ -ದಳಪತಿಗಳಿಂದ ಹಸಿರು ಬಾವುಟ
‘ಕೆಆರ್​ಎಸ್​ ಒಡೆದಿಲ್ಲ ಅಂತಿದ್ದಾರೆ ಅಧಿಕಾರಿಗಳು, ಈಗಲಾದರೂ ಕ್ಷಮೆ ಕೇಳಿ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ’ -ಜೆಡಿಎಸ್ ದಳಪತಿಗಳಿಂದ ಹಸಿರು ಬಾವುಟ
TV9 Web
| Edited By: |

Updated on:Jul 10, 2021 | 12:40 PM

Share

ಮಂಡ್ಯ: ‘ಕೆಆರ್​ಎಸ್ ಅಣೆಕಟ್ಟೆ ಬಿರುಕುಬಿಟ್ಟಿಲ್ಲ ಅಂತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, ಈಗಲಾದರೂ ಸಂಸದೆ ಸುಮಲತಾ ಅಂಬರೀಷ್​ ಅವರು ಕ್ಷಮೆ ಕೇಳಲಿ, ಅದರೊಂದಿಗೆ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ ಎಂದು ಅರಕೆರೆ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಶಿಸಿದ್ದಾರೆ.

ಕೆಆರ್​ಎಸ್​ ಒಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸುಮಲತಾ ಅವರಿಂದ ತಪ್ಪಾಗಿರೋದು ಈಗ ಜಗಜ್ಜಾಹೀರಾಗಿದೆ.  ಈಗಲಾದರೂ ಬಂದು KRS ಒಡೆದಿಲ್ಲ ಎಂದು ಹೇಳಿ ಕ್ಷಮೆ ಕೇಳಿ. ಕೆಆರ್ ಎಸ್ ಗೆ ಬಂದು ಸುಮಲತಾ ಕಾವೇರಿ ತಾಯಿಗೆ ಪೂಜೆ ಮಾಡಿ ಜನರ ಕ್ಷಮೆ ಕೇಳಲಿ. ಸುಮಲತಾ ಅವರು ಕ್ಷಮೆ ಕೇಳಿದ ಮೇಲೆ ಈ ವಿವಾದ ಮುಗಿಯುತ್ತೆ. ಕೆಆರ್​ಎಸ್ ಡ್ಯಾಂ ವಿಚಾರಕ್ಕೆ ಇಲ್ಲಿಗೇ ತೆರೆ ಎಳೆಯೋಣ. ಅದು ಬಿಟ್ಟು ಬೇರೆ ಯಾವುದೋ ವಿಚಾರಕ್ಕೆ ಹೋಗೋದು ಬೇಡ ಎಂದು ಹೇಳುವ ಮೂಲಕ ಜೆಡಿಎಸ್ ದಳಪತಿಗಳು ಹಸಿರು ಬಾವುಟ ಬೀಸುವುದಕ್ಕೆ ಮುಂದಾಗಿದ್ದಾರೆ.

ಸುಮಲತಾ ಅಂಬರೀಷ್​ ಕಣ್ಣೀರಿನ ಮಿಸೈಲ್​ ಇನ್ನು ಮುಂದೆ ಕೆಲಸಕ್ಕೆ ಬರುವುದಿಲ್ಲ:

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದ್ದು, ನಮ್ಮ ಕ್ಷೇತ್ರದ ಸಂಸದೆ ಆರೋಪಗಳಿಗೆ ಮಾತ್ರ ಪ್ರತಿಕ್ರಿಯಿಸುವೆ. ಕೆಆರ್​ಎಸ್​ ಡ್ಯಾಂ ಬಗ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದೇನೆ. ನಾನು ಎಂಎಲ್​ಎ, ನನಗೆ ಭಸ್ಮ ಆಗ್ಲಿ ಮಣ್ಣಾಗೋಗಲಿ ಎಂದು ನನಗೆ ಹೇಳಿದ್ರಲ್ಲ ಇದು ಸರಿನಾ? ಕೊಳ್ಳೆಗಾಲದ ಮಾಟದ ರೀತಿಯಲ್ಲಿ ಭಸ್ಮ ಆಗಲಿ ನಾನು ಅಂತಾ ಹೇಳ್ತಿರಲ್ಲ ಇದು ಜನ ಸಮ್ಮತನಾ? ಎಂದು ಸಂಸದೆ ಸುಮಲತಾ ಅವರನ್ನು ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡರು.

ನಾನು ಎಲ್ಲೂ ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು ಎಂದಿಲ್ಲ. ಅಂಬರೀಶ್ ಬೆಂಬಲಿಗರು ಮಾಡುತ್ತಿದ್ರು ಎಂದಿದ್ದೇನೆ ಅಷ್ಟೇ. ಮಂಡ್ಯ ಜಿಲ್ಲೆಯ ಜನರು ಒಮ್ಮೆ ಕಣ್ಣೀರಿಗೆ ಮರುಳಾಗಿದ್ದಾರೆ. ಆದರೆ ಮತ್ತೆ ಮತ್ತೆ ಕಣ್ಣೀರು ಹಾಕಿದರೆ ಮಂಡ್ಯ ಜನ ಮರುಳಾಗಲ್ಲ. ಕಣ್ಣೀರಿನ ಮಿಸೈಲ್​ ಇನ್ನು ಮುಂದೆ ಕೆಲಸಕ್ಕೆ ಬರುವುದಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ಇದೇ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ರಾಕ್​ಲೈನ್​ ವೆಂಕಟೇಶ್​ ಹೇಳಿಕೆಗೆಳಿಗೆ ತಿರುಗೇಟು ನೀಡಿದ್ದು, ಯಾರದೋ ಹೇಳಿಕೆಗಳಿಗೆ ನಾನ್ಯಾಕೆ ಪ್ರತಿಕ್ರಿಯಿಸಲಿ. ಪಾಪ ಅವರು ಈಗ ಗಾಬರಿಯಾದಂತೆ ಕಾಣುತ್ತಾರೆ ಎಂದು ಛೇಡಿಸಿದ್ದಾರೆ.

ಯಾರೂ ಅನಗತ್ಯ ಹೇಳಿಕೆ ನೀಡದಂತೆ ಹೆಚ್.ಡಿ. ದೇವೇಗೌಡರಿಂದ ಸೂಚನೆ: ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಟಾಕ್‌ವಾರ್ ಡ್ಯಾಮೇಜ್ ಕಂಟ್ರೋಲ್‌ಗೆ ಜೆಡಿಎಸ್ ದಳಪತಿಗಳು ಮುಂದಾದಂತೆ ಇದೆ. ಈ ಬಗ್ಗೆ ಯಾರೂ ಅನಗತ್ಯ ಹೇಳಿಕೆ ನೀಡದಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಂದ ಸೂಚನೆ ಬಂದಿದೆ. ಈ ರೀತಿ ಹೇಳಿಕೆಯಿಂದ ಜನರಿಗೆ ಬೇರೆ ರೀತಿ ಸಂದೇಶ ರವಾನೆಯಾಗುತ್ತದೆ. ಇದರಿಂದ JDS ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಆಗುತ್ತದೆ. ಇದೇ ವಿಚಾರ ರಾಜಕೀಯವಾಗಿ ಬಳಸಿಕೊಂಡು ಹಿನ್ನಡೆಯಾಗುತ್ತದೆ. ವಿರೋಧಿಗಳು ಪಕ್ಷಕ್ಕೆ ಹಿನ್ನಡೆ ಮಾಡುವ ಕೆಲಸ ಮಾಡ್ತಾರೆ. ಮುಂದಿನ ಸ್ಥಳೀಯ ಚುನಾವಣೆ ಮೇಲೆ ಇದು ಪ್ರಭಾವ ಬೀರುತ್ತದೆ. ಹೀಗಾಗಿ ಸ್ವಲ್ಪ ದಿನ ಈ ವಿಚಾರವಾಗಿ ಹೇಳಿಕೆ ಬೇಡ ಎಂದು ಜೆಡಿಎಸ್ ವರಿಷ್ಠ ದೇವೇಗೌಡರಿಂದ ಸೂಚನೆ ರವಾನೆಯಾಗಿದೆ. ಇದಕ್ಕೆ ಸಮ್ಮತಿ ಸೂಚಿಸುವತೆ ಸದ್ಯ ತಟಸ್ಥವಾಗಿರಲು ಹೆಚ್.ಡಿ.ಕುಮಾರಸ್ವಾಮಿ ಸಹ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕುಮಾರಸ್ವಾಮಿ ವಿಷಯದಲ್ಲಿ ನಾನು ಯಾವುದೇ ತಪ್ಪು ಮಾತಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ: ರಾಕ್​ಲೈನ್ ವೆಂಕಟೇಶ್

(jds mla ravindra srikantaiah wants apology from mp sumalatha ambareesh to end krs dam row)

Published On - 12:18 pm, Sat, 10 July 21

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್