ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡ ವ್ಯಕ್ತಿ

|

Updated on: Jan 11, 2024 | 9:58 AM

ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂತ್ ಮಂಡಿ ಪ್ರದೇಶದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡ ವ್ಯಕ್ತಿ
ಗುಂಡಿನ ದಾಳಿ
Image Credit source: NDTV
Follow us on

ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂತ್ ಮಂಡಿ ಪ್ರದೇಶದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ತನುಜ್ ನಗರ್ ಎಂಬ ವ್ಯಕ್ತಿ, ಎರಡು ವರ್ಷಗಳ ಹಿಂದೆ ರಿಷಬ್ ಗುಪ್ತಾಗೆ ಸುಮಾರು 15 ಲಕ್ಷ ರೂಪಾಯಿ ಸಾಲ ನೀಡಿದ್ದರು. ಸಾಲದ ಮರುಪಾವತಿ ವಿಳಂಬವಾದ ಆರೋಪವಿತ್ತು. ನಾಗರ್ ಅವರ ಕರೆಯ ಮೇರೆಗೆ ಮರುಪಾವತಿಗಾಗಿ ಗುಪ್ತಾ ಅವರ ಮನೆಗೆ ಬಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರು ಒಳಗೆ ಮಾತನಾಡುತ್ತಿದ್ದಾಗ ಗುಪ್ತಾ ಅವರ ಮನೆಯ ಹೊರಗೆ ನಿಂತಿದ್ದ ಇನ್ನೊಬ್ಬ ಸ್ನೇಹಿತ ನಾಗರ್ ಜೊತೆಗಿದ್ದನ. ನಂತರ, ನಾಗರ್ ಬಂದೂಕನ್ನು ಹೊರತೆಗೆದು ತನ್ನ ತೋಳಿಗೆ ಗುಂಡು ಹಾರಿಸಿಕೊಂಡಿದ್ದ, ನಂತರ ಅವನು ಮನೆಯಿಂದ ಓಡಿಹೋದ ಎಂದು ಅಧಿಕಾರಿ ಹೇಳಿದರು.

ಮತ್ತಷ್ಟು ಓದಿ: ಬೆಳಗಾವಿ ಡಿಸಿ ಕಚೇರಿಯಲ್ಲೇ ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಅಸ್ವಸ್ಥನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸ್​

ಪ್ತಾ ಅವರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ಇದನ್ನು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಗರ್ ಅವರನ್ನು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಇದಿಗ ಅವರ ಸ್ಥಿತಿ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ನಿಜವಾದ ವಿಷಯ ಹಾಗೂ ಬಂದೂಕಿಗೆ ಸಂಬಂಧಿಸಿದ ದಾಖಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ