ನಿಗೂಢವಾಗಿ ನಾಪತ್ತೆಯಾಗಿದ್ದ ಬೆಂಗಳೂರಿನ 3 ವಿದ್ಯಾರ್ಥಿನಿಯರು 20 ದಿನಗಳ ಬಳಿಕ ಪತ್ತೆ, ಅಷ್ಟು ದಿನ ಎಲ್ಲಿದ್ರು?

ನಾಪತ್ತೆಯಾಗಿದ್ದ ಬೆಂಗಳೂರಿನ ಮೂವರು ವಿದ್ಯಾರ್ಥಿನಿಯರು ಇಪ್ಪತ್ತು ದಿನಗಳ ಬಳಿಕ ಪತ್ತೆಯಾಗಿದ್ದಾರೆ.

ನಿಗೂಢವಾಗಿ ನಾಪತ್ತೆಯಾಗಿದ್ದ ಬೆಂಗಳೂರಿನ 3 ವಿದ್ಯಾರ್ಥಿನಿಯರು 20 ದಿನಗಳ ಬಳಿಕ ಪತ್ತೆ, ಅಷ್ಟು ದಿನ ಎಲ್ಲಿದ್ರು?
TV9kannada Web Team

| Edited By: TV9 SEO

Sep 26, 2022 | 1:42 PM

ಬೆಂಗಳೂರು: ನಿಗೂಢವಾಗಿ ಕಾಣೆಯಾಗಿದ್ದ ಬೆಂಗಳೂರಿನ ಮೂವರು ಬಾಲಕಿಯರು ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾರೆ.  ನಾಪತ್ತೆಯಾಗಿ ಬರೋಬ್ಬರಿ ಇಪ್ಪತ್ತು ದಿನಗಳ ಬಳಿಕ ಚೆನ್ನೈನ ಮನೆಯೊಂದರಲ್ಲಿ ಸಿಕ್ಕಿದ್ದಾರೆ. ಇದರಿಂದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.

ಶಕ್ತೀಶ್ವರಿ, ವೇರೋನಿಕಾ, ನಂದಿನಿ‌ಯನ್ನು ಪುಲಕೇಶಿನಗರ ಪೊಲೀಸರು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಇದೇ ಸೆ. 6ರಂದು ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು, ಚೆನ್ನೈನ ಮನೆಯೊಂದರಲ್ಲಿ ಆಶ್ರಯ ಪಡೆದುಕೊಂಡು ಕೆಲಸಕ್ಕೆ ಹೋಗುತ್ತಿದ್ದರು. ಆದ್ರೆ, ಮನೆ ಬಿಟ್ಟು ಹೋಗಿದ್ಯಾಕೆ? ಎನ್ನುವ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ಘಟನೆ ಹಿನ್ನೆಲೆ ಒಂದೇ ಶಾಲೆಯ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ನಗರದ ಫ್ರೇಜರ್ ಟೌನ್‌ನಲ್ಲಿ ನಡೆದಿತ್ತು. ಬೆಂಗಳೂರಿನ ಪ್ರಾಮನೆಡ್ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆ ಓದುತ್ತಿದ್ದ 15 ವರ್ಷದ ಶಕ್ತೀಶ್ವರಿ, ನಂದಿನಿ ಹಾಗೂ 16 ವರ್ಷದ ವರುಣಿಕ ಮಿಸ್ಸಿಂಗ್ ಆಗಿದ್ದರು.

ಶಕ್ತೀಶ್ವರಿ ಮತ್ತು ನಂದಿನಿ 9 ನೇ ತರಗತಿಯಲ್ಲಿ ವ್ಯಾಸಾಂಗ ಮಾಡ್ತಿದ್ರೆ, ವರುಣಿಕ 10 ನೇ ತರಗತಿ ಓದ್ತಿದ್ದಾಳೆ. ಅಲ್ಲದೇ ಶಕ್ತೀಶ್ವರಿ ಮನೆಯಿಂದ ಶಾಲೆಗೆ ಹೋಗಿ ಬರ್ತಿದ್ರೆ ಉಳಿದಿಬ್ಬರು ಇದೇ ಶಾಲೆಯ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ರು. ಸೆ. 6 ರಂದು ಮೂವರು ನಾಪತ್ತೆಯಾಗಿದ್ದರು. ಇದರಿಂದ ನೊಂದ ಪೋಷಕರು ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದರು.

. ಅಪ್ರಾಪ್ತ ಮೂವರು ಹೆಣ್ಣುಮಕ್ಕಳು ಕಾಣೆ ಆದ್ರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಾಲೆಗೆ ಹೋದ್ರೆ ನೀವು ಸ್ಲಂ ನವರು. ಬಾಯ್ ಫ್ರೆಂಡ್ಸ್ ಜೊತೆ ಹೋಗಿರಬಹುದು, ನಿಮ್ಮ ಮಕ್ಕಳನ್ನು ಕಾಯ್ದುಕೊಂಡು ಇರಕ್ಕೆ ಆಗುತ್ತಾ ಎಂದು ನಿಂದಿಸಿದ್ರಂತೆ. ಇದ್ರಿಂದ ರೊಚ್ಚಿಗೆದ್ದ ಮಕ್ಕಳ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ್ರು‌. ಶಾಲೆ ಮುಂಭಾಗದ ರಸ್ತೆ ತಡೆ ನಡೆಸಿ ಪ್ರತಿಭಟನೆ ಸಹ ಮಾಡಿದ್ದರು.

ರಸ್ತೆ ಓಡಾಡುವವರ ಮೊಬೈಲ್​ ದರೋಡೆ ಮಾಡುತ್ತಿದ್ದವ ಅರೆಸ್ಟ್ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ನಿಲ್ಲುತ್ತಿಲ್ಲ. ಒಂಟಿಯಾಗಿ ಓಡಾಡುತ್ತಿರುವವರನ್ನೇ ಅದರಲ್ಲೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

ಹೌದು….. ರಸ್ತೆಯಲ್ಲಿ ಓಡಾಡುವವರ ಮೊಬೈಲ್​ ದರೋಡೆ ಮಾಡುತ್ತಿದ್ದವನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಾಕಿಬ್ ಬಂಧಿತ ಆರೋಪಿ. ಬಂಧಿತ ಸಾಕಿಬ್​ನಿಂದ ಮೊಬೈಲ್​ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಕಿಬ್ ವಿರುದ್ಧ ಇಂದಿರಾನಗರ, ಜೆ.ಸಿ.ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada