ಟ್ರ್ಯಾಕ್ಟರ್​ಗೆ ಟ್ರಕ್ ಡಿಕ್ಕಿ, ಚಕ್ರದಡಿ ಸಿಲುಕಿದ ಚಾಲಕನನ್ನು 500 ಮೀಟರ್ ಎಳೆದೊಯ್ದ ಟ್ರಕ್, ಸ್ಥಳದಲ್ಲೇ ಸಾವು

|

Updated on: Aug 27, 2023 | 8:20 AM

ಟ್ರಕ್​ ಒಂದು ಮರಳು ತುಂಬಿದ್ದ ಟ್ರ್ಯಾಕ್ಟರ್​ಗೆ ಹಿಂದಿನಿಂದ ಡಿಕ್ಕಿ ಹೊಡೆದು, ಚಾಲಕ ಮೃತಪಟ್ಟಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಕಲ್ಲು ತುಂಬಿದ್ದ ಟ್ರಕ್​ ಒಂದು ಮರಳು ತುಂಬಿದ್ದ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್​ ಚಾಲಕ ಕೆಳಗೆ ಬಿದ್ದಿದ್ದಾರೆ, ಅಷ್ಟಾದರೂ ಗಾಡಿ ನಿಲ್ಲಿಸದ ಟ್ರಕ್ ಚಾಲಕ ಟ್ರ್ಯಾಕ್ಟರ್​ ಚಾಲಕನ ಮೇಲೆ ಟ್ರಕ್​ ಹತ್ತಿಸಿದ್ದಾನೆ. ಚಕ್ರದಲ್ಲಿ ಸಿಲುಕಿದ್ದ ಚಾಲಕನನ್ನು 500 ಮೀಟರ್​ನಷ್ಟು ದೂರ ಎಳೆದೊಯ್ಯಲಾಗಿದೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟ್ರ್ಯಾಕ್ಟರ್​ಗೆ ಟ್ರಕ್ ಡಿಕ್ಕಿ, ಚಕ್ರದಡಿ ಸಿಲುಕಿದ ಚಾಲಕನನ್ನು 500 ಮೀಟರ್ ಎಳೆದೊಯ್ದ ಟ್ರಕ್, ಸ್ಥಳದಲ್ಲೇ ಸಾವು
ಸಾವು
Follow us on

ಟ್ರಕ್​ ಒಂದು ಮರಳು ತುಂಬಿದ್ದ ಟ್ರ್ಯಾಕ್ಟರ್​ಗೆ ಹಿಂದಿನಿಂದ ಡಿಕ್ಕಿ ಹೊಡೆದು, ಚಾಲಕ ಮೃತಪಟ್ಟಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ.
ಕಲ್ಲು ತುಂಬಿದ್ದ ಟ್ರಕ್​ ಒಂದು ಮರಳು ತುಂಬಿದ್ದ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್​ ಚಾಲಕ ಕೆಳಗೆ ಬಿದ್ದಿದ್ದಾರೆ, ಅಷ್ಟಾದರೂ ಗಾಡಿ ನಿಲ್ಲಿಸದ ಟ್ರಕ್ ಚಾಲಕ ಟ್ರ್ಯಾಕ್ಟರ್​ ಚಾಲಕನ ಮೇಲೆ ಟ್ರಕ್​ ಹತ್ತಿಸಿದ್ದಾನೆ. ಚಕ್ರದಲ್ಲಿ ಸಿಲುಕಿದ್ದ ಚಾಲಕನನ್ನು 500 ಮೀಟರ್​ನಷ್ಟು ದೂರ ಎಳೆದೊಯ್ಯಲಾಗಿದೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೋಶಿಯಾರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮೇಜರ್ ಸಿಂಗ್ ಮಾತನಾಡಿ, ಶಹಪುರ್ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಮತ್ತು ಸ್ಥಳೀಯರು ಟ್ರಕ್ ಚಾಲಕನನ್ನು ಬಂಧಿಸುವಂತೆ ಒತ್ತಾಯಿಸಿ ಸುಮಾರು ಆರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.

ಸ್ಟೋನ್ ಕ್ರಷರ್ ತುಂಬಿದ್ದ ಟ್ರಕ್ ಹಿಂದಿನಿಂದ ಸಂತ್ರಸ್ತ ಸುಖದೇವ್ ಸಿಂಗ್ (21) ಚಾಲನೆ ಮಾಡುತ್ತಿದ್ದ ಮರಳು ತುಂಬಿದ ಟ್ರ್ಯಾಕ್ಟರ್ ಟ್ರೈಲರ್ ಗೆ ಡಿಕ್ಕಿ ಹೊಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಗ್ ಹೇಗೋ ಟ್ರಕ್​ನ ಚಕ್ರಕ್ಕೆ ಸಿಲುಕಿಕೊಂಡರು, ಅವರನ್ನು 500 ಮೀಟರ್​ನಷ್ಟು ದೂರ ಎಳೆದೊಯ್ಯಲಾಗಿದೆ.

ಮತ್ತಷ್ಟು ಓದಿ: ಕುಡಿದ ಅಮಲಿನಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಕಾರು ಓಡಿಸಿದ ಪೊಲೀಸ್​​ ಇನ್ಸ್​​ಪೆಕ್ಟರ್: ಆಟೋಗೆ ಡಿಕ್ಕಿ, ಮೂವರಿಗೆ ಗಾಯ

ಚಾಲಕನ ದೇಹವು ತುಂಡು ತುಂಡಾಗಿತ್ತು, ಬಳಿಕ ಟ್ರಕ್ ಚಾಲಕ ಟ್ರಕ್ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಕೋಪಗೊಂಡ ಸ್ಥಳೀಯರು ಸುಖದೇವ್ ತಂದೆ ಜಸ್ವಿಂದರ್ ಸಿಂಗ್ ನೇತೃತ್ವದಲ್ಲಿ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದು, ಆರು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಎಸ್ಪಿ ಮನೋಜ್ ಸಿಂಗ್ ಸಮಾಧಾನಪಡಿಸಿದ ನಂತರ ಧರಣಿ ಹಿಂಪಡೆದರು. ಆರೋಪಿ ಚಾಲಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ