ಶಿವಮೊಗ್ಗ: ಗಲಾಟೆ ಮಾಡಬೇಡಿ ಎಂದಿದಕ್ಕೆ 15 ಜನ ಯುವಕರ ತಂಡದಿಂದ ಮೂವರ ಮೇಲೆ ಹಲ್ಲೆ, ಸ್ಥಳದಲ್ಲಿ ಬಿಗಿ ಭದ್ರತೆ

ಯುವಕರ ತಂಡವೊಂದು ಯಾರನ್ನೋ ಹುಡುಕಿಕೊಂಡು ಕೂಗಾಡಿಕೊಂಡು ಬಂದಿತ್ತು. ಈ ವೇಳೆ ತಿಮ್ಮಪ್ಪ ಅವರು ಯುವಕರಿಗೆ ಬೈದು ಬುದ್ಧಿ ಹೇಳಿದ್ದಾರೆ. ಆಗ ಆಕ್ರೋಶಗೊಂಡ ಯುವಕರು ತಿಮ್ಮಪ್ಪ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ತಿಮ್ಮಪ್ಪರ ಪುತ್ರ ದರ್ಶನ್(19) ಹಾಗೂ ಮನು ಎಂಬ ಯುವಕರ ಮೇಲೆ ಕೂಡ ಹಲ್ಲೆ ನಡೆದಿದೆ.

ಶಿವಮೊಗ್ಗ: ಗಲಾಟೆ ಮಾಡಬೇಡಿ ಎಂದಿದಕ್ಕೆ 15 ಜನ ಯುವಕರ ತಂಡದಿಂದ ಮೂವರ ಮೇಲೆ ಹಲ್ಲೆ, ಸ್ಥಳದಲ್ಲಿ ಬಿಗಿ ಭದ್ರತೆ
ಹಲ್ಲೆ ನಡೆದ ಸ್ಥಳದಲ್ಲಿ ಭದ್ರತೆ
Follow us
Basavaraj Yaraganavi
| Updated By: ಆಯೇಷಾ ಬಾನು

Updated on: Aug 27, 2023 | 7:22 AM

ಶಿವಮೊಗ್ಗ, ಆ.27: ಇಲ್ಲಿ ಗಲಾಟೆ ಮಾಡಬೇಡಿ, ಹೋಗ್ರೋ ಎಂದಿದ್ದಕ್ಕೆ ತಿಮ್ಮಪ್ಪ ಎಂಬುವವರಿಗೆ ಅನ್ಯಕೋಮಿನ ಯುವಕರು ಹಿಗ್ಗಾಮುಗ್ಗಾ ಥಳಿಸಿ(Assault) ದೊಣ್ಣೆಯಿಂದ ತಲೆ ಹಿಂಭಾಗ ಹಲ್ಲೆ ನಡೆಸಿದ್ದಾರೆ. ಸುಮಾರು 15 ಜನ ಯುವಕರ ತಂಡ ತಿಮ್ಮಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಗೋಪಾಳ ಬಡಾವಣೆಯ ಕೊರಮರಕೇರಿ ಮಾರಿಯಮ್ಮ ದೇಗುಲ ಬಳಿ ಘಟನೆ ನಡೆದಿದೆ.

ಯುವಕರ ತಂಡವೊಂದು ಯಾರನ್ನೋ ಹುಡುಕಿಕೊಂಡು ಕೂಗಾಡಿಕೊಂಡು ಬಂದಿತ್ತು. ಈ ವೇಳೆ ತಿಮ್ಮಪ್ಪ ಅವರು ಯುವಕರಿಗೆ ಬೈದು ಬುದ್ಧಿ ಹೇಳಿದ್ದಾರೆ. ಆಗ ಆಕ್ರೋಶಗೊಂಡ ಯುವಕರು ತಿಮ್ಮಪ್ಪ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ತಿಮ್ಮಪ್ಪರ ಪುತ್ರ ದರ್ಶನ್(19) ಹಾಗೂ ಮನು ಎಂಬ ಯುವಕರ ಮೇಲೆ ಕೂಡ ಹಲ್ಲೆ ನಡೆದಿದೆ. ಡ್ರ್ಯಾಗರ್​ನಿಂದ ದರ್ಶನ್ ತೋಳಿನ ಭಾಗಕ್ಕೆ ದಾಳಿ ಮಾಡಲಾಗಿದ್ದು ಮತ್ತೊಬ್ಬ ಯುವಕ ಮನು ಎಂಬಾತನ ಮೇಲೂ ಭೀಕರ ಹಲ್ಲೆ ನಡೆದಿದೆ. ಬಳಿಕ ಮೂವರನ್ನೂ ಥಳಿಸಿ ಯುವಕರ ತಂಡ ಪರಾರಿಯಾಗಿದೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ದೌಡಾಯಿಸಿ ದೂರು ದಾಖಲಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಗ್ಯಾಸ್​ ಸಿಲಿಂಡರ್​​ ಕಳ್ಳತನ: ಇಬ್ಬರ ಬಂಧನ

ಚಲಿಸುತ್ತಿದ್ದ ಕ್ಯಾಂಟರ್​​ನ​​ ಚಕ್ರದ ಕೆಳಗೆ ಬಿದ್ದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಚಲಿಸುತ್ತಿದ್ದ ಕ್ಯಾಂಟರ್​​ನ​​ ಚಕ್ರದ ಕೆಳಗೆ ಬಿದ್ದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ಬಳಿ ತಡರಾತ್ರಿ ನಡೆದಿದೆ. ಆತ್ಮಹತ್ಯೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿ ರಾತ್ರಿ 10 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ ಎಂದಿನಂತೆ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಈ‌ ವೇಳೆ ಕ್ಯಾಂಟರ್ ಆಗಮನಕ್ಕಾಗಿಯೇ ವ್ಯಕ್ತಿ ರಸ್ತೆ ಬದಿ ಕಾದು ನಿಂತಿದ್ದ. ಕ್ಯಾಂಟರ್ ಮುಂದೆ ಸಾಗುತ್ತಿದ್ದಂತೆ ಹಿಂಬದಿ ಚಕ್ರದ ಕೆಳಗಡೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಗುರುತು ಹಾಗೂ ಆತ್ಮಹತ್ಯೆಗೆ ಕಾರಣ ಪತ್ತೆಯಾಗಿಲ್ಲ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?