ದೆಹಲಿಯಲ್ಲಿ ಹತ್ಯೆಗೀಡಾದ ಬಾಲಕಿ ಆ ದಿನ ಸಂಜೆ ಹೊರಹೋಗಿದ್ದೇಕೆ?: ಸಂತ್ರಸ್ತೆಯ ಗೆಳತಿ ಹೀಗಂತಾರೆ

ನೀತು ಮಗಳ ಹುಟ್ಟುಹಬ್ಬಕ್ಕಾಗಿ ಭಾನುವಾರ ಇವರಿಬ್ಬರು ಕೆಲವು ವಸ್ತುಗಳನ್ನು ಖರೀದಿಸಲು ಹೋಗಿದ್ದರು ಎಂದು ನೀತು ಸುದ್ದಿಗಾರರಿಗೆ ತಿಳಿಸಿದರು. ಹೊರಗೆ ಹೋಗಿ ಬಂದ ಮೇಲೆ ಮನೆಯಲ್ಲಿ ಇಬ್ಬರೂ ಸ್ನಾನ ಮಾಡಿ ಮತ್ತೊಮ್ಮೆ ಹೊರಗೆ ಹೋಗಿದ್ದಾರೆ. ಅಲ್ಲಿ ಅವರಿಬ್ಬರೂ ಎರಡು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿದ್ದಾರೆ.

ದೆಹಲಿಯಲ್ಲಿ ಹತ್ಯೆಗೀಡಾದ ಬಾಲಕಿ ಆ ದಿನ ಸಂಜೆ ಹೊರಹೋಗಿದ್ದೇಕೆ?: ಸಂತ್ರಸ್ತೆಯ ಗೆಳತಿ ಹೀಗಂತಾರೆ
ಸಂತ್ರಸ್ತೆಯ ಗೆಳತಿ ನೀತು

Updated on: May 29, 2023 | 7:39 PM

ದೆಹಲಿಯ (Delhi) ಶಾದಾಬಾದ್ ಪ್ರದೇಶದಲ್ಲಿ (Shadabad area) ಅಪ್ರಾಪ್ತ ಬಾಲಕಿಯ ಭೀಕರ ಹತ್ಯೆ (Delhi Murder) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭಾನುವಾರ ಸಂಜೆ, 20 ವರ್ಷದ ಸಾಹಿಲ್ ಎಂಬ ಯುವಕ ತನ್ನ 16 ವರ್ಷದ ಗೆಳತಿಯನ್ನು ಬರ್ಬರವಾಗಿ ಇರಿದು ಕಲ್ಲಿನಿಂದ ಹೊಡೆದು ಕೊಂದಿದ್ದ ಘಟನೆ ಅತ್ಯಂತ ಬರ್ಬರ, ಪೈಶಾಚಿಕವಾಗಿತ್ತು. ಘೋರ ಅಪರಾಧದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಟಿವಿ9 ಭಾರತ್ ವರ್ಷ್ ಬಿಡುಗಡೆ ಮಾಡಿದ ವಿಶೇಷ ವಿಡಿಯೊದಲ್ಲಿ, ಅಪ್ರಾಪ್ತ ಬಾಲಕಿ ಕಳೆದ ಕೆಲವು ವಾರಗಳಿಂದ ನೀತು ಎಂಬ ಯುವತಿಯೊಂದಿಗೆ ವಾಸಿಸುತ್ತಿದ್ದಳು ಎಂದು ಹೇಳಲಾಗಿದೆ. ನೀತು ಅವರ ಪತಿ ಊರಲ್ಲಿರಲಿಲ್ಲ, ಹಾಗಾಗಿ ಬಾಲಕಿ ನೀತು ಜತೆ ವಾಸವಾಗಿದ್ದಳು.

ನೀತು ಮಗಳ ಹುಟ್ಟುಹಬ್ಬಕ್ಕಾಗಿ ಭಾನುವಾರ ಇವರಿಬ್ಬರು ಕೆಲವು ವಸ್ತುಗಳನ್ನು ಖರೀದಿಸಲು ಹೋಗಿದ್ದರು ಎಂದು ನೀತು ಸುದ್ದಿಗಾರರಿಗೆ ತಿಳಿಸಿದರು. ಹೊರಗೆ ಹೋಗಿ ಬಂದ ಮೇಲೆ ಮನೆಯಲ್ಲಿ ಇಬ್ಬರೂ ಸ್ನಾನ ಮಾಡಿ ಮತ್ತೊಮ್ಮೆ ಹೊರಗೆ ಹೋಗಿದ್ದಾರೆ. ಅಲ್ಲಿ ಅವರಿಬ್ಬರೂ ಎರಡು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿದ್ದಾರೆ.

ನೀವು ಮನೆಗೆ ಹೋಗಿ, ನಾನು ನನ್ನ ಸ್ನೇಹಿತೆ ಭಾವನಾ ಮನೆಗೆ ಹೋಗುವುದಾಗಿ ಹೇಳಿದ್ದಳು. ಇದಾದ ನಂತರ ಆಕೆ ಮನಗೆ ಹಿಂತಿರುಗಲೇ ಇಲ್ಲ ಎಂದು ಗದ್ಗತಿರಾಗಿ ನೀತು ನುಡಿದಿದ್ದಾರ. ಆರೋಪಿಯ ಬಗ್ಗೆ ಕೇಳಿದಾಗ, ಅವನ ಹೆಸರು ಸಾಹಿಲ್. ಸಂತ್ರಸ್ತೆ ಸುಮಾರು ಐದು-ಆರು ತಿಂಗಳಿನಿಂದ ಡೇಟಿಂಗ್ ಮಾಡುತ್ತಿದ್ದಳು..ಆದರೆ, ಇಬ್ಬರಿಗೂ ಮೂರ್ನಾಲ್ಕು ವರ್ಷಗಳಿಂದ ಪರಿಚಯವಿತ್ತು ಎಂದು ನೀತು ಹೇಳಿದ್ದಾರೆ.

ಸಂತ್ರಸ್ತೆ ನನಗೆ ತುಂಬಾ ಹತ್ತಿರವಾದ ನಂತರವೇ ಅವರ ಸಂಬಂಧದ ಬಗ್ಗೆ ನನಗೆ ತಿಳಿದಿದ್ದು. ಮೃತರು ಸಾಹಿಲ್ ಜೊತೆ ಮಾತನಾಡಲು ನಿರಾಕರಿಸಿದ್ದರಿಂದ ಇಬ್ಬರೂ ಸ್ವಲ್ಪ ಸಮಯದಿಂದ ಜಗಳವಾಡುತ್ತಿದ್ದರು.

ಆಕೆ ನನ್ನ ಮುಂದೆ ಈ ಬಗ್ಗೆ ಹೇಳದೇ ಇರುವ ಕಾರಣ ಅವರ ಸಂಬಂಧದ ಬಗ್ಗೆ ನಾನು ಕುಟುಂಬದವರ ಮುಂದೆ ಹೇಳಿರಲಿಲ್ಲ. ಗುಡಿಯಾ ಎಂಬ ಸ್ನೇಹಿತೆ ಮೂಲಕ ಸಂತ್ರಸ್ತೆ ನನಗೆ ಪರಿಚಿತವಾಗಿದ್ದಳು.

ಇದನ್ನೂ ಓದಿ: Delhi murder: ದೆಹಲಿಯಲ್ಲಿ 16ರ ಹರೆಯದ ಬಾಲಕಿಯ ಬರ್ಬರ ಕೊಲೆ ಮಾಡಿದ ಆರೋಪಿ ಸಾಹಿಲ್ ಬಂಧನ

ಏತನ್ಮಧ್ಯೆ, ಟಿವಿ9 ಭಾರತವರ್ಷ್ ಜತೆ ಮಾತನಾಡಿದ ಸಂತ್ರಸ್ತೆಯ ತಾಯಿ ಆರೋಪಿಯನ್ನು ನೇಣಿಗೇರಿಸಬೇಕು ಎಂದು ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ