ಇತ್ತೀಚೆಗೆ ಡೇಟಿಂಗ್ ಆ್ಯಪ್ಗಳ ಸಂಖ್ಯೆ ಹೆಚ್ಚಾಗಿದೆ, ಆ್ಯಪ್ನಲ್ಲಿ ಸಂಗಾತಿಯನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ಅಪರಾಧ ಪ್ರಕರಣಗಳೇ ಮುನ್ನೆಲೆಗೆ ಬರುತ್ತಿವೆ, ಕೆಲವರು ಮೋಸ ಮಾಡುವ ದೃಷ್ಟಿಯಿಂದಲೇ ಇಂತಹ ಆ್ಯಪ್ಗಳಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡುತ್ತಾರೆ. ಈಗ ಅಂಥದ್ದೇ ಘಟನೆಯೊಂದು ಹರ್ಯಾಣದಲ್ಲಿ ನಡೆದಿದೆ. ಮಹಿಳೆಯೊಬ್ಬಳು ವ್ಯಕ್ತಿಗೆ ಮಾದಕ ದ್ರವ್ಯ ಕೊಟ್ಟು ಮೊಬೈಲ್ ಫೋನ್, ಚಿನ್ನಾಭರಣ, 1.78 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾಳೆ.
ಸಂತ್ರಸ್ತ ರೋಹಿತ್ ಗುಪ್ತಾ ಅವರು ನೀಡಿದ ದೂರಿನಲ್ಲಿ ತಾನು ಬಂಬಲ್ ಡೇಟಿಂಗ್ ಆ್ಯಪ್ ಮೂಲಕ ಸಾಕ್ಷಿ ಅಲಿಯಾಸ್ ಪಾಯಲ್ ಎಂಬ ಮಹಿಳೆಯನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ಮಹಿಳೆ ತಾನು ದೆಹಲಿಯಿಂದ ಬಂದಿದ್ದು, ಪ್ರಸ್ತುತ ತನ್ನ ಚಿಕ್ಕಮ್ಮನೊಂದಿಗೆ ಗುರುಗ್ರಾಮದಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಳು.
ಅಕ್ಟೋಬರ್ 1 ರಂದು, ಅವಳು ನನಗೆ ಕರೆ ಮಾಡಿ ನನ್ನನ್ನು ಭೇಟಿಯಾಗಬೇಕೆಂದು ಹೇಳಿದಳು. ರಾತ್ರಿ 10 ಗಂಟೆಯ ಸುಮಾರಿಗೆ, ಸೆಕ್ಟರ್ 47 ರ ಡಾಕ್ಯಾರ್ಡ್ ಬಾರ್ ಬಳಿ ತನ್ನನ್ನು ಕರೆದುಕೊಂಡು ಹೋಗು ಎಂದು ಹೇಳಿದ್ದಳು,ನಾನು ಅವಳನ್ನು ಕರೆದುಕೊಂಡು ನಂತರ ಹತ್ತಿರದ ಅಂಗಡಿಯಿಂದ ಸ್ವಲ್ಪ ಮದ್ಯವನ್ನು ಖರೀದಿಸಿ ಮನೆಗೆ ಬಂದಿದ್ದೆ.
ಮತ್ತಷ್ಟು ಓದಿ: ಹ್ಯಾಕರ್ ಶ್ರೀಕೃಷ್ಣನಿಂದ ಇ- ಪ್ರೊಕ್ಯೂರ್ಮೆಂಟ್ ವಂಚನೆ ಕೇಸ್: ಸ್ಫೋಟಕ ವಿಚಾರ ಬೆಳಕಿಗೆ
ಮಹಿಳೆ ಐಸ್ ತರಲು ಅಡುಗೆಮನೆಗೆ ಹೋಗುವಂತೆ ಕೇಳಿದಳು, ಆಕೆ ಮದ್ಯಕ್ಕೆ ಬೇರೇನೋ ಮತ್ತಷ್ಟು ಮತ್ತು ಬರುವ ಮದ್ದನ್ನು ಬೆರಕೆ ಮಾಡಿದ್ದಳು.
ನಾನು ಅಕ್ಟೋಬರ್ 3 ರಂದು ಬೆಳಗ್ಗೆ ಎದ್ದಾಗ ಮಹಿಳೆ ಅಲ್ಲಿರಲಿಲ್ಲ ಮತ್ತು ನನ್ನ ಚಿನ್ನದ ಸರ, ಐಫೋನ್ 14 ಪ್ರೊ, 10,000 ರೂ ನಗದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಕಾಣೆಯಾಗಿದ್ದವು ಎಂದು ಹೇಳಿದ್ದಾರೆ.
ತನ್ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ 1.78 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇನ್ನೂ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ