Shocking News: ವಾಮಾಚಾರ ಮಾಡುತ್ತಿದ್ದಾರೆ ಎಂದು ಮಹಿಳೆಯರಿಗೆ ಬಲವಂತವಾಗಿ ಮಲಮೂತ್ರವನ್ನು ತಿನ್ನಿಸಿದ ಗ್ರಾಮಸ್ಥರು
ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ವಾಮಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಸ್ವರಿ ಗ್ರಾಮದ ಜನರು ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಬಿಸಿ ಕಬ್ಬಿಣದ ರಾಡ್‌ಗಳಿಂದ ಚಿತ್ರಹಿಂಸೆ ನೀಡಿ ಮಲ ಮತ್ತು ಮೂತ್ರ ಸೇವಿಸುವಂತೆ ಒತ್ತಾಯಿಸಿದ್ದಾರೆ.

ಜಾರ್ಖಂಡ್: ಜಾರ್ಖಂಡ್‌ನಲ್ಲಿ ಅಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ವಾಮಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಸ್ವರಿ ಗ್ರಾಮದ ಜನರು ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಬಿಸಿ ಕಬ್ಬಿಣದ ರಾಡ್‌ಗಳಿಂದ ಚಿತ್ರಹಿಂಸೆ ನೀಡಿ ಮಲ ಮತ್ತು ಮೂತ್ರ ಸೇವಿಸುವಂತೆ ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ಅಮಾನವೀಯವಾಗಿ ನಡೆಸಿಕೊಂಡರೂ ಸಂತ್ರಸ್ತರು ಮುಜುಗರದಿಂದ ಎದುರಿಸಿದ ಚಿತ್ರಹಿಂಸೆ ಕುರಿತು ಪೊಲೀಸರ ಮುಂದೆ ಬರಲು ಹಿಂದೇಟು ಹಾಕಿದರು.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಆಗಮಿಸಿ ಸಂತ್ರಸ್ತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಹಿತಿ ಪ್ರಕಾರ, ಜ್ಯೋತಿನ್ ಮುರ್ಮು ಎಂಬ ವ್ಯಕ್ತಿ ಶನಿವಾರ ರಾತ್ರಿ ಗ್ರಾಮದ ಜನರ ಸಭೆ ಕರೆದಿದ್ದಾರೆ. ಸಭೆಯಲ್ಲಿ, ಮೂವರು ಮಹಿಳೆಯರಲ್ಲಿ ಒಬ್ಬರು -ಶ್ರೀಲಾಲ್ ಮುರ್ಮು ಅವರ ಕುಟುಂಬದವರು ಮಾಟಗಾತಿ ಎಂದು ಆರೋಪಿಸಿದರು.
ಇವರ ವಾಮಾಚಾರದಿಂದ ಗ್ರಾಮದ ಪ್ರಾಣಿಗಳು ಹಾಗೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಇವರ ಮೇಲೆ ದಾಳಿಯನ್ನು ಮಾಡಿ ಚಿತ್ರಹಿಂಸೆಯನ್ನು ನೀಡುತ್ತಾರೆ.
ಕುಟುಂಬದ ಮೂವರು ಮಹಿಳೆಯರಾದ ಸೋನಾಮಣಿ ತುಡು, ರಾಸಿ ಮುರ್ಮು, ಕೊಸಾ ತೂಡು ಹಾಗೂ ಶ್ರೀಲಾಲ್ ಮುರ್ಮು ಎಂಬುವರನ್ನು ಅಮಾನುಷವಾಗಿ ಥಳಿಸಲಾಗಿದೆ. ಇದಾದ ಬಳಿಕ ನಾಲ್ವರನ್ನೂ ಹಿಡಿದು ಬಲವಂತವಾಗಿ ಮಲಮೂತ್ರವನ್ನು ಬಾಯಿಗೆ ಹಾಕಲಾಯಿತು. ಕಾದ ಕಬ್ಬಿಣದ ರಾಡ್‌ಗಳಿಂದ ಅವರನ್ನೂ ಥಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಸಂತ್ರಸ್ತರಿಗೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮತ್ತೆ ಭಾನುವಾರ ಬೆಳಿಗ್ಗೆ, ಸಂತ್ರಸ್ತರಿಗೆ ಹೊಡೆದಿದ್ದಾರೆ.
ಈ ಮಧ್ಯೆ, ಸರಯ್ಯಹತ್ ಠಾಣೆ ಪ್ರಭಾರಿ ವಿನಯ್ ಕುಮಾರ್ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಪೊಲೀಸ್ ತಂಡವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ. ನಾಲ್ವರನ್ನು ಮೊದಲು ಸರಯ್ಯಹತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದಿಯೋಘರ್‌ಗೆ ಸ್ಥಳಾಂತರಿಸಲಾಯಿತು. ಈ ಕೃತ್ಯ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
Published On - 11:08 am, Tue, 27 September 22




