ಬೆಂಗಳೂರು ಅ.09: ನಗರದ ಆಡುಗೋಡಿಯ ರಾಮಾಂಜನೇಯ ದೇವಾಲಯ ರಸ್ತೆಯಲ್ಲಿ ತಡರಾತ್ರಿ ನಡೆದ ಗಣೇಶ (Ganesha Festival) ವಿಸರ್ಜನೆ ಮೆರವಣೆಗೆ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಾಗಿದೆ. ಶ್ರೀನಿವಾಸ್ ಕೊಲೆಯಾದ ವ್ಯಕ್ತಿ. ದುಷ್ಕೃತ್ಯ ಎಸಗಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಅಡುಗೋಡಿ ಪೊಲೀಸರು (Police) ಬಲೆಬೀಸಿದ್ದಾರೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡದಂತೆ ಶ್ರೀನಿವಾಸ್ ಅವರಿಗೆ ಆರೋಪಿಗಳು ಮೊದಲೆ ಎಚ್ಚರಿಕೆ ನೀಡಿದ್ದರು.
ಕಳೆದ ತಿಂಗಳು 19ನೇ ತಾರೀಖಿನಂದು ಶ್ರೀನಿವಾಸ್ ತಂಡ ಗಣೇಶ ಕೂರಿಸಿ ಮೆರವಣಿಗೆ ಮಾಡಿತ್ತು. ಅವತ್ತು ಡ್ಯಾನ್ಸ್ ಮಾಡುವ ವಿಚಾರಕ್ಕೆ ವಿನಯ್ ಹಾಗೂ ಶ್ರೀನಿವಾಸ್ ಮಧ್ಯೆ ಗಲಾಟೆ ಆಗಿತ್ತು. ಇದಾದ ಹಲವು ದಿನಗಳ ನಂತರ ವಿನಯ್ ಮತ್ತು ತಂಡ ಗಣೇಶ ಕೂಡಿಸಿದ್ದರು. ರವಿವಾರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮಾಡಿದ್ದಾರೆ. ರಾತ್ರಿ 9ಗಂಟೆ ಸುಮಾರಿಗೆ ಗಣೇಶ ಮೆರವಣಿಗೆ, ಕೊಲೆಯಾದ ಶ್ರೀನಿವಾಸ್ ಮನೆ ಮುಂದಿನ ರಸ್ತೆಯಲ್ಲಿ ಹೋಗುತ್ತಿತ್ತು. ಈ ವೇಳೆ ಶ್ರೀನಿವಾಸ್ ವಿನಯ್ ಮತ್ತು ಆತನ ತಂಡಕ್ಕೆ ಡ್ಯಾನ್ಸ್ ಮಾಡಬೇಡ ಎಂದಿದ್ದನು. ಈ ವಿಚಾರಕ್ಕೆ ಜಗಳ ಶುರುವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿನಿಮಾ ಕಥೆಯಂತೆ ನಡೆದ ರಿಯಲ್ ಸ್ಟೋರಿ: ಚಾಕು ಹಿಡಿದು ಬೆದರಿಸಲು ಹೋದವ ಕೊಲೆಯಾದ
ನಮಗೆ ಡ್ಯಾನ್ಸ್ ಮಾಡಬೇಡಿ ಅಂತ ಹೇಳುತ್ತೀಯಾ ಅಂತ, ಈ ಗಣೇಶ ಬಲಿ ಕೇಳುತ್ತಿದೆ ಎಂದು ಜೋರಾಗಿ ಕೂಗಿ ಡ್ರ್ಯಾಗರ್ನಿಂದ ವಿನಯ್ ಮತ್ತು ಆತನ ತಂಡ ಶ್ರೀನಿವಾಸ್ ಮತ್ತು ಅಜಿತ್ಗೆ ಇರಿದಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದ ಶ್ರೀನಿವಾಸ್ ತಾಯಿ ಇಂದಿರಾ ಅವರಿಗೂ ಇರಿದಿದ್ದಾರೆ. ಘಟನೆಯಲ್ಲಿ ತೀರ್ವ ರಕ್ತಸ್ರಾವದಿಂದ ಶ್ರೀನಿವಾಸ್ ಮೃತಪಟ್ಟಿದ್ದಾನೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಗಲಾಟೆ ಸಂದರ್ಭದಲ್ಲಿ ಓರ್ವ ರೌಡಿಶೀಟರ್ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ವಿನಯ್ ಅಲಿಯಾಸ್ ಪಟ್ರು, ಅಲೆಕ್ಸ್, ರಂಜಿತ್ ಅಲಿಯಾಸ್ ಕುಟ್ಟಿ, ಪ್ರಶಾಂತ್ ಅಲಿಯಾಸ್ ಕುಳ್ಳ ವಿರುದ್ದ ಎಫ್ಐಆರ್ ದಾಖಲಾಗಿದೆ.
ನನ್ನ ಕಣ್ಮುಂದೆನೇ ಮಗನನ್ನ ಕೊಲೆ ಮಾಡಿದರು. ಕೊಲೆ ಮಾಡಬೇಂತ ಪಲ್ಲಕ್ಕಿ, ಮೆರವಣಿಗೆ ತೆಗೆದುಕೊಂಡು ಬಂದರು ಸಾರ್. ಮೆರವಣಿಗೆ ವೇಳೆ ಬಂದು ನನ್ನ ಮಗನನ್ನು ಕೊಲೆ ಮಾಡಿದರು. ಬಾ ಇಲ್ಲಿ ಏನ್ ಮಾಡುತ್ತೀಯಾ ಅಂತಾ ಅವಾಜ್ ಹಾಕಿ ಕರೆದರು. ನಂತರ ನಾನು ನನ್ನ ಮಗನ್ನ ಬೇರೆ ದಾರಿಯಿಂದ ಮನೆಗೆ ಕಳುಹಿಸಿದೆ. ಆಮೆಲೆ ಆಕಡೆಯಿಂದ ಮನೆ ಹತ್ರ ಬಂದು ಚುಚ್ಚಿ ಸಾಯಿಸಿದರು. ಕಣ್ಮುಂದೆನೆ ಚುಚ್ಚಿದರು, ಮಗನ ಕರಳು ಹೊರಗ್ ಬಂತು. ನಾನು ಬಿಡಿಸೋಕೆ ಹೋದೆ, ನಂಗೂ ಚಾಕು ಇಂದ ಚುಚ್ಚಿದರು ಅಂತ ಮೃತ ಶ್ರೀನಿವಾಸ್ ತಾಯಿ ಇಂದಿರಾ ಕಣ್ಣೀರು ಹಾಕಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Mon, 9 October 23