ಬೆಂಗಳೂರು: ಒಡವೆ ಹಾಕೊಂಡು, ಸ್ಕಾರ್ಪಿಯೋ ವಾಹನದಲ್ಲಿ ಬಂದು ಲಕ್ಷಾಂತರ ಮೌಲ್ಯದ ಸೀರೆ ಕದಿಯುತ್ತಿದ್ದ ಮತ್ತೊಂದು ಗ್ಯಾಂಗ್​ ಅರೆಸ್ಟ್​

ಬೆಂಗಳೂರಿನ ಸೀರೆ ಶೋರೂಂ ಮಾಲಿಕರಿಗೆ ತಲೆ ನೋವಾಗಿದ್ದ ಸೀರೆ ಕಳ್ಳರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಹೈಗ್ರೌಂಡ್ಸ್ ಪೊಲೀಸರು ಇಂತಹದೇ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಅಶೋಕನಗರ ಠಾಣೆ ಪೊಲೀಸರು ಮತ್ತೊಂದು ಗ್ಯಾಂಗ್​ ಅನ್ನು ಬಂಧಿಸಿದ್ದಾರೆ.

ಬೆಂಗಳೂರು: ಒಡವೆ ಹಾಕೊಂಡು, ಸ್ಕಾರ್ಪಿಯೋ ವಾಹನದಲ್ಲಿ ಬಂದು ಲಕ್ಷಾಂತರ ಮೌಲ್ಯದ ಸೀರೆ ಕದಿಯುತ್ತಿದ್ದ ಮತ್ತೊಂದು ಗ್ಯಾಂಗ್​ ಅರೆಸ್ಟ್​
ಅಶೋಕ ಪೊಲೀಸ್​ ಠಾಣೆ
Follow us
Shivaprasad
| Updated By: ವಿವೇಕ ಬಿರಾದಾರ

Updated on: Aug 27, 2023 | 7:41 AM

ಬೆಂಗಳೂರು: ನಗರದ ಸೀರೆ ಶೋರೂಂಗಳಲ್ಲಿ (Saree Showroom) ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಕದಿಯುತ್ತಿದ್ದ ಮತ್ತೊಂದು ಗ್ಯಾಂಗ್ ಅನ್ನು ಅಶೋಕನಗರ ಪೊಲೀಸರು (Police) ಬಂಧಿಸಿದ್ದಾರೆ. ಆಂಧ್ರಪ್ರದೇಶದ (Andhra Pradesh) ಗುಂಟೂರು ಮೂಲದವರಾದ ರಮಣ, ರತ್ನಾಲು, ಚುಕ್ಕಮ್ಮ ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಹೈಗ್ರೌಂಡ್ಸ್ ಪೊಲೀಸರು ಇಂತಹದೇ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಬಂಧಿಸಿದ್ದರು. ಈ ಎರಡು ಗ್ಯಾಂಗ್​​ಗಳಿಗೂ ಸೀರೆ ಕಳ್ಳತನದ ಸಾಮ್ಯತೆ ಇದೆ.

ಆರೋಪಿಗಳು ಮೈತುಂಬಾ ಒಡವೆ ಹಾಕೊಂಡು, ಸ್ಕಾರ್ಪಿಯೋ ವಾಹನದಲ್ಲಿ ಸೀರೆ ಮಳಿಗೆಗಳಿಗೆ ಬರುತ್ತಾರೆ. ನಂತರ ಶೋರೂಂನಲ್ಲಿ ಮದುವೆ ಇದೆ ನಮಗೆ ಈ ರೀತಿಯಾದ ಸೀರೆ ಬೇಕು ಅಂತ ಲಕ್ಷಾಂತರ ಮೌಲ್ಯದ ಸೀರೆಗಳನ್ನು ತೋರಿಸಲು ಹೇಳುತ್ತಾರೆ. ಸಿಬ್ಬಂದಿ ಲಕ್ಷಾಂತರ ರೂ. ಮೌಲ್ಯದ ಹತ್ತಾರು ಸೀರೆ‌ ತೋರಿಸುತ್ತಿರುವಾಗಲೇ, ಆರೋಪಿಗಳು ಮೈಮೇಲೆ ಹಾಕೊಂಡು ಚೆಕ್ ಮಾಡುತ್ತಾರೆ.

ಆಗ ಈ ಸೀರೆ ಸರಿ ಕಾಣುತ್ತಿಲ್ಲ ಇನ್ನೂ ವೆರೈಟಿ ವೆರೈಟಿ ಸೀರೆ ತೋರಿಸಿ ಎಂದು ಮಳಿಗೆಯ ಸಿಬ್ಬಂದಿಗೆ ಹೇಳುತ್ತಾರೆ. ಆಗ ಸಿಬ್ಬಂದಿ ಸೀರೆ ತರಲು ಹೋದಾಗ, ಒಬ್ಬಾಕೆ ಸೀರೆಯನ್ನು ಮರೆಯಾಗಿ ತನ್ನ ಹತ್ತಿರ ಇಟ್ಕೊತಾಳೆ. ಮತ್ತೊಬ್ಬಳು ಆ ಸೀರೆಯನ್ನ ಉಟ್ಟ ಸೀರೆಯೊಳಗೆ ಸೇರಿಸಿಕೊಳ್ಳುತ್ತಾಳೆ. ಹೀಗೆ ಲಕ್ಷಾಂತರ ಮೌಲ್ಯದ ಸೀರೆಗಳನ್ನು ಕದ್ದು ಹೋಗುತ್ತಿರುವಾಗ, ಮಹಿಳೆಯ ಕಾಲುಗಳ ಒಳಗಿನಿಂದ ಸೀರೆ ಕೆಳೆಗೆ ಬಿದ್ದಿದೆ. ಇದನ್ನು ಕಂಡ ಸೆಕ್ಯೂರಿಟಿ ಗಾರ್ಡ್​ ಅನುಮಾನಗೊಂಡು ಮಾಲೀಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರ ರೀತಿ ಎಂಟ್ರಿಕೊಟ್ಟು ಲಕ್ಷಾಂತರ ಮೌಲ್ಯದ ಸೀರೆ ಕಳುವು ಮಾಡುತ್ತಿದ್ದ ಆರೋಪಿಗಳ ಬಂಧನ

ಆಗ ಮಾಲಿಕರು ಸಿಸಿಟಿವಿ ಪರಿಶೀಲಿಸಿದಾಗ, ಸೀರೆ ಕದ್ದಿರುವುದು ಬಯಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಗುಂಟೂರು ಗ್ಯಾಂಗ್ ನಗರದಲ್ಲಿ 10 ಕ್ಕೂ ಹೆಚ್ಚು ಕಡೆ ಕಳವು ಮಾಡಿರುವುದು ತಿಳಿದುಬಂದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ