ಲಿವಿಂಗ್‌ ಟುಗೆದರ್: ಮದುವೆಗೆ ಒತ್ತಾಯಿಸಿದ್ದಕ್ಕೆ ತಹಶೀಲ್ದಾರ್ ಪುತ್ರಿಯ ಹತ್ಯೆ -ತನಿಖೆಗೆ ಮುಂದಾದ ಬೆಂಗಳೂರು ಪೊಲೀಸರು

| Updated By: ಆಯೇಷಾ ಬಾನು

Updated on: Mar 18, 2022 | 3:06 PM

ಪ್ರಕರಣ ಸಂಬಂಧ ನಿನ್ನೆ(ಮಾರ್ಚ್ 17) ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಸೆಕ್ಷನ್ 307, SC-ST ಕಾಯ್ದೆಯಡಿ ಕೇಸ್ ದಾಖಲಾಗಿದೆ. ಹುಡುಗ ಮತ್ತು ಮೃತ ಹುಡುಗಿ ಇಬ್ಬರು ಪರಸ್ಪರ ಒಬ್ಬರನೊಬ್ಬರು ಪ್ರೀತಿಸ್ತಾ ಇದ್ರು.

ಲಿವಿಂಗ್‌ ಟುಗೆದರ್: ಮದುವೆಗೆ ಒತ್ತಾಯಿಸಿದ್ದಕ್ಕೆ ತಹಶೀಲ್ದಾರ್ ಪುತ್ರಿಯ ಹತ್ಯೆ -ತನಿಖೆಗೆ ಮುಂದಾದ ಬೆಂಗಳೂರು ಪೊಲೀಸರು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಆನೇಕಲ್​ನಲ್ಲಿ ಮದುವೆಯಾಗುವಂತೆ ಕೇಳಿದ್ದಕ್ಕೆ ದಾನೇಶ್ವರಿ(25) ಎಂಬ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದೇ ತಿಂಗಳ 15 ರಂದು ಈ ಘಟನೆ ನಡೆದಿದ್ದು ಈ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ನಿನ್ನೆ(ಮಾರ್ಚ್ 17) ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಸೆಕ್ಷನ್ 307, SC-ST ಕಾಯ್ದೆಯಡಿ ಕೇಸ್ ದಾಖಲಾಗಿದೆ. ಹುಡುಗ ಮತ್ತು ಮೃತ ಹುಡುಗಿ ಇಬ್ಬರು ಪರಸ್ಪರ ಒಬ್ಬರನೊಬ್ಬರು ಪ್ರೀತಿಸ್ತಾ ಇದ್ರು. ಬಳಿಕ ಹುಡುಗಿ ತನ್ನ ಪ್ರಿಯಕರನಿಗೆ ಮದುವೆಯಾಗು ಎಂದಾಗ ಹುಡುಗ ನಿರಾಕರಿಸಿದ್ದ ಅಂತ ದೂರಿನಲ್ಲಿ ನಮೂದಿಸಿದ್ದಾರೆ. ಈ ಘಟನೆ ನಡೆದಾಗ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ, ಪೊಲೀಸರು ಆಸ್ಪತ್ರೆಗೆ ಹೋಗಿದ್ರು, ಪೋಷಕರು ದೂರು ಕೊಡಲು ತಡ ಮಾಡಿದ್ರು. ಕೊಲೆ ಯತ್ನ ಅಂತ ಆರೋಪ ಮಾಡಿದ್ದಾರೆ. ಈಗ ಯುವತಿ ಮೃತಪಟ್ಟಿದ್ದಾರೆ. ಹೀಗಾಗಿ ಸೆಕ್ಷನ್ 302ರಡಿ ಕೇಸ್ ಮಾಡಿ ತನಿಖೆ ಮಾಡ್ತಿವಿ. ಆರೋಪಿಯ ಯುವಕನನ್ನ ಪತ್ತೆ ಹಚ್ಚುತ್ತೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ ನೀಡಿದ್ದಾರೆ.

ತಹಶೀಲ್ದಾರ್ ಅಶೋಕ ನಿಂಗಪ್ಪ ಶರ್ಮಾ ಪುತ್ರಿ ಹತ್ಯೆ
ಮೃತ ಯುವತಿ ದಾನೇಶ್ವರಿ, ವಿಜಯಪುರ ಜಿಲ್ಲೆ ತಾಳಿಕೋಟೆಯ ತಹಶೀಲ್ದಾರ್ ಅಶೋಕ ನಿಂಗಪ್ಪ ಶರ್ಮಾ ಅವರ ಪುತ್ರಿ. ಮೂಲತಃ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ನಿವಾಸಿ. ಸದ್ಯ ವಿಜಯಪುರ ನಗರದ ಕಾಮತ್ ಹೊಟೇಲ್ ಹಿಂಭಾಗದ ಸ್ವಂತ ಮನೆಯಲ್ಲಿ ಅಶೋಕ ಶರ್ಮಾ ಹಾಗೂ ಮಗಳು ವಾಸವಾಗಿದ್ದರು. ದಾನೇಶ್ವರಿ ತಾಯಿ ಈಗಾಗಲೇ ನಿಧನರಾಗಿದ್ದಾರೆ. ಮಗಳನ್ನ ಇಂಜಿನಿಯರ್ ಮಾಡಬೇಕು ಎಂದು ತಹಶೀಲ್ದಾರ್ ಅಶೋಕ ನಿಂಗಪ್ಪ ಕನಸು ಕಂಡಿದ್ದರು. ಈ ಹಿನ್ನಲೆ ಮಗಳಿಗೆ ವಿಜಯಪುರ ನಗರದ ಬಿಎಲ್ಡಿಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಸಿದ್ದರು. ಅದರಂತೆ ದಾನೇಶ್ವರಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣದ ಶಿವಕುಮಾರ್ ಎಂಬ ಯುವಕನ ಜೊತೆ ಪ್ರೇಮಾಂಕುರವಾಗಿದೆ. ಇಬ್ಬರಲ್ಲೂ ಪರಸ್ಪರ ಪ್ರೀತಿ ಹುಟ್ಟುಕೊಂಡಿತ್ತು. ಅಂತರ್ ಜಾತಿ ಅನ್ನೋ ಕಾರಣಕ್ಕೆ ಶಿವಕುಮಾರ್ ಕುಟುಂಬದವರು ಮದುವೆಗೆ ವಿರೋಧಿಸಿದ್ದರು. ಬೆಂಗಳೂರಲ್ಲಿ ವಾಸವಾಗಿದ್ದ ಶಿವಕುಮಾರ್ ಹಾಗೂ ದಾನೇಶ್ವರಿ ಇಬ್ಬರೂ ಲಿವಿಂಗ್‌ ಟು ಗೆದರ್ ಸಂಬಂಧದಲ್ಲಿದ್ದರು. ಮದುವೆಗೆ ಶಿವಕುಮಾರ್ ನಿರಾಕರಿಸಿದ್ದ ಕಾರಣ ಇಬ್ಬರ ಮಧ್ಯ ಜಗಳವಾಗಿದೆ. ಇದೇ ಜಗಳದಲ್ಲಿ ಶಿವಕುಮಾರ ದಾನೇಶ್ವರಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ಮಾಡಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೇ ದಾನೇಶ್ವರಿ ಮೃತಪಟ್ಟಿದ್ದಾರೆ.

ಪೊಲೀಸರು ಸ್ಪಂದಿಸುತ್ತಿಲ್ಲ, ಕೇಸು ನಿಲ್ಲುವುದಿಲ್ಲ ಅಂತಿದ್ದಾರೆ -ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿದ ಮೃತಳ ತಂದೆ
ಇನ್ನು ಮತ್ತೊಂದು ಕಡೆ ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಪೊಲೀಸರ ವಿರುದ್ಧ ತಹಶೀಲ್ದಾರ್ ಅಶೋಕ್ ಶರ್ಮಾ ಕಿರುಕುಳ ಆರೋಪ ಮಾಡಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ತಹಶೀಲ್ದಾರ್ ಒತ್ತಾಯ ಮಾಡಿದ್ದಾರೆ. ಈ ಪ್ರಕರಣ ನಿಲ್ಲುವುದಿಲ್ಲವೆಂದು ಪೊಲೀಸರೇ ಹೇಳುತ್ತಿದ್ದಾರೆ. ನಮ್ಮನ್ನು ಪೊಲೀಸರು ಕೊಲೆಗಡುಕರ ರೀತಿ ನಡೆಸಿಕೊಂಡಿದ್ದಾರೆ. ದೂರು ನೀಡಲು ಹೋದರೆ ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಡೀ ದಿನ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆಂದು ಪೊಲೀಸರ ವಿರುದ್ಧ ತಹಶೀಲ್ದಾರ್ ಅಶೋಕ್ ಶರ್ಮಾ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Hampi: ವಿಶ್ವ ಪರಂಪರೆಯ ತಾಣವಾದ ವಿಜಯನಗರ ಸಾಮ್ರಾಜ್ಯದ ಮೇಲೆ ಕಣ್ಣಿಟ್ಟ ಜಿಯೋ! ಹಂಪಿಯಲ್ಲಿನ್ನು ನೈಜ 4G ಡಿಜಿಟಲ್ ಲೈಫ್‌!

ಬೆಂಗಳೂರಿನಲ್ಲಿ 700 ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಉಚಿತ ನಿವಾಸ ಪ್ರಮಾಣಪತ್ರ ವಿತರಣೆ

Published On - 1:51 pm, Fri, 18 March 22