ಬೆಂಗಳೂರು: ಪತ್ನಿ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಲನಾಯಕನಹಳ್ಳಿಯ ಅಸ್ಟ್ರೋ ಮ್ಯಾನಷನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಟೆಕ್ಕಿ ಶ್ರೀನಾದ್(39) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಆಂಧ್ರ ಮೂಲದ ಟೆಕ್ಕಿ ಶ್ರೀನಾದ್ 2009 ರಲ್ಲಿ ರೇಖಾಳನ್ನು ಮದುವೆಯಾಗಿದ್ದ.ನಂತರ ಬ್ಯಾಂಕ್ನಲ್ಲಿ ಲೋನ್ ಮಾಡಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ರು. ಪ್ರತಿ ತಿಂಗಳು ತನ್ನ ಸಂಬಳದಲ್ಲಿ ಲೋನ್ ತೀರಿಸ್ತಿದ್ದ. ಆದರೆ ಪತ್ನಿ ಮಾತ್ರ ದುಂದುವೆಚ್ಚ ಮಾಡುತ್ತಿದ್ದಳು. ಶ್ರೀನಾದ್ ಪತ್ನಿಗೆ ದುಂದುವೆಚ್ಚ ಮಾಡದಂತೆ ಬುದ್ಧಿ ಹೇಳಿತ್ತಿದ್ದ.
ಇದರಿಂದ ಕುಪಿತಗೊಂಡು ಪತಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಳು. ರೇಖಾಗೆ ಆಕೆ ಪೋಷಕರು ಸಹ ಬೆಂಬಲ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪತಿ ಬಳಿ ಆಸ್ತಿ ಕೇಳುವಂತೆ ರೇಖಾಗೆ ಅವಳ ತಂದೆ ತಾಯಿ ಹೇಳಿಕೊಡುತ್ತಿದ್ದರು. ಹೀಗಾಗಿ ಆಸ್ತಿ ನೀಡುವಂತೆ ಪತಿ ಶ್ರೀನಾದ್ಗೆ ಪೀಡಿಸ್ತಿದ್ದಳು. ಆಸ್ತಿ ನೀಡದಿದ್ರೆ ವಿಚ್ಛೇದನ ನೀಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಳು. ರೇಖಾ ವಿರುದ್ಧ ಶ್ರೀನಾದ್ ತಂದೆ ನಾಗೇಶ್ವರರಾವ್ ದೂರು ದಾಖಲಿಸಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಶ್ರೀನಾದ್ ಪತ್ನಿ ರೇಖಾ, ಪೋಷಕರ ವಿರುದ್ಧ ದೂರು ಆಧರಿಸಿ ಎಫ್ ಐಆರ್ ದಾಖಲಾಗಿದೆ.
Published On - 9:33 am, Sat, 14 December 19