AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಅಕ್ರಮವಾಗಿ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ; ವಿದ್ಯಾರ್ಥಿ ಸಾವು

ರಾಯಚೂರು ನಗರದ SRPS ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೋರ್ವ ಕೊತ್ತದೊಡ್ಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದು, ಅದರ ರಭಸಕ್ಕೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ ಧಾರುಣ ಘಟನೆ ನಡೆದಿದೆ.

ರಾಯಚೂರು: ಅಕ್ರಮವಾಗಿ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ; ವಿದ್ಯಾರ್ಥಿ ಸಾವು
ರಾಯಚೂರಿನಲ್ಲಿ ಟ್ರ್ಯಾಕ್ಟರ್​ ಡಿಕ್ಕಿಯಾಗಿ ಬಾಲಕ ಸಾವು
ಭೀಮೇಶ್​​ ಪೂಜಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 25, 2023 | 5:25 PM

Share

ರಾಯಚೂರು, ಆ.25: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿಯಾಗಿ ವಿದ್ಯಾರ್ಥಿ (Student) ಸಾವನ್ನಪ್ಪಿದ ಘಟನೆ ರಾಯಚೂರು (Raichur) ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್​ ಡಿಕ್ಕಿಯ ರಭಸಕ್ಕೆ ಮಲ್ಲೇಶ್(18) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಇವರು ರಾಯಚೂರು ನಗರದ SRPS ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಕೊತ್ತದೊಡ್ಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಕ್ರಮ ಮರಳು ಸಾಗಾಟಕ್ಕೆ ನಡೆದುಕೊಂಡು ಬರ್ತಿದ್ದ ವಿದ್ಯಾರ್ಥಿ ಬಲಿ

ಇನ್ನು ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲಾಗುತ್ತಿದೆ. ಆದರೂ ಕೂಡ ಜಿಲ್ಲಾಡಳಿತ ಮಾತ್ರ ಈ ಬಗ್ಗೆ ತಲೆಕೆಡಸಿಕೊಂಡಿಲ್ಲ. ಇದೀಗ ಅಕ್ರಮ ಮರಳು ತುಂಬಿಕೊಂಡು ಇಡಪನೂರು ಕಡೆಯಿಂದ ರಾಯಚೂರು ನಗರಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ವೇಗವಾಗಿ ಚಲಿಸುವ ವೇಳೆ ವಿದ್ಯಾರ್ಥಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದ್ದು, ಬಳಿಕ ಟ್ರ್ಯಾಕ್ಟರ್ ಚಾಲಕ ಆರೋಪಿ ನಾಗರಾಜ್ ಕೊತ್ತದೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು ಈ ಮರಳು ತುಂಬಿದ್ದ ಟ್ರ್ಯಾಕ್ಟರ್​ಗಳು ರಾಮಣ್ಣ ಎಂಬುವರಿಗೆ ಸೇರಿದ್ದಾಗಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೊಪ್ಪಳ: RTO ಅಧಿಕಾರಿಗಳಿಗೆ ಹೆದ್ದಾರಿಯಲ್ಲಿ ದುಡ್ಡಿನ ಸುರಿಮಳೆ, ವಸೂಲಿಗೆ ಬ್ರೇಕ್ ಹಾಕುವವರೇ ಇಲ್ಲ, ಅದರಿಂದ ಅಪಘಾತಗಳೂ ಹೆಚ್ಚುತ್ತಿವೆ!

ಹೆದ್ದಾರಿ ಮೇಲೆ ಹಿಮ್ಮುಖವಾಗಿ ಟ್ರಾಕ್ಟರ್ ಓಡಿಸಿ ಕೇಸ್ ಹಾಕಿಸಿಕೊಂಡ ಯುವಕ

ಯಾದಗಿರಿ: ಜಿಲ್ಲೆಯ ಶಹಾಪುರ‌ ತಾಲೂಕಿನ ದೋರನಹಳ್ಳಿ ಗ್ರಾಮದ ಬಸಲಿಂಗಪ್ಪ ಎಂಬಾತ ಹೆದ್ದಾರಿ ಮೇಲೆ ಹಿಮ್ಮುಖವಾಗಿ ಟ್ರಾಕ್ಟರ್ ಓಡಿಸಿ ಕೇಸ್ ಹಾಕಿಸಿಕೊಂಡಿದ್ದಾನೆ. ಇತ ನಾಗರಪಂಚಮಿ ದಿನ ವೇಗವಾಗಿ ಹಿಮ್ಮುಖವಾಗಿ ಟ್ರಾಕ್ಟರ್ ಓಡಿಸಿ 1.4 ಲಕ್ಷ ಗೆದ್ದಿದ್ದ. ಇದೀಗ ರಾಜ್ಯ ಹೆದ್ದಾರಿ ಮೇಲೆ ಹಿಮ್ಮುಖವಾಗಿ ಟ್ರಾಕ್ಟರ್ ಓಡಿಸಿದ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ವೈರಲ್ ಆಗಿದ್ದಕ್ಕೆ ವಡಗೇರ ಠಾಣೆಯ ಪೊಲೀಸರಿಂದ ಐಪಿಸಿ ಸೆಕ್ಷನ್​ 279, 336 ಅಡಿ ಕೇಸ್ ದಾಖಲು ಮಾಡಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ