ಬೀದರ್: ಬೆಳ್ಳಂ ಬೆಳಗ್ಗೆಯೇ ATMಗೆ ನುಗ್ಗಿ 6.50 ಲಕ್ಷ ರೂ. ದೋಚಿದ ಖದೀಮರು

ಬೀದರ್​ನಲ್ಲಿ ಇಂದು ಬೆಳಗಿನ ಜಾವ ಕರ್ನಾಟಕ ಬ್ಯಾಂಕ್​ನ ATMಗೆ ನುಗ್ಗಿದ ಖದೀಮರು ಗ್ಯಾಸ್ ಕಟರ್ ಬಳಸಿ ATM ಮುರಿದು ಕಳ್ಳತನ ಮಾಡಿದ್ದಾರೆ. 10 ನಿಮಿಷದಲ್ಲಿ ATM ನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್: ಬೆಳ್ಳಂ ಬೆಳಗ್ಗೆಯೇ ATMಗೆ ನುಗ್ಗಿ 6.50 ಲಕ್ಷ ರೂ. ದೋಚಿದ ಖದೀಮರು
ATMನಿಂದ ಹಣ ಕಳ್ಳತನ
Follow us
ಸುರೇಶ ನಾಯಕ
| Updated By: ಆಯೇಷಾ ಬಾನು

Updated on: Oct 12, 2023 | 11:55 AM

ಬೀದರ್, ಅ.12​​: ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಹರ್ಷಾ ಕಾಂಪ್ಲೆಕ್ಸ್ ಬಳಿಯ ATMಗೆ ಖದೀಮರು ಕನ್ನ ಹಾಕಿದ್ದಾರೆ (ATM Money Theft). ಎಟಿಎಂ ಮಶೀನ್ ಮುರಿದು 6.50 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂದು ಬೆಳಗಿನ ಜಾವ ಕರ್ನಾಟಕ ಬ್ಯಾಂಕ್​ನ ATMಗೆ ನುಗ್ಗಿದ ಖದೀಮರು ಗ್ಯಾಸ್ ಕಟರ್ ಬಳಸಿ ATM ಮುರಿದು ಕಳ್ಳತನ ಮಾಡಿದ್ದಾರೆ. 10 ನಿಮಿಷದಲ್ಲಿ ATM ನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೂ ಕಾಲು ಕೆಜಿ ಚಿನ್ನಾಭರಣ ಎಗರಿಸಲು ಗನ್ ಪಾಯಿಂಟ್ ರಾಬರಿ ಪ್ಲಾನ್

ಬೆಂಗಳೂರಿನಲ್ಲಿ ಕೆಲ ವರ್ಷಗಳಿಂದ ಜುವೆಲ್ಲರಿ ಶಾಪ್ ನಲ್ಲಿ ಕೆಲಸ ಮಾಡುತ್ತ ಮಾಲೀಕರ ವಿಶ್ವಾಸಗಳಿಸಿದ್ದವರೇ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಸೆಪ್ಟೆಂಬರ್ 28ರಂದು ಬೆಂಗಳೂರಿನ ಹಲಸೂರ್ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಲಕ್ಷ್ಮಿ ಗೋಲ್ಡ್ ಅಂಗಡಿಯಿಂದ ಆಂದ್ರಪ್ರದೇಶದ ನೆಲ್ಲೂರಿನಲ್ಲಿರುವ ಶುಭಂ ಹಾಗೂ ಮುಕೇಶ್ ಜ್ಯುವಲ್ಲರಿಗೆ ಶಾಪ್ ಗೆ ಗೋಲ್ಡ್ ಡೆಲವರಿ ಕೊಡಬೇಕಿತ್ತು. ಹೀಗಾಗಿ ಮಾಲೀಕ ತನ್ನ ನಂಬಿಕಸ್ಥ ಕೆಲಸಗಾರನ ಬಳಿ ಚಿನ್ನ ಕೊಟ್ಟ ಕಳಿಸಿದ್ದ. ಹಲವಾರು ವರ್ಷಗಳಿಂದ ಮಾಲೀಕರ ನಂಬಿಕೆ ಗಳಿಸಿದ್ದ ಕೆಲಸಗಾರ ಲಾಲ್ ಸಿಂಗ್ ಆಭರಣಗಳನ್ನ ಎಗರಿಸಿದ್ರೆ ಲೈಫ್ ಸೆಟ್ಟಲ್ ಆಗಬಹುದು ಎಂಬ ಆಸೆಗೆ ಬಿದ್ದು ಆಭರಣಗಳನ್ನು ತೆಗೆದುಕೊಂಡು ಹೋಗಿದ್ದ. ಒಂದೂಕಾಲು ಕೆಜಿ ಬಂಗಾರ ಎಗರಿಸಿದ್ದ ಲಾಲ್ ಸಿಂಗ್ ಮಾಲೀಕ ಅಭಿಷೇಕ್ ಜೈನ್ ಗೆ ಕಾಲ್ ಮಾಡಿ.

ಇದನ್ನೂ ಓದಿ: ‘ಮಕ್ಕಳ ಎದುರೇ ತಂದೆ-ತಾಯಿಯ ಕೊಲ್ಲಲಾಯಿತು’; ಇಸ್ರೇಲ್​​ನಲ್ಲಿ ಕುಟುಂಬದವರನ್ನು ಕಳೆದುಕೊಂಡು ಕಿರುತೆರೆ ನಟಿ

ಅಪರಿಚಿತರು ಗನ್ ತೋರಿಸಿ, ಚಾಕುವಿನಿಂದ ಹಲ್ಲೆ ಮಾಡಿ ಚಿನ್ನ ಕಸಿದು ಎಸ್ಕೇಪ್ ಆದರು ಎಂದು ಕಥೆ ಕಟ್ಟಿದ್ದ. ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಈ ಸಂಬಂಧ ಲಕ್ಷ್ಮಿ ಗೋಲ್ಡ್ ಮಾಲೀಕ ಅಭಿಷೇಕ್ ಜೈನ್ ದೂರು ನೀಡಿದ್ರು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ತಲೆಮರೆಸಿಕೊಂಡಿದ್ದ ಲಾಲ್ ಸಿಂಗ್ ನ ವಶಕ್ಕೆ ಪಡೆಯಲಾಗಿದೆ. ಆ ವೇಳೆಯೂ ತನ್ನ ಕೈಗಳ ಮೇಲಾಗಿದ್ದ ಗಾಯದ ಗುರುತುಗಳನ್ನ ತೋರಿಸಿ ಹಲ್ಲೆ ನಡೆದಿರುವ ಬಗ್ಗೆ ಬಿಂಬಿಸಲು ಆರೋಪಿ ಯತ್ನಿಸಿದ್ದ.

ತನಿಖೆ ಆರಂಭಿಸಿದ ಇನ್ ಸ್ಪೆಕ್ಟರ್ ಹನುಮಂತ್ರ ಭಜಂತ್ರಿ, ಚಾಕುವಿನಿಂದ ಕೈಗಳ ಮೇಲೆ ಹಲ್ಲೆ‌ಮಾಡಿರುವುದಾಗಿ ನೀಡಿದ ಹೇಳಿಕೆಗೂ ಕೈ ಮೇಲೆ ಆಗಿರುವ ಗಾಯಕ್ಕೆ ಸಾಮ್ಯತೆ ಬರದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಲಾಲ್ ಸಿಂಗ್ ತಾನು ಮಾಡಿದ ತಪ್ಪನ್ನ ಒಪ್ಪಿಕೊಂಡಿದ್ದ. ಬಳಿಕ ಕೂಲಂಕುಷ ವಿಚಾರಣೆ ನಡೆಸಿದಾಗ ಕದ್ದ ಮಾಲನ್ನ ರಾಜಸ್ತಾನಕ್ಕೆ ಸಹಚರರ ಮೂಲಕ ಕಳುಹಿಸಿರುವುದಾಗಿ ಬೆಳಕಿಗೆ ಬಂದಿದ್ದು, ಲಾಲ್ ಸಿಂಗ್ ಸಹಚರ ರಾಜು ಆಲಿಯಾಸ್ ರಾಜ್ಪಾಲ್ ನನ್ನ ವಶಕ್ಕೆ ಪಡೆದು 75 ಲಕ್ಷ ಮೌಲ್ಯದ 1.262 ಕೆ‌.ಜಿ.ಚಿನ್ನವನ್ನ ವಶಕ್ಕೆ‌ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅvರ ಬಂಧನಕ್ಕೆ ಹಲಸೂರ್ ಗೇಟ್ ಪೊಲೀಸ್ರು ಶೋಧ ನಡೆಸ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್