ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಒಂದೇ ಕುಟುಂಬದ ಮೂವರನ್ನು ಚೂರಿಯಿಂದ ಹತ್ಯೆ ಮಾಡಿರುವ ಘಟನೆ ನಡೆದಿದೆ. ದೆಹಲಿಯ ನೆಬ್ ಸರಾಯ್ನಲ್ಲಿ ವ್ಯಕ್ತಿ ಆತನ ಪತ್ನಿ ಹಾಗೂ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು ರಾಜೇಶ್ (53), ಅವರ ಪತ್ನಿ ಕೋಮಲ್ (47) ಮತ್ತು ಅವರ 23 ವರ್ಷದ ಮಗಳು ಕವಿತಾ ಎಂದು ಗುರುತಿಸಲಾಗಿದೆ. ಆದರೆ ಮಗ ಬೆಳಗ್ಗೆ ಜಾಗಿಂಗ್ಗೆ ಹೋಗಿದ್ದ ಕಾರಣ ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಮಗ ಬೆಳಗ್ಗೆ 5 ಗಂಟೆ ಸುಮಾರಿಗೆ ಜಾಗಿಂಗ್ಗೆಂದು ಹೊರಗೆ ಹೋಗಿದ್ದ ಮನೆಗೆ ಹಿಂದಿರುಗಿದಾಗ ಹೆತ್ತವರು ಹಾಗೂ ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ತಕ್ಷಣವೇ ಪೊಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.
ಆದರೆ ಪ್ರಾಥಮಿಕ ತನಿಖೆಯಲ್ಲಿ ಮನೆಯಲ್ಲಿ ಯಾವ ವಸ್ತುವು ಕಳವಾಗಿಲ್ಲ ಎಂಬುದು ತಿಳಿದುಬಂದಿದೆ. ಇಂದು ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವವಿತ್ತು ಎಲ್ಲರೂ ಸಂತೋಷದಿಂದಿದ್ದರು ಎಂದು ಮಗ ಹೇಳಿದ್ದಾನೆ. ನಿವಾಸಿಗಳಿಗೆ ಭದ್ರತೆ ಒದಗಿಸುವ ತನ್ನ ಜವಾಬ್ದಾರಿಯನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅತಿಶಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮತ್ತಷ್ಟು ಓದಿ: ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಹನಿಟ್ರ್ಯಾಪ್ ಆರೋಪ: ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಯತ್ನಿಸಿದ್ದರೆಂದ ಸಂತ್ರಸ್ತೆಯ ಪತಿ
ದೆಹಲಿಯಲ್ಲಿ ಹಗಲು ದರೋಡೆ, ಕೊಲೆ, ಮಾದಕವಸ್ತುಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಭದ್ರತೆ ಒದಗಿಸುವಲ್ಲಿ ಸರ್ಕಾರ ಸೋತಿದೆ ಎಂದರು. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Wed, 4 December 24