ಕೊಡಗು: ಜಿಲ್ಲೆಯಲ್ಲಿ ಗುಂಡಿನ ದಾಳಿಗೆ ಓರ್ವ ಬಲಿಯಾದ ಘಟನೆ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ನಡೆದಿದೆ. ಬೈಮನ ಮಧು (42) ಸಾವನ್ನಪ್ಪಿದ ವ್ಯಕ್ತಿ. ಹಳೆ ದ್ವೇಷದ ಹಿನ್ನೆಲೆ ಹುಲಿಮನೆ ಕಿರಣ್ ಎಂಬ ಆರೋಪಿ ಗುಂಡು ಹಾರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಒಂಟಿ ನಳಿಗೆ ಕೋವಿಯಿಂದ ಗುಂಡು ಹಾರಿಸಲಾಗಿದೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮಚ್ವೂರು ಆನೆಮಾಳ ಹಾಡಿಯಲ್ಲಿ ಮನೆ ಮೇಲೆ ಕಾಡಾನೆ ದಾಳಿ ನಡೆಸಿದ್ದು ಇಬ್ಬರಿಗೆ ಗಾಯಗಳಾಗಿವೆ. ಗಾಯಗೊಂಡ ರವಿ(45), ಶಾಂತಾ(60)ಗೆ ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Bengaluru: ಪ್ರೇಯಸಿ ಹುಟ್ಟಿದ ಹಬ್ಬ ಆಚರಣೆ ಬಳಿಕ ಕೊಲೆ ಪ್ರಕರಣ; ಪ್ರಿಯಕರ ಮಾಡಿದ್ದ ಪ್ಲಾನ್ ಏನು ಗೊತ್ತಾ?
ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮುಂಜಾನೆ ಲಾಂಗ್ ಡ್ರೈವ್ ಬಂದಿದ್ದ ಬಿಎಂಡಬ್ಲ್ಯು ಬೈಕ್ ಅಪಘಾತವಾಗಿದೆ. ಅಪಘಾತದ ರಬಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಂಜಾಬ್ ಮೂಲದ ಆಶೀಶ್ ಕುಮಾರ್ (22) ಮೃತ ಸವಾರ. ಬೆಳ್ಳಂ ಬೆಳಗ್ಗೆ ನಂದಿ ಬೆಟ್ಟದ ಕಡೆ ಹೋಗಿ ವಾಪಸ್ ಸಿಟಿಗೆ ಬರ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸ್ನೇಹಿತರ ಜೊತೆ ರೇಸಿಗೆ ಬಿದ್ದು ರಸ್ತೆಯಲ್ಲಿ ವೇಗ ನಿಯಂತ್ರಿಸಲಿಟ್ಟಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ನಂತರ ಬ್ಯಾರಿಕೇಡ್ ನಿಂದ ಡಿವೈಡರ್ ಗೆ ಹೋಡೆದು ಮೃತಪಟ್ಟಿದ್ದಾನೆ. ಅಪಘಾತದ ರಬಸಕ್ಕೆ BMW ಬೈಕ್ ನ ಮುಂಭಾಗ ನಜ್ಜುಗುಜ್ಜಾಗಿದೆ.
ಏರ್ಪೋಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ