ಬೆಂಗಳೂರಿನಲ್ಲಿ ಸರಣಿ ಗ್ಯಾಸ್​ ಸಿಲಿಂಡರ್​​ ಕಳ್ಳತನ: ಇಬ್ಬರ ಬಂಧನ

ಗೋವಿಂದರಾಜ ನಗರ, ರಾಜಾಜಿ ನಗರ, ಕಾಮಾಕ್ಷಿ ಪಾಳ್ಯ, ಮಾಗಡಿ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸರಣಿ ಗ್ಯಾಸ್​ ಸಿಲಿಂಡರ್​​ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಸರಣಿ ಗ್ಯಾಸ್​ ಸಿಲಿಂಡರ್​​ ಕಳ್ಳತನ: ಇಬ್ಬರ ಬಂಧನ
ಜಪ್ತಿ ಮಾಡಿದ ಗ್ಯಾಸ್​ ಸಿಲಿಂಡರ್​
Follow us
|

Updated on: Aug 26, 2023 | 3:17 PM

ಬೆಂಗಳೂರು, ಆಗಸ್ಟ್​ 26: ನಗರದ ವಿವಿಧ ಭಾಗಗಳಲ್ಲಿ ಸರಣಿ ಗ್ಯಾಸ್​ ಸಿಲಿಂಡರ್ (gas cylinders)​​ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಲೋಕೇಶ್ ಮತ್ತು ಹೇಮಂತ್​ ಬಂಧಿತರು. ಗೋವಿಂದರಾಜ ನಗರ, ರಾಜಾಜಿ ನಗರ, ಕಾಮಾಕ್ಷಿ ಪಾಳ್ಯ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಗ್ಯಾಸ್​ ಸಿಲಿಂಡರ್​​ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತರಿಂದ ಕಳ್ಳತನ ಮಾಡಿದ 20 ಗ್ಯಾಸ್​ ಸಿಲಿಂಡರ್​ಗಳನ್ನು ಜಪ್ತಿ ಮಾಡಲಾಗಿದೆ. ಗೋವಿಂದರಾಜ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ.

ನಗರದ ಹೊರವಲಯದಲ್ಲಿರುವ ಮನೆಗಳನ್ನು ಟಾರ್ಗೆಟ್​ ಮಾಡುತ್ತಿದ್ದ ಇವರು, ಮೊದಲು ಪಕ್ಕಾ ಪ್ಲ್ಯಾನ್​ ಮಾಡಿ ನಂತರ ಗ್ಯಾಸ್​ ಸಿಲಿಂಡರ್​ ಕಳ್ಳತನ ಮಾಡಿ, ಅದನ್ನು ಬೈಕ್​ ಮೂಲಕ ಸಾಗಿಸುತ್ತಿದ್ದರು. ಲೋಕೇಶ್ ಈ ಹಿಂದೆ ಕೂಡ ಗ್ಯಾಸ್ ಸಿಲಿಂಡರ್​​ ಕಳ್ಳತನ ಮಾಡಿ ಜೈಲಿಗೆ ಹೋಗಿಬಂದಿದ್ದು, ಮತ್ತೆ ಅದೇ ಕೆಲಸ ಮಾಡುತ್ತಿದ್ದ.

ಆಡುಗೋಡಿ ಮೆಸ್​ನ ಗ್ಯಾಸ್ ಲೀಕ್​ನಿಂದ ಸ್ಪೋಟ ಪ್ರಕರಣ: ಮೆಸ್​ ಮಾಲೀಕನನ್ನು ಬಂಧಿಸಿದ ಪೊಲೀಸ್​​

ಆಡುಗೋಡಿ ಮೆಸ್​ ಒಂದರಲ್ಲಿ ಗ್ಯಾಸ್ ಲೀಕ್​ನಿಂದ ಸ್ಪೋಟಗೊಂಡು, ಓರ್ವ ವ್ಯಕ್ತಿ ಮೃತಪಟ್ಟಿರುವಂತಹ ಘಟನೆ ಇದೇ ತಿಂಗಳು 24ರಂದು ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರವಿ ಮೃತ ವ್ಯಕ್ತಿ. ಜೊತೆಗೆ ಮೆಸ್​ನ ಇಬ್ಬರು ಕೆಲಸಗಾರರಿಗೆ ಸುಟ್ಟಗಾಯಗಳಾಗಿತ್ತು. ಸದ್ಯ ಮೆಸ್​ನ ಮಾಲೀಕ ಜಗದೀಶ್ ರೆಡ್ಡಿಯನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಮುಂಜಾಗೃತ ಕ್ರಮ ಕೈಗೊಳ್ಳದೆ ಅವಘಡಕ್ಕೆ ಕಾರಣ ಹಿನ್ನಲೆ ಸ್ಥಳೀಯರ ದೂರು ಆಧರಿಸಿ ಎಫ್​ಐಆರ್​ ಹಾಕಲಾಗಿದೆ.

ಇದನ್ನೂ ಓದಿ: ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ: ಮಕ್ಕಳು ಸಾವು

ಮೈಸೂರು: ಎರಡು ಬೈಕ್​ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ನಡೆದಿದೆ. ಕುರುಬೂರು ಗ್ರಾಮದ ನಾಗರಾಜು (80)ಮೃತ ದುರ್ದೈವಿ. ಘಟನೆ ಖಂಡಿಸಿ ಮೈಸೂರು ಚಾಮರಾಜನಗರ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ.

ಈ ಹಿಂದೆ ಅದೇ ಜಾಗದಲ್ಲಿ ಕಾರ್ ಮತ್ತು ಬಸ್ ನಡುವೆ ಅಪಘಾತಗೊಂಡು 10ಜನ ಸಾವನ್ನಪ್ಪಿದ್ದರು. ಕುರುಬೂರು ಗ್ರಾಮದ ಬಳಿ ಸಾಕಷ್ಟು ಅಪಘಾತವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ