ಪ್ರಿಯತಮೆ ಕಪಾಳಕ್ಕೆ ಹೊಡೆದಳು ಅಂತ ಪ್ರಾಣವನ್ನೇ ಬಿಟ್ಟ ಪ್ರಿಯಕರ: ಯುವಕನ ತಂದೆ ಬಿಚ್ಚಿಟ್ಟ ದುರಂತ ಕಥೆ ಇಲ್ಲಿದೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 01, 2022 | 3:10 PM

ಪ್ರೀತಿಸಿದ ಯುವತಿ ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೃತ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಿಯತಮೆ ಕಪಾಳಕ್ಕೆ ಹೊಡೆದಳು ಅಂತ ಪ್ರಾಣವನ್ನೇ ಬಿಟ್ಟ ಪ್ರಿಯಕರ: ಯುವಕನ ತಂದೆ ಬಿಚ್ಚಿಟ್ಟ ದುರಂತ ಕಥೆ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಲೂಧಿಯಾನ(ಚಂಡೀಗಢ): ಒಮ್ಮೆ ಪ್ರೇಮಿಗಳಲ್ಲಿ (Lovers) ಪ್ರೀತಿಯ ಭಾವ ಮೊಳಕೆ ಒಡೆದು ಹೆಮ್ಮರವಾದರೆ ಮುಗಿಯಿತು. ಯಾವ ಅಡ್ಡಿ ಆತಂಕಗಳೂ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅದಕ್ಕೆ ಅಡ್ಡಿಯಾದವರನ್ನು ಕೊಲ್ಲುತ್ತಾರೆ. ಅಥವಾ ಸ್ವತಃ ತಾವೇ ಸಾವಿಗೆ ಶರಣಾಗುತ್ತಾರೆ. ಆದ್ರೆ, ಇಲ್ಲೋರ್ವ ಪ್ರಿಯಕರ ತನ್ನ ಪ್ರಿಯತಮೆ ಕಪಾಳಕ್ಕೆ ಹೊಡೆದಳು ಎನ್ನುವ ಒಂದು ಸಣ್ಣ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೌದು…. ಪ್ರೀತಿಸಿದ ಯುವತಿ ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲೂಧಿಯಾನದಲ್ಲಿ (Ludhiana) ನಡೆದಿದೆ. ಗುರುದೀಪ್ ಸಿಂಗ್ (30) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ. ಗುರುದೀಪ್ ಸಿಂಗ್ ಕಪಾಳಕ್ಕೆ ಹೊಡೆದ ಲವರ್ ರಣವಾನ್ ಗ್ರಾಮದ ರಾಜ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ತಂಗಿಯೊಂದಿಗೆ ಸ್ನೇಹ ಬೆಳಸಿದ್ದ ಮುಸ್ಲಿಂ ಯುವಕನನ್ನು ಹತ್ಯೆಗೈದ ಅಣ್ಣ..!

ತನ್ನ ಮಗ ಆರೋಪಿಗೆ ಸುಮಾರು 1.20 ಲಕ್ಷ ರೂಪಾಯಿ ನೀಡಿದ್ದಾನೆ ಮತ್ತು ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಅವಳು ಅವನೊಂದಿಗೆ ಜಗಳವಾಡುತ್ತಿದ್ದಳು. ಕೊನೆ ಅದು ಸಾವಿನಲ್ಲಿ ಅಂತ್ಯ ಕಂಡಿದೆ. ಈ ಸಂಬಂಧ ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ತಂದೆಯ ಆರೋಪವೇನು?
ಗುರುದೀಪ್ ಸಿಂಗ್ ಅವರ ತಂದೆ ನಛತಾರ್ ಸಿಂಗ್ ಈ ಬಗ್ಗೆ ಯುವತಿ ವಿರುದ್ಧ ದೂರು ನೀಡಿದ್ದು, ನನ್ನ ಮಗನ ಸಾವಿಗೆ ಆಕೆಯೇ ಕಾರಣ ಎಂದು ಆರೋಪಿಸಿದ್ದಾರೆ.

ದುಬೈನಲ್ಲಿ  ಕೆಲಸಮಾಡುತ್ತಿದ್ದ ನನ್ನ ಮಗ ಸುಮಾರು ಎರಡೂವರೆ ವರ್ಷಗಳ ಹಿಂದೆ ಮನೆಗೆ ಮರಳಿದ್ದನು. ಗುರ್ದೀಪ್ ಸಿಂಗ್ ವಿದೇಶದಲ್ಲಿದ್ದಾಗ ಗ್ರಾಮದಲ್ಲಿ ವಾಸಿಸುತ್ತಿದ್ದ. ರಾಜ್ವಿಂದರ್ ಕೌರ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದನು (Relationship). ಅಲ್ಲದೇ ಆಕೆಗೆ ಹಣವನ್ನು ಸಹ ಕಳುಹಿಸುತ್ತಿದ್ದನು. ಬಳಿಕ ಕೊಟ್ಟ ಹಣವನ್ನು ವಾಪಸ್ ಕೇಳಲು ಸೆಪ್ಟೆಂಬರ್ 28ರಂದು ಅವರ ಮನೆಗೆ ಹೋಗಿದ್ದಾಗ ಜಗಳ ಮಾಡಿದ್ದಾರೆ.

ಮಾರನೇ ದಿನ ಆಕೆ ನಮ್ಮ ಮನೆಗೆ ಬಂದು ನನ್ನ ಮಗನ ಕತ್ತು ಹಿಡಿದು ಮುಖಕ್ಕೆ ಹೊಡೆದಿದ್ದಾಳೆ. ಅಲ್ಲದೇ ನನಗೆ ಯಾವುದೇ ಸಾಲವನ್ನು ನೀಡಿಲ್ಲ ಎಂದು ನಿಂದಿಸಿದ್ದಾಳೆ. ಘಟನೆ ಬಳಿಕ ನನಗೆ ತುಂಬಾ ಅವಮಾನವಾಗಿದೆ, ನಾನು ಸಾಯುತ್ತೇನೆ ಎಂದು ಅಳುತ್ತಿದ್ದನು. ನಂತರ ಸಂಜೆ ವೇಳೆಗೆ ನನ್ನ ಮಗ ವಿಷ ಸೇವಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಆತನ ಸ್ಥಿತಿ ಗಂಭೀರವಾಗಿದ್ದರಿಂದ ಕೂಡಲೇ ಲುಧಿಯಾನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುರುದೀಪ್ ಸಿಂಗ್ ಅವರ ತಂದೆ ನಛತಾರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sat, 1 October 22