ಚಿಕ್ಕಬಳ್ಳಾಪುರ: ಮನುಷ್ಯನಿಗೆ ಕೋಪ ಅನ್ನೋದೆ ದೊಡ್ಡ ಶತ್ರು. ಯಾಕಂದ್ರೆ ಬುದ್ಧಿ ಇರುವ ಮನುಷ್ಯ ತಾಳ್ಮೆ ಕಳೆದುಕೊಂಡು ಕೋಪಕ್ಕೆ ಮೈಮರೆತು ಪ್ರಾಣಿಯಂತೆ ವರ್ತಿಸುತ್ತಾನೆ. ಕೋಪದಿಂದ ಮಾಡಬಾರದ ತಪ್ಪುಗಳನ್ನು ಮಾಡ್ತಾನೆ. ಅದೇ ರೀತಿ ಇಲ್ಲೊಬ್ಬ ಸಾಂಬಾರ್‌ಗೆ ಉಪ್ಪು ಹೆಚ್ಚು ಹಾಕಿದ್ದಕ್ಕೆ ಪತ್ನಿಯನ್ನೇ ಕೊಂದಿದ್ದಾನೆ.
ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯಾ ಗ್ರಾಮದಲ್ಲಿದ್ದ ಮಧುರಾ ತವರು ಮನೆಯಲ್ಲಿದ್ದ ತನ್ನನ್ನು ನೋಡಲು ಗಂಡ ಬರ್ತಿದ್ದಾನೆ ಅಂತ ಪ್ರೀತಿಯಿಂದ ಮಟನ್ ಸಾಂಬಾರ್ ಮಾಡಿದ್ದಾಳೆ. ಆದರೆ ಗಂಡನನ್ನು ನೋಡುವ ಆತುರದಲ್ಲಿ ಮಟನ್ ಸಾಂಬಾರ್‌ಗೆ ಉಪ್ಪು ಹೆಚ್ಚು ಹಾಕಿದ್ದಾಳೆ. ಅದಕ್ಕೆ ಕೋಪಗೊಂಡ ಬಾಲಚಂದ್ರ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಉಪ್ಪಿನ ಋಣ ತೀರಿ ಹೋಗಿದೆ. ಚೇಳೂರು ಪೊಲೀಸರು ಆರೋಪಿ ಬಾಲಚಂದ್ರನನ್ನು ಬಂಧಿಸಿದ್ದಾರೆ.
Published On - 11:19 am, Mon, 11 May 20