
ಲಾಹೋರ್, ಸೆಪ್ಟೆಂಬರ್ 24: ತಾಳ್ಮೆಗೂ ಒಂದು ಮಿತಿ ಇರುತ್ತದೆ. ತಾಳ್ಮೆಯ ಕಟ್ಟೆ ಒಡೆದರೆ ಎಂಥವರೂ ಸಿಡಿದುಬೀಳುತ್ತಾರೆ ಎಂಬುದನ್ನು ಪಾಕಿಸ್ತಾನದ ಬಾಲಕಿಯೊಬ್ಬಳು ನಿದರ್ಶನವಾಗಿದ್ದಾಳೆ. ಕಳೆದ ಮೂರು ತಿಂಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ ಸ್ವಂತ ಅಪ್ಪನನ್ನೇ 14 ವರ್ಷದ ಬಾಲಕಿ ಕೊಂದುಹಾಕಿದ್ದಾಳೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ನಲ್ಲಿ (Pakistan’s Punjab) ಈ ಘಟನೆ ನಡೆದಿದೆ. ಪೊಲೀಸರಿಗೆ ಈ ಬಾಲಕಿ ನೀಡಿರುವ ಹೇಳಿಕೆ ಪ್ರಕಾರ, ಈಕೆಯ ಅಪ್ಪ ಕಳೆದ 3 ತಿಂಗಳುಗಳಿಂದ ರೇಪ್ (Rape Case) ಮಾಡುತ್ತಿದ್ದನೆನ್ನಲಾಗಿದೆ. ಲಾಹೋರ್ನ ಗುಜ್ಜರ್ಪುರ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಅಪ್ಪನ ಗನ್ ಅನ್ನೇ ಬಳಸಿ ಈ ಹುಡುಗಿ ಗುಂಡಿಕ್ಕಿದ್ದಾಳೆ. ಅಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ಬಾಲಕಿ ನೀಡಿರುವ ಹೇಳಿಕೆಯಂತೆ ಅಪ್ಪನಿಂದಾಗಿ ಈ ಹುಡುಗಿ ನರಕ ಅನುಭವಿಸುತ್ತಿದ್ದಳು. ರೇಪಿಸ್ಟ್ ಅಪ್ಪನನ್ನು ಕೊಲ್ಲಲು ನಿರ್ಧರಿಸಿದ ಈಕೆ ಅಪ್ಪನ ಗನ್ನಿಂದಲೇ ಆತನನ್ನು ಶೂಟ್ ಮಾಡಿ ಕೊಂದಿದ್ದಾಳೆ’ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಸೊಹೇಲ್ ಕಜ್ಮಿ ಹೇಳಿದ್ದಾರೆ.
ಇದನ್ನೂ ಓದಿ: ಮದುವೆಯಾಗಬೇಕಿದ್ದ ಯುವಕನೊಂದಿಗೆ ವಾಕಿಂಗ್ಗೆ ತೆರಳಿದ್ದಾಗ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಐವರ ಬಂಧನ
ಇವರ ಕುಟುಂಬದವರು ಘಟನೆ ಸಂಭವಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡದೇ ಮುಚ್ಚಿಟ್ಟು ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಅದರೆ, ನೆರೆಹೊರೆಯ ಮನೆಯವರು ಈ ಘಟನೆ ಬಗ್ಗೆ ಪೊಲೀಸರನ್ನು ಅಲರ್ಟ್ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಾಲಕಿಯ ತಾಯಿ, ಸಹೋದರ ಮತ್ತಿತರರನ್ನು ಬಂಧಿಸಿದರು.
ಈ ಬಾಲಕಿ ಮೇಲೆ ಪ್ರಕರಣ ದಾಖಲಾಗಲಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ಕೈಗೊಂಡಿದ್ದಾರೆ ಎಂದು ಕಜ್ಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಯೆಲ್ಲಾ ಕಚ್ಚಿ ಗಾಯಗೊಳಿಸಿದ 50ಕ್ಕೂ ಹೆಚ್ಚು ಇಲಿಗಳು, ಸಾವು ಬದುಕಿನ ನಡುವೆ ಮಗುವಿನ ಹೋರಾಟ
ಮೊನ್ನೆ ಶುಕ್ರವಾರ ಪಾಕಿಸ್ತಾನದ ಕೋರ್ಟ್ವೊಂದು ರೇಪ್ ಆರೋಪಿಯೊಬ್ಬನಿಗೆ ಮರಣದಂಡನೆ ವಿಧಿಸಿತ್ತು. ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿ ರಫೀಕ್ಗೆ ಅತಿದೊಡ್ಡ ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶ ಮಿಯಾನ್ ಶಾಹಿದ್ ಜಾವೇದ್ ಅವರು ತೀರ್ಪು ನೀಡಿದ್ದರು.
ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ