ಪತ್ನಿಯ ಶೀಲಶಂಕಿಸಿ.. FBನಲ್ಲಿ ಖಾಸಗಿ ವಿಡಿಯೋ ಹರಿಬಿಟ್ಟ ಪತಿರಾಯ
ಬೆಂಗಳೂರು: ಪತ್ನಿಯ ಶೀಲಶಂಕಿಸಿದ ಪಾಪಿ ಪತಿರಾಯನೊಬ್ಬ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಆಕೆಯ ಖಾಸಗಿ ವಿಡಿಯೋವನ್ನು ಹರಿಬಿಟ್ಟಿದ್ದಾನೆ. KR ಪುರ ಬಳಿಯಿರುವ ಹೊಂಗಸಂದ್ರದ ನಿವಾಸಿ ಹರಿಕೃಷ್ಣ ಎಂಬಾತನಿಂದ ದುಷ್ಕೃತ್ಯ ಎಸಗಲಾಗಿದೆ. ಪತ್ನಿಯ ಜೊತೆಗಿನ ಖಾಸಗಿ ವಿಡಿಯೋವನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದ ಆರೋಪಿ ನಂತರ ಅದನ್ನು ಫೇಸ್ಬುಕ್ನಲ್ಲಿ ಅಪ್ಲೊಡ್ ಮಾಡಿದ್ದಾನೆ. ಜೊತೆಗೆ, ತನ್ನ ಪತ್ನಿಯ ಸ್ನೇಹಿತರಿಗೆ ಮತ್ತಷ್ಟು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡಿದ್ದಾನಂತೆ. ಈ ಸಂಬಂಧ ನೊಂದ ಪತ್ನಿಯಿಂದ ವೈಟ್ಫೀಲ್ಡ್ CEN ಪೊಲೀಸ್ ಠಾಣೆಯಲ್ಲಿ ದೂರು […]
ಬೆಂಗಳೂರು: ಪತ್ನಿಯ ಶೀಲಶಂಕಿಸಿದ ಪಾಪಿ ಪತಿರಾಯನೊಬ್ಬ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಆಕೆಯ ಖಾಸಗಿ ವಿಡಿಯೋವನ್ನು ಹರಿಬಿಟ್ಟಿದ್ದಾನೆ. KR ಪುರ ಬಳಿಯಿರುವ ಹೊಂಗಸಂದ್ರದ ನಿವಾಸಿ ಹರಿಕೃಷ್ಣ ಎಂಬಾತನಿಂದ ದುಷ್ಕೃತ್ಯ ಎಸಗಲಾಗಿದೆ. ಪತ್ನಿಯ ಜೊತೆಗಿನ ಖಾಸಗಿ ವಿಡಿಯೋವನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದ ಆರೋಪಿ ನಂತರ ಅದನ್ನು ಫೇಸ್ಬುಕ್ನಲ್ಲಿ ಅಪ್ಲೊಡ್ ಮಾಡಿದ್ದಾನೆ. ಜೊತೆಗೆ, ತನ್ನ ಪತ್ನಿಯ ಸ್ನೇಹಿತರಿಗೆ ಮತ್ತಷ್ಟು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡಿದ್ದಾನಂತೆ. ಈ ಸಂಬಂಧ ನೊಂದ ಪತ್ನಿಯಿಂದ ವೈಟ್ಫೀಲ್ಡ್ CEN ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಂತ್ರಸ್ತೆ ದೂರಿನನ್ವಯ ಆಕೆಯ ಪತಿ ಹರಿಕೃಷ್ಣಾನ ವಿರುದ್ಧ FIR ದಾಖಲಾಗಿದೆ.
ಏನಿದು ಪ್ರಕರಣ? ಅಸಲಿಗೆ, ಸಂತ್ರಸ್ತೆ ಆರೋಪಿ ಹರಿಕೃಷ್ಣನಿಗೆ ಎರಡನೇ ಪತ್ನಿ. 2015 ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆಗೆ ಖಾಸಗಿ ಕಂಪನಿಯೊಂದರಲ್ಲಿ ಆರೋಪಿಯ ಪರಿಚಯವಾಗಿತ್ತು. ಆದರೆ, ಸಂತ್ರಸ್ತೆ ತನ್ನನ್ನ ಮದುವೆಯಾದರೂ ತನ್ನ ಮಾಜಿ ಪತಿ ಜೊತೆ ಸಂಬಂಧ ಮುಂದುವರಿಸಿದ್ದಾಳೆ ಅನ್ನೋ ಗುಮಾನಿಯಲ್ಲಿ ಹರಿಕೃಷ್ಣ ಆಕಗೆ ಕಿರುಕುಳ ನೀಡ್ತಿದ್ದನಂತೆ.
ಈ ಹಿಂದೆ, ಸಂತ್ರಸ್ತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಳಂತೆ. ಆಗ ಇಬ್ಬರಿಗೂ, ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದರು. ನಂತರ ಹರಿಕೃಷ್ಣಾ, ಪತ್ನಿ ಜೊತೆಗಿದ್ದ ಖಾಸಗಿ ಕ್ಷಣಗಳ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಅದನ್ನು WhatsApp ಮೂಲಕ ಸ್ನೇಹಿತರಿಗೆಲ್ಲಾ ಶೇರ್ ಮಾಡಿದ್ದನಂತೆ.