ಪ್ರೀತಿಸಿ ಹಿಂದೂ ಯುವತಿಯನ್ನ ಮದ್ವೆಯಾದ ಮುಸ್ಲಿಂ ವ್ಯಕ್ತಿ, ಬುರ್ಖಾ ಧರಿಸಲಿಲ್ಲವೆಂದು ಆಕೆಯನ್ನ ಕೊಂದೇ ಬಿಟ್ಟ!

ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ವ್ಯಕ್ತಿ ಆಕೆ ತನ್ನ ಧರ್ಮದ ಸಂಪ್ರದಾಯವನ್ನು ಅನುಸರಿಸುತ್ತಿಲ್ಲ ಎಂದು ಹತ್ಯೆ ಮಾಡಿದ್ದಾನೆ.

ಪ್ರೀತಿಸಿ ಹಿಂದೂ ಯುವತಿಯನ್ನ ಮದ್ವೆಯಾದ ಮುಸ್ಲಿಂ ವ್ಯಕ್ತಿ, ಬುರ್ಖಾ ಧರಿಸಲಿಲ್ಲವೆಂದು ಆಕೆಯನ್ನ ಕೊಂದೇ ಬಿಟ್ಟ!
burqa
TV9kannada Web Team

| Edited By: Ramesh B Jawalagera

Sep 27, 2022 | 4:13 PM

ಮುಂಬೈ: ಪತಿರಾಯನೊಬ್ಬ ತನ್ನ ಹೆಂಡತಿ ಬುರ್ಖಾ ಧರಿಸಲು ನಿರಾಕರಿಸಿದ್ದಾಳೆಂದು ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದೊಂದು ಲವ್ ಜಿಹಾದ್​ ಎನ್ನಲಾಗುತ್ತಿದೆ.

ಇಕ್ಬಾಲ್ ಮೊಹಮದ್‌ ಶೇಖ್ ಎಂಬ ವ್ಯಕ್ತಿ ರೂಪಾಲಿ ಎನ್ನುವ ಹಿಂದೂ ಯುವತಿಯನ್ನು ಕಳೆದ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, ಎರಡು ವರ್ಷದ ಮಗು ಸಹ ಇದೆ. ಆದ್ರೆ, ರೂಪಾಲಿ ತಮ್ಮ ಮುಸ್ಲಿಂ ಸಂಪ್ರದಾಯದ ಬುರ್ಖಾ ಧರಿಸಲು ನಿರಾರಿಸಿದ್ದರಿಂದ ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ರೂಪಾಲಿ, ಇಕ್ಬಾಲ್‌ನೊಂದಿಗೆ ಅಂತರ್‌ ಜಾತಿ ವಿವಾಹವಾಗಿದ್ದಳು, ಆದರೆ ಅವಳು ಇಕ್ಬಾಲ್‌ನ ಬಲವಂತದಿಂದ ಬೇಸತ್ತು ಕೆಲ ತಿಂಗಳಿನಿಂದ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿದ್ದಳು. ವಿಚ್ಛೇದನಕ್ಕೂ ಮುನ್ನವೇ ಆರೋಪಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಸಧ್ಯ ಆರೋಪಿ ಇಕ್ಬಾಲ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ವಿವಾಹಿತರ ತ್ರೀಕೋನ ಪ್ರೇಮ ಪ್ರಕರಣ! ವಿಧವೆಯ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾದ ವಿಚ್ಚೇದಿತ!!

ಘಟನೆ ಹಿನ್ನೆಲೆ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ರೂಪಾಲಿ ಹಾಗೂ ಇಕ್ಬಾಲ್‌ ಶೇಖ್‌ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅದಾದ ಬಳಿಕ, ರೂಪಾಲಿ ಚೆಂಬೂರ್‌ ಪ್ರದೇಶದಲ್ಲಿದ್ದ ಇಕ್ಬಾಲ್‌ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು. ರೂಪಾಲಿ ಹಿಂದು ಆಗಿದ್ದ ಕಾರಣಕ್ಕೆ ಮದುವೆಯ ನಂತರ ಮುಸ್ಲಿಂ ಸಂಪ್ರದಾಯವನ್ನು ಅನುಕರಣೆ ಮಾಡುತ್ತಿರಲಿಲ್ಲ. ಇದಕ್ಕಾಗಿ ಇಕ್ಬಾಲ್‌ ಹಾಗೂ ಅವರ ಕುಟುಂಬ ರೂಪಾಲಿಗೆ ಪ್ರತಿ ದಿನವೂ ಚಿತ್ರಹಿಂಸೆ ನೀಡುತ್ತಿದ್ದರು. ಅದಲ್ಲದೆ, ರೂಪಾಲಿಗೆ ಬುರ್ಖಾ ಧರಿಸುವಂತೆ ಇಕ್ಬಾಲ್‌ ಹಾಗೂ ಆತನ ಕುಟುಂಬ ಪ್ರತಿನಿತ್ಯ ಒತ್ತಾಯ ಮಾಡುತ್ತಿತ್ತು. ಆದರೆ, ರೂಪಾಲಿ ಮಾತ್ರ ಇದಕ್ಕೆ ವಿರೋಧಿಸಿದ್ದರು. ಈ ಬಗ್ಗೆ ಇಬ್ಬರ ನಡುವೆ ಜಗಳವಾಗಿತ್ತು. ಇದಾದ ನಂತರ ರೂಪಾಲಿ ಇಕ್ಬಾಲ್​ನಿಂದ ದೂರವಾಗಿ ಪ್ರತ್ಯೇಕವಾಗಿ ಮನೆಯಲ್ಲಿ ವಾಸವಾಗಿದ್ದಳು. ಆದ್ರೆ, ಫೋನ್‌ನಲ್ಲಿ ಮಾತನಾಡುತ್ತಿದ್ದರು.

ಹೀಗೆ ಸೋಮವಾರ ರಾತ್ರಿ ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಚೆಂಬೂರ್ ಪ್ರದೇಶದ ಪಿಎಲ್ ಲೋಖಂಡೆ ಮಾರ್ಗದಲ್ಲಿರುವ ನಾಗೇವಾಡಿಯಲ್ಲಿ ರೂಪಾಲಿಯನ್ನು ಕರೆಯಿಸಿಕೊಂಡಿದ್ದಾನೆ. ಆ ವೇಳೆ ಬುರ್ಖಾ ಮತ್ತಿತರ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದೆ. ಈ ಬಗ್ಗೆ ರೂಪಾಲಿ ವಿಚ್ಛೇದನದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇದರಿಂದ ಕೋಪಗೊಂಡ ಇಕ್ಬಾಲ್ ತನ್ನ ಜೇಬಿನಿಂದ ಚಾಕು ತೆಗೆದು ರೂಪಾಲಿ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.

ರೂಪಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada