ಮೀರತ್: ತನಗಿಷ್ಟವಿಲ್ಲದ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ಅವಳಪ್ಪನೇ ಶಿರಚ್ಛೇದ ಮಾಡಿ ರುಂಡವನ್ನು ಚರಂಡಿಗೆಸೆದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 20, 2022 | 12:12 PM

ಕೊಲೆ ಮತ್ತು ಸಾಕ್ಷ್ಯ ನಾಶಮಾಡಿರುವ ಆರೋಪದಲ್ಲಿ ಪೊಲೀಸರು ಖುರೇಷಿ ಮತ್ತು ಅವನ ಹೆಂಡತಿಯನ್ನು ಬಂಧಿಸಿದ್ದಾರೆ.   

ಮೀರತ್: ತನಗಿಷ್ಟವಿಲ್ಲದ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ಅವಳಪ್ಪನೇ ಶಿರಚ್ಛೇದ ಮಾಡಿ ರುಂಡವನ್ನು ಚರಂಡಿಗೆಸೆದ!
ಶಾಹಿದ್ ಖುರೇಷಿ ಮತ್ತವನ ಹೆಂಡತಿ
Follow us on

ಈ ವ್ಯಕ್ತಿಯನ್ನು ನೋಡಿ. ಉತ್ತರ ಪ್ರದೇಶದ ಮೀರತ್ (Meerut) ನಿವಾಸಿಯಾಗಿರುವ ಶಾಹಿದ್ ಖುರೇಷಿ (Shahid Qureshi) ಮಾಡಿರುವ ಘನಂದಾರಿ ಕೆಲಸವೇನು ಗೊತ್ತಾ? ಅವನಿಗೆ ಇಷ್ಟವಿರದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದ ತನ್ನ ಸ್ವಂತ 25-ವರ್ಷದ ಮಗಳು ಶಾಹೀನಾಳ ಶಿರಚ್ಛೇದ (behead) ಮಾಡಿದ್ದು! ಮೀರತ್ ನ ಲಿಸಾರಿ ಗೇಟ್​ ಬಡಾವಣೆಯಲ್ಲಿ ಚರಂಡಿಯೊಂದರಲ್ಲಿ ಯುವತಿಯ ರುಂಡ ಪೊಲೀಸರಿಗೆ ಸಿಕ್ಕಿದೆ. ತನ್ನ ಪ್ರಿಯಕರನನ್ನು ರಾತ್ರಿವೇಳೆ ಭೇಟಿಯಾಗಲು ಶಾಹೀನಾ ತನಗೆ ಮತ್ತು ತನ್ನ ಪತ್ನಿಗೆ ನಿದ್ರೆ ಮಾತ್ರೆಗಳನ್ನು ನೀಡುತ್ತಿದ್ದಳು ಎಂದು ಖುರೇಷಿ ಆರೋಪಿಸಿದ್ದಾನೆ. ಕೊಲೆ ಮತ್ತು ಸಾಕ್ಷ್ಯ ನಾಶಮಾಡಿರುವ ಆರೋಪದಲ್ಲಿ ಪೊಲೀಸರು ಖುರೇಷಿ ಮತ್ತು ಅವನ ಹೆಂಡತಿಯನ್ನು ಬಂಧಿಸಿದ್ದಾರೆ.