ಮಗನನ್ನು ನಿಂದಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನೇ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಮಗನಿಗೆ ಬೈದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ 40 ವರ್ಷದ ಸಹೋದರಿಯನ್ನು ಹತ್ಯೆ ಮಾಡಿ ಆಕೆಯ ಮಗನನ್ನೂ ಕೂಡ ಗಾಯಗೊಳಿಸಿದ್ದಾನೆ.
ಪೋಲೀಸರ ಪ್ರಕಾರ, ಆರೋಪಿ ಸಂಜು ಲೋಖಂಡೆ ತನ್ನ 10 ವರ್ಷದ ಮಗನನ್ನು ಗದರಿಸಿದ್ದಕ್ಕಾಗಿ ತನ್ನ ಸಹೋದರಿಯ ಮೇಲೆ ಕೋಪಗೊಂಡಿದ್ದ ಮತ್ತು ಮನೆಯ ವಿಷಯಕ್ಕಾಗಿ ಆಕೆಯನ್ನು ಥಳಿಸಿದ್ದಾನೆ.
ಕೊಕಣಿ ಪದಾ ಪ್ರದೇಶದ ಚಾಲ್‌ನ ನಿವಾಸಿ ತಮ್ಮ ಸಹೋದರಿ ದುರ್ಗಾ ಅನಿಲ್ ಕುಂಟೆ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ಡೆಂಗ್ಯೂವಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಗೆ ಕಾಂಪೌಂಡರ್ನಿಂದ ಕಿರುಕುಳ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಭಾನುವಾರ ಮುಂಜಾನೆ ಪೊಲೀಸರು ಲೋಖಂಡೆಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ